ಬೆಂಗಳೂರು, ಫೆ.18: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲ ಅವರ ನೇತೃತ್ವದ ಮಂಡಳಿ ನಿಯೋಗವು ಬುಧವಾರ ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ವಿವಿಧ ವಿಷಯಗಳ ಕುರಿತು ಸಮಾಲೋಚನೆ ನಡೆಸಿತು.
ಚಿತ್ರರಂಗದ ಅಭಿವೃದ್ಧಿ, ನಿರ್ಮಾಪಕರ ಸಮಸ್ಯೆಗಳು ಹಾಗೂ ವಾಣಿಜ್ಯ ಮಂಡಳಿಯ ಮುಂದಿನ ಕಾರ್ಯಯೋಜನೆ ಕುರಿತಾಗಿ ಚರ್ಚೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಈ ಸಂದರ್ಭದಲ್ಲಿ ಮಂಡಳಿಯ ಉಪಾಧ್ಯಕ್ಷ ಸುಂದರ್ ರಾಜ್, ಖಜಾಂಚಿ ಜಯಸಿಂಹ ಮುಸುರಿ ಸೇರಿದಂತೆ ಇನ್ನಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

