ಮಹಾನಟಿ ಕೀರ್ತಿ ಸುರೇಶ್ (Keerthy Suresh) ಬಾಲಿವುಡ್ (Bollywood) ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ವರುಣ್ ಧವನ್ಗೆ (Varun Dhawan) ನಾಯಕಿಯಾಗಿ ಬಾಲಿವುಡ್ಗೆ ಪಾದಾರ್ಪಣೆ ಮಾಡಿದ್ದರೆ. ಇದೀಗ ಕೀರ್ತಿಗೆ ಮತ್ತೊಂದು ಬಂಪರ್ ಅಫರ್ ಸಿಕ್ಕಿದೆ.
ಸದ್ಯ ಕೀರ್ತಿ ಸುರೇಶ್ ವರುಣ್ ಧವನ್ ಸಿನಿಮಾದಲ್ಲಿ ನಾಯಕಿಯಾಗಿ ನಡಿಸಿದ್ದು, ಸಿನಿಮಾಗೆ “ಬೇಬಿ ಜಾನ್” ಎಂದು ಟೈಟಲ್ ಇಡಲಾಗಿದ್ದು, ಇದನ್ನು ತಮಿಳಿನ ಮತ್ತು ಜವಾನ್ ಸಿನಿಮಾದ ಡೈರೆಕ್ಟರ್ ಅಟ್ಲಿ (Atlee) ನಿರ್ದೇಶನ ಮಾಡುತ್ತಿದ್ದಾರೆ. ಇದೀಗ ಅವರು ಅಕ್ಷಯ್ ಕುಮಾರ್ಗೆ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇದನ್ನೂ ಓದಿ: ನಟಿ ಛಾಯಾಸಿಂಗ್ ತಾಯಿ ಮನೆಯಲ್ಲಿ ಕಳ್ಳತನ-ಮನೆ ಕೆಲಸದಾಕೆಯಿಂದ್ಲೇ ಕೃತ್ಯ

ಸತತ ಸೋಲು ಕಂಡು, ಸುಸ್ತಾಗಿರುವ ಬಾಲಿವುಡ್ ಸ್ಟಾರ್ ನಟ ಅಕ್ಷಯ್ ಕುಮಾರ್ ಗೆ ನಾಯಕಿಯಾಗಿದ್ದರೆ. ಹಿರಿಯ ಹಾಗೂ ಜನಪ್ರಿಯ ನಿರ್ದೇಶಕ ಪ್ರಿಯದರ್ಶನ್ ಅವರು ಈ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ.
ಕೀರ್ತಿ ಸುರೇಶ್ ಈ ಪಾತ್ರಕ್ಕೆ ಆಯ್ಕೆ ಆಗುವುದಕ್ಕೆ ಮುನ್ನ ಈ ಪಾತ್ರಕ್ಕಾಗಿ ಆಲಿಯಾ ಭಟ್ ಹಾಗೂ ಕಿಯಾರಾ ಅಡ್ವಾಣಿಯನ್ನು ಪರಿಗಣಿಸಲಾಗಿತ್ತು. ಆದರೆ ಅಂತಿಮವಾಗಿ ಕೀರ್ತಿ ಸುರೇಶ್ ಅವರನ್ನೇ ನಿರ್ದೇಶಕರು ಆಯ್ಕೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: 11 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ಹಾಡುಗಾರ ಜಿ.ವಿ ಪ್ರಕಾಶ್

ಸಿನಿಮಾವು ಹಾಸ್ಯಮಿಶ್ರಿತ ಕೌಟುಂಬಿಕ ಕತೆ ಹೊಂದಿದ್ದು, ನಾಯಕಿಗೆ ನಾಯಕನಷ್ಟೆ ಪ್ರಧಾನ ಪಾತ್ರವಿದೆಯಂತೆ. ಇದೇ ಕಾರಣಕ್ಕೆ ಸುಂದರವಾಗಿರುವ ಜೊತೆಗೆ ಚೆನ್ನಾಗಿ ನಟಿಸುವ ನಟಿಯ ಹುಡುಕಾಟದಲ್ಲಿ ಚಿತ್ರತಂಡ ಇತ್ತು. ನಟನೆಗೆ ರಾಷ್ಟ್ರಪ್ರಶಸ್ತಿ ಪಡೆದಿರುವ ಕೀರ್ತಿ ಸುರೇಶ್ ಅವರನ್ನು ಅಂತಿಮವಾಗಿ ಆಯ್ಕೆ ಮಾಡಲಾಗಿದೆ. ಇದನ್ನೂ ಓದಿ: ಬುರ್ಖಾ ತೆಗೆದು ವೋಟರ್ ಐಡಿ ತೋರಿಸಲು ಹೇಳಿದ ಮಾಧವಿ ಲತಾ- ಪ್ರಕರಣ ದಾಖಲು