ಬೆಂಗಳೂರು : ರಾಜ್ಯದ 52 ಮಂದಿ ಸಾಧಕರಿಗೆ ಕೆಂಪೇಗೌಡ ಪ್ರಶಸ್ತಿ ಪ್ರಕಟ ಮಾಡಲಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ 516ನೇ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಪಾಲಿಕೆಯ ಕೇಂದ್ರ ಕಛೇರಿಯ ಆವರಣದಲ್ಲಿರುವ ಡಾ| ರಾಜಕುಮಾರ್ ಗಾಜಿನ ಮನೆ ಇಲ್ಲಿ ದಿನಾಂಕ: 27-06-2025ರಂದು ಸಂಜೆ 6-00 ಗಂಟೆಗೆ ಮಾನ್ಯ ಉಪ ಮುಖ್ಯಮಂತ್ರಿಗಳ ಉಪಸ್ಥಿತಿಯಲ್ಲಿ ಆಚರಿಸಲಾಗುತ್ತಿದ್ದು, ಇದರ ಅಂಗವಾಗಿ ಪಾಲಿಕೆ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಸಾಧಕರಿಗೆ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ಸದರಿ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪುರಸ್ಕೃತರುಗಳನ್ನು ಖುದ್ದಾಗಿ ಆಹ್ವಾನಿಸಿ, ಕಾರ್ಯಕ್ರಮಕ್ಕೆ ಕರೆತಂದು ಸನ್ಮಾನ ಕಾರ್ಯಕ್ರಮ ಮುಗಿಯುವವರೆಗೂ ಅವರೊಂದಿಗೆ ಸಮನ್ವಯ ಸಾಧಿಸಿ, ಕಾರ್ಯಕ್ರಮ ಮುಗಿದ ನಂತರ ಗೌರವ ಪೂರ್ವಕವಾಗಿ ಅವರನ್ನು ಬೀಳ್ಕೊಡುವ ಸಂಬಂಧ ಶ್ರೀ ಬಸವರಾಜ ಕಬಾಡೆ, ಮುಖ್ಯ ಅಭಿಯಂತರರು ಇವರ ನೇತೃತ್ವದಲ್ಲಿ ನಿಯೋಜಿಸಲಾಗಿದೆ. ಕೆಳಕಂಡ ಅಧಿಕಾರಿಗಳ ತಂಡವನ್ನು

