ರಾಜಸ್ಥಾನ : ರಾಜಸ್ಥಾನದ ಚುರು ಜಿಲ್ಲೆಯ ಭಾನುಡಾ ಗ್ರಾಮದ ಬಳಿ ಭಾರತೀಯ ವಾಯುಪಡೆಯ ಜಾಗ್ವಾರ್ ಯುದ್ಧ ವಿಮಾನ ಪತನಗೊಂಡಿದ್ದು, ಪೈಲಟ್ ಸೇರಿ ಇಬ್ಬರು ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ವಿಮಾನದ ಅವಶೇಷಗಳು ಪೈಲಟ್ ದೇಹದ ಜೊತೆಗೆ ಹೊಲವೊಂದರಲ್ಲಿ ಪತ್ತೆಯಾಗಿವೆ. ಮೃತದೇಹ ತೀವ್ರವಾಗಿ ಹಾನಿಗೊಳಗಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅಪಘಾತದಲ್ಲಿ ಸಾವನ್ನಪ್ಪಿದ ಪೈಲಟ್ ಮತ್ತು ಇನ್ನೊಬ್ಬ ವ್ಯಕ್ತಿಯ ಗುರುತುಗಳನ್ನು ಸೇನೆ ಮತ್ತು ಸ್ಥಳೀಯ ಆಡಳಿತವು ಇನ್ನೂ ಅಧಿಕೃತವಾಗಿ ದೃಢಪಡಿಸಿಲ್ಲ.
ಅಪಘಾತದಿಂದಾಗಿ ಹತ್ತಿರದ ಹೊಲಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅದನ್ನು ನಂದಿಸಲು ಪ್ರಯತ್ನಿಸಿದ್ದೇವೆ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ.ಇತ್ತೀಚೆಗಷ್ಟೇ ಗುಜರಾತ್ನ ಅಹಮದಾಬಾದ್ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ 170ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದರು.
- ತರಗತಿಯಲ್ಲೇ ಪ್ರಪೋಸ್ ಮಾಡಿದ ಪ್ರೊಫೆಸರ್‌ಗೆ ವಿದ್ಯಾರ್ಥಿನಿಯಿಂದ ಚಪ್ಪಲಿ ಏಟು
- ಭಾರೀ ಮೊತ್ತಕ್ಕೆ ಆರ್‌ಸಿಬಿ ಸೆಲೆ ಆದ ಬೆನ್ನಲ್ಲೇ ವಿಜಯ್ ಮಲ್ಯ ಭಾವನಾತ್ಮಕ ಪೋಸ್ಟ್
- ಭಾರತ ಸೇರಿ ಮಿತ್ರ ರಾಷ್ಟ್ರಗಳ ಹಡಗುಗಳಿಗೆ ಹಾರ್ಮುಜ್ ಜಲಸಂಧಿ ತೆರೆದ ಇರಾನ್
- ಮಂಡ್ಯ: ಕಸದಲ್ಲಿ ಸಿಕ್ಕ ಚಿನ್ನದ ಉಂಗುರ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಪೌರಕಾರ್ಮಿಕರು
- ”ನನ್ನನ್ನೇ ಸುಪ್ರೀಂ ಲೀಡರ್ ಮಾಡಲು ಮುಂದಾಗಿತ್ತು ಇರಾನ್, ನಾನು ಒಪ್ಪಲಿಲ್ಲ” : ಟ್ರಂಪ್

