-ಪಕ್ಷದಿಂದ ಪ್ರಜ್ವಲ್ ಉಚ್ಚಾಟನೆ ಬಗ್ಗೆ ಚರ್ಚೆ ಸಾಧ್ಯತೆ
ಬೆಂಗಳೂರು: ಜೆಡಿಎಸ್‌ನ (JDS)ಕೋರ್ ಕಮಿಟಿ ಸಭೆ ಇಂದು ನಡೆಯಲಿದ್ದು, ಸಂಸದ ಪ್ರಜ್ವಲ್ ರೇವಣ್ಣ(Prajwal Revanna) ಉಚ್ಚಾಟನೆ ಬಗ್ಗೆ ಸಭೆಯಲ್ಲಿ ಮಹತ್ವದ ಚರ್ಚೆ ನಡೆಯುವ ಸಾಧ್ಯತೆ ಇದೆ. ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ (Devegeowda) ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ(Kumaraswamy) ನೇತೃತ್ವದಲ್ಲಿ ಸಭೆ ನಡೆಯಲಿದೆ.
ಪ್ರಜ್ವಲ್ ರೇವಣ್ಣ ಅವರನ್ನು ಈಗಾಗಲೇ ಪಕ್ಷದ ವರಿಷ್ಠರ ಆದೇಶದ ಮೇರೆಗೆ ಅಮಾನತು ಮಾಡಲಾಗಿದೆ. ಅಮಾನತು ಬದಲಾಗಿ ಪಕ್ಷಕ್ಕೆ ಆಗಿರುವ ಮುಜುಗರದಿಂದ ತಪ್ಪಿಸಿಕೊಳ್ಳಲು ಉಚ್ಚಾಟನೆ ಮಾಡುವ ಬಗ್ಗೆ ಸಭೆಯಲ್ಲಿ ಚರ್ಚಿಸುವ ಸಾಧ್ಯತೆ ಇದೆ. ಇದನ್ನೂ ಓದಿ: ಲೇಡಿಸ್ ಟಾಯ್ಲೆಟ್‌ನಲ್ಲಿ ಮೊಬೈಲ್‌ಯಿಟ್ಟು ಚಿತ್ರೀಕರಣಕ್ಕೆ ಯತ್ನ-ಪೊಲೀಸರಿಂದ ಅಪ್ರಾಪ್ತನ ಬಂಧನ
ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಂದ ಪ್ರಜ್ವಲ್ ವಿರುದ್ಧ ಕಠಿಣ ಶಿಕ್ಷೆ ಬಗ್ಗೆ ಪ್ರಸ್ತಾಪ ಬೆನ್ನಲ್ಲೇ ಪ್ರಜ್ವಲ್ ಉಚ್ಚಾಟನೆ ಬಗ್ಗೆ ದೊಡ್ಡ ಚರ್ಚೆ ನಡೆಯುತ್ತಿದೆ. ಉಚ್ಚಾಟನೆ ಮಾಡುವುದು ಪಕ್ಕಾ. ಆದರೆ ಫಲಿತಾಂಶ ಮುಂಚೆಯೋ ಅಥವಾ ನಂತರವೋ ಎನ್ನುವುದು ಕುತೂಹಲ ಮೂಡಿಸಿದೆ.ಇದನ್ನೂ ಓದಿ: ಡಿಕೆ ಶಿವಕುಮಾರ್ ಜತೆ ಪೋನ್‌ನಲ್ಲಿ ಮಾತಾಡಿದ್ದು ನಿಜ: ಶಿವರಾಮೇಗೌಡ
ಯಾವಾಗ ಉಚ್ಚಾಟನೆ ಮಾಡಬೇಕು ಎಂಬುದರ ಕುರಿತು ಇವತ್ತಿನ ಸಭೆಯಲ್ಲಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಇದರ ಜೊತೆ ರಾಜ್ಯಾದ್ಯಂತ ಡಿ.ಕೆ.ಶಿವಕುಮಾರ್ ವಿರುದ್ಧ ಹೋರಾಟಕ್ಕೂ ಇಂದಿನ ಕೋರ್ ಕಮಿಟಿಯಲ್ಲಿ ನಿರ್ಣಯ ತೆಗೆದುಕೊಳ್ಳುವ ಸಾಧ್ಯತೆ ಇದೆ. ಇದನ್ನೂ ಓದಿ: ಕಿಡ್ನಾಪ್ ಪ್ರಕರಣ: 7 ದಿನದವರೆಗೆ ರೇವಣ್ಣನಿಗೆ ಜೈಲೇ ಗತಿ

