ಹೊಸಕೋಟೆ : ಹೊಸಕೋಟೆ ನಗರದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದು ಕನ್ನಡ ರಾಜ್ಯೋತ್ಸವ ದಿನಾಚರಣೆಯನ್ನು ಮುಖ್ಯ ಅತಿಥಿಗಳಾದ ಮಾನ್ಯ ಕವಿಗಳಾದ ಪಿಚ್ಚಳ್ಳಿ ಶ್ರೀನಿವಾಸರವರು ಉದ್ಘಾಟಿಸಿದರು.
ಕನ್ನಡ ನಾಡು ನುಡಿ ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ವಿದ್ಯಾರ್ಥಿಗಳಿಗೆ ಅನುಭವದ ಮಾತುಗಳನ್ನಾಡಿ ನಮ್ಮ ಕನ್ನಡ ನಾಡು ನಮ್ಮ ಭಾಷೆ ನಮ್ಮ ನೆಲ ಯಾವ ರೀತಿ ಸುಸಂಸ್ಕೃತವಾಗಿ ಬೆಳೆದಿದೆ ಎಂಬುದರ ಇತಿಹಾಸವನ್ನು ವಿದ್ಯಾರ್ಥಿಗಳಿಗೆ ಊಣಪಡಿಸಿದರು.
ವಿವಿಧ ಸಾಂಸ್ಕೃತಿಕ ಕಲಾತಂಡಗಳಿಗೆ ಆಹ್ವಾನ ನೀಡಿದ್ದು ಕಲಾತಂಡಗಳು ಸಾಂಸ್ಕೃತಿಕ ಕಾರ್ಯಕ್ರಮಗಳು ತುಂಬಾ ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲರಾದ ರಾಮಲಿಂಗಪ್ಪ ಟಿ ಬೇಗೂರು ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮವು ತುಂಬಾ ವಿಭಿನ್ನ ರೀತಿಯಲ್ಲಿ ಮತ್ತು ಉತ್ಸಾಹದ ಅಲೆಯಲ್ಲಿ ಕಾರ್ಯಕ್ರಮವು ಬರಪೂರ ಮರರಂಜನೆಯನ್ನು ನೀಡುತ್ತಾ ಕನ್ನಡ ನಾಡು ನುಡಿಯ ಬಗ್ಗೆ ಇತಿಹಾಸವನ್ನು ತಿಳಿಸುತ್ತಾ ಕಾರ್ಯಕ್ರಮವು ಆಯೋಜಿಸಲಾಗಿತ್ತು
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಕಬ್ಬಡಿ ಕ್ರೀಡೆಯಲ್ಲಿ ಒಂದು ಉತ್ಪನ್ನದ ಹಾದಿಯಲ್ಲಿರುವ ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರವನ್ನು ಮತ್ತು ಅವರಿಗೆ ಅಭಿನಂದನೆ ತಿಳಿಸಿದರು

