ವಿಜಯಪುರ: ಜಮ್ಮು-ಕಾಶ್ಮೀರದಲ್ಲಿ (Jammu And Kashmir) ರೆಜಿಮೆಂಟ್ 13ರಲ್ಲಿ ಹವಾಲ್ದಾರ್ ಆಗಿ ಸೇವೆ ಸಲ್ಲಿಸುತ್ತಿದ್ದ ವಿಜಯಪುರ ಮೂಲದ ಯೋಧ (Soldier) ಹುತಾತ್ಮರಾಗಿದ್ದಾರೆ.
ವಿಜಯಪುರ (Vijayapura) ಜಿಲ್ಲೆಯ ತಿಕೋಟಾದ ಯೋಧ ರಾಜು ಕರ್ಜಗಿ ಹುತಾತ್ಮರಾಗಿದ್ದಾರೆ. ಕುಟುಂಬಸ್ಥರಿಗೆ ನಿನ್ನೆ ಸಂಜೆ ಕರೆ ಮಾಡಿ ಹುತಾತ್ಮ ಆದ ಬಗ್ಗೆ ಮಾಹಿತಿ ನೀಡಲಾಗಿದೆ. ಆದರೆ ಯಾವ ರೀತಿ ಹುತಾತ್ಮರಾದರು. ಯಾವಾಗ ಮೃತದೇಹ ತರಲಾಗುತ್ತೆ ಎಂಬ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ. ಇದನ್ನೂ ಓದಿ: ಹೊಸ ಕಾನೂನುಗಳಲ್ಲಿ ಕೆಲವು ಉತ್ತಮವಾಗಿವೆ, ಕೆಲವು ಸರಿಯಾಗಿಲ್ಲ: ಪರಂ
ಇದರಿಂದ ಕುಟುಂಬಸ್ಥರು ಚಿಂತಾಕ್ರಾಂತರಾಗಿದ್ದಾರೆ. ಇನ್ನೂ ಯೋಧನ ಬಗ್ಗೆ ಜಿಲ್ಲಾಡಾಳಿತಕ್ಕೂ ಯಾವುದೇ ಮಾಹಿತಿ ಸಿಕ್ಕಿಲ್ಲ. ಯೋಧ ಅಗಲಿಕೆಯಿಂದ ತಿಕೋಟ ತಾಲೂಕು ಸೇರಿದಂತೆ ಜಿಲ್ಲೆಯಲ್ಲಿ ನೀರವ ಮೌನ ಆವರಿಸಿದೆ. ಇದನ್ನೂ ಓದಿ: ಕರಾವಳಿ, ಮಧ್ಯ ಕರ್ನಾಟಕ: ಮುಂದಿನ 3 ಗಂಟೆಗಳಲ್ಲಿ ಭಾರೀ ಮಳೆ ಸಾಧ್ಯತೆ