ಬೆಂಗಳೂರು : ಏಪ್ರಿಲ್ 15ರಿಂದ 17ರ ವರೆಗೆ ನಡೆಯಲಿರುವ ಸಿಇಟಿ ಪರೀಕ್ಷೆಯ ಪ್ರವೇಶ ಪತ್ರಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬಿಡುಗಡೆ ಮಾಡಿದೆ. ಇದೇ ಮೊದಲ ಬಾರಿಗೆ ಕೆಇಎ ಹಾಲ್ ಟಿಕೆಟ್ ಜೊತೆಗೆ ಮಾದರಿ ಒಎಮ್ಆರ್ ಶೀಟ್ ಕೂಡ ನೀಡಿದೆ.
ಕರ್ನಾಟಕ ಈ ವರ್ಷ ಪ್ರಾಧಿಕಾರದ ನೀರಿಕ್ಷೆಗೂ ಮಿರಿ ಅರ್ಜಿಗಳು ಸಲ್ಲಿಕೆಯಾಗಿದೆ. ಈ ವರ್ಷ 3 ಲಕ್ಷ 60 ಸಾವಿರ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ. 3 ಲಕ್ಷ 30 ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಸಾಧ್ಯತೆ ಇದೆ.
ಹೀಗಾಗಿ ಹತ್ತು ದಿನಕ್ಕೂ ಮೊದಲೇ ಅಂದರೆ ಇಂದು ಸಿಇಟಿ ಪ್ರವೇಶ ಪತ್ರ ಬಿಡುಗಡೆ ಮಾಡಲಾಗಿದ್ದು, ಅಭ್ಯರ್ಥಿಗಳು cetonline.karnataka.gov.in ಲಿಂಕ್ ಮೂಲಕ ಹಾಲ್ ಟಿಕೆಟ್ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಇನ್ನು ಪ್ರತಿ ಬಾರಿ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ದಿನ ಒಎಮ್ಆರ್ ತುಂಬಲು ಪರದಾಟ ಹಾಗೂ ಗೊಂದಲ ಮಾಡಿಕೊಳ್ಳುತ್ತಿದ್ದ ಹಿನ್ನಲೆ ಈ ಬಾರಿ ಪ್ರವೇಶ ಪತ್ರದ ಜೊತೆಗೆ ಒಎಮ್ಆರ್ ಶೀಟ್ ಕೂಡಾ ನೀಡಲಾಗುತ್ತಿದೆ.
ಏಪ್ರಿಲ್ 15ರಂದು ಕನ್ನಡ ಪರೀಕ್ಷೆ ನಡೆಯಲಿದೆ. ಏ.16 ಮತ್ತು 17ರಂದು ಇತರೆ ವಿಷಯ ಪರೀಕ್ಷೆ, ಏಪ್ರಿಲ್ 16 ರಂದು 10:30 ರಿಂದ ಭೌತಶಾಸ್ತ್ರ ಹಾಗೂ ಮಧ್ಯಾಹ್ನ 2:30 ರಿಂದ ರಾಸಾಯನಶಾಸ್ತ್ರ, ಏಪ್ರಿಲ್ 17 ರಂದು ಬೆಳ್ಳಗ್ಗೆ ಗಣಿತ ಮತ್ತು ಮಧ್ಯಾಹ್ನ ಜೀವಶಾಸ್ತ್ರ ಪರೀಕ್ಷೆ ನಡೆಯಲಿವೆ.