ಬೆಂಗಳೂರು: ಸ್ಯಾಂಡಲ್‌ವುಡ್ ನಟ ಅರ್ಜುನ್ ಯೋಗಿ ಅವರ (Actor Arjun Yogi) ಕಾರು ಅಪಘಾತಕ್ಕೀಡಾಗಿರುವ ಘಟನೆ ಆರ್ ಆರ್ ನಗರದ ಚನ್ನಸಂದ್ರದ ಸಮೀಪ ಸೋಮವಾರ ಮುಂಜಾನೆ ನಡೆದಿದೆ.
ಅರ್ಜುನ್ ಯೋಗಿ ಅವರು ತಮ್ಮ ಸ್ನೇಹಿತರ ಜತೆ ದೇವಸ್ಥಾನಕ್ಕೆ ತೆರಳುವ ವೇಳೆ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಕಾರಿಗೆ ನಾಯಿ ಅಡ್ಡ ಬಂದ ಕಾರಣ, ಕಾರಿನ ನಿಯಂತ್ರಣ ತಪ್ಪಿ ರಸ್ತೆ ಬದಿ ಕಾರು ಡಿಕ್ಕಿ ಹೊಡೆದಿದೆ. ಏರ್ ಬ್ಯಾಗ್ ಓಪನ್ ಆದ ಕಾರಣ ಯಾವುದೇ ಅವಘಡ ಸಂಭವಿಸಿಲ್ಲ. ಅಪಘಾತದ ತೀವ್ರತೆಗೆ ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ.
ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಮಿಂಚುತ್ತಿರುವ ಅರ್ಜುನ್ ಯೋಗಿ, ‘ಲಾಂಗ್ ಡ್ರೈವ್’, ‘ಅನಾವರಣ’, ‘ಚೇಜ್’ ಮುಂತಾದ ಸಿನಿಮಾದಲ್ಲಿ ನಟಿಸಿದ್ದಾರೆ. ‘ಅರಮನೆ ಗಿಳಿ’, ‘ಶಾಂತಿ ನಿವಾಸ’ ಮುಂತಾದ ಸೀರಿಯಲ್‌ನಲ್ಲಿ ಅರ್ಜುನ್ ನಟಿಸಿದ್ದಾರೆ. ‘ರಾಜಾ ರಾಣಿ’ ಶೋನಲ್ಲೂ ಅರ್ಜುನ್ ಹೆಜ್ಜೆ ಹಾಕಿದ್ದರು. ಸದ್ಯ ಅವರು ‘ವರ್ಣ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

