ಕನ್ನಡ ಕಿರುತೆರೆಯ ಬ್ರಹ್ಮಗಂಟು ಸೀರಿಯಲ್ ಖ್ಯಾತಿಯ ಶೋಭಿತಾ ಶಿವಣ್ಣ ಸಾವನ್ನಪ್ಪಿದ್ದಾರೆ. ಕಿರುತೆರೆ ಸ್ಟಾರ್ ನಟಿ ಹೈದರಾಬಾದ್‌ನಲ್ಲಿ ಸಾವಿಗೆ ಶರಣಾಗಿದ್ದಾರೆ. ಸಾವಿನ ಸುದ್ದಿ ತಿಳಿದು ಶೋಭಿತಾ ಕುಟುಂಬ ಸದಸ್ಯರು ಶಾಕ್ ಆಗಿದ್ದಾರೆ.
ಮೂಲತ: ಹಾಸನ ಜಲ್ಲೆ ಸಕಲೇಶಪುರದ ಶೋಭಿತಾ ಶಿವಣ್ಣ, ಬ್ರಹ್ಮಗಂಟು ಧಾರಾವಾಹಿಯಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳುವ ಮೂಲಕ ಸಾಕಷ್ಟು ಖ್ಯಾತಿ ಗಳಿಸಿದ್ದರು. ಮೇ 22, 2023 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಶೋಭಿತಾ ಕಿರುತೆರೆಯಿಂದ ದೂರವಾಗಿ ಹೈದರಾಬಾದ್ ನಲ್ಲಿ ವಾಸವಾಗಿದ್ದರು. ಆದರೆ, ಮಧ್ಯರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಆದರೆ, ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.
2 ವರ್ಷಗಳ ಹಿಂದೆ ಹಾಸನ ಮೂಲದ ಶೋಭಿತಾ ಮದುವೆಯಾಗಿ ಹೈದರಾಬಾದ್‌ನಲ್ಲಿ ಸೆಟಲ್ ಆಗಿದ್ದರು. ಬಣ್ಣದ ಲೋಕದಿಂದ ಅವರು ಅಂತರ ಕಾಯ್ದುಕೊಂಡಿದ್ದರು. ಇದೀಗ ಶೋಭಿತಾ ಆತ್ಮಹತ್ಯೆಯ ಸುದ್ದಿ ಕೇಳಿ, ಕುಟುಂಬಸ್ಥರಿಗೆ ಶಾಕ್ ಕೊಟ್ಟಿದೆ. ಇನ್ನೂ ಮರಣೋತ್ತರ ಪರೀಕ್ಷೆಯ ನಂತರ ನಟಿಯ ಮೃತದೇಹ ಬೆಂಗಳೂರಿಗೆ ತರುವ ಸಾಧ್ಯತೆಯಿದೆ.
ಆರಂಭದಲ್ಲಿ ರಾಜ್ ಮ್ಯೂಸಿಕ್ ಚಾನೆಲ್ ನಲ್ಲಿ VJ ಆಗಿದ್ದ ಶೋಭಿತಾ, ನಂತರ ಬ್ರಹ್ಮಗಂಟು, ನಿನ್ನಿಂದಲೇ ಧಾರಾವಾಹಿಯಲ್ಲಿ ಅಭಿನಯಿಸಿದ್ದರು.2015ರಲ್ಲಿ ಕುಮಾರ್ ದತ್ತ ಅವರೊಂದಿಗೆ ಎರಡೊಂದ್ಲಾ ಮೂರು ಹಾಗೂ “ಫಸ್ಟ್ ಡೇ, ಫಸ್ಟ್ ಷೋ” ಸಿನಿಮಾದಲ್ಲಿ ನಾಯಕಿಯಾಗಿ ಬಣ್ಣ ಹಚ್ಚಿದ್ದರು.
ನಿನ್ನೆ ರಾತ್ರಿ ನಡೆದಿರೋ ಘಟನೆ ಅನ್ನೋ ಮಾಹಿತಿ ಇದೆ ನಿನ್ನೆಯಷ್ಟೆ ಸೋಶಿಯಲ್ ಮೀಡಿಯಾದಲ್ಲಿ ಸ್ಟೋರಿಶೇರ್ ಮಾಡಿದ್ರು. ಮದುವೆ ಆದಾಗಿಂದ ಇಂಡಸ್ಟ್ರಿಯಿಂದ ಅಂತರ ಕಾಯ್ದುಕೊಂಡಿದ್ರು. ಇದೀಗ ಮರಣೋತ್ತರ ಪರೀಕ್ಷೆ ನಂತರ ಬೆಂಗಳೂರಿಗೆ ಮೃತದೇಹ ತರೋ ಸಾಧ್ಯತೆ ಇದೆ ಎನ್ನಲಾಗಿದೆ.

