ಖ್ಯಾತ ನಟ ಕಿಚ್ಚ ಸುದೀಪ್ ಕೇವಲ ಹೀರೋ ಮಾತ್ರವಲ್ಲ
‘ನನ್ನ ಕೈಲಾಗಿದ್ದು ಮಾಡಿದ್ದೇನೆ, ನೀವೂ ಸಹಾಯ ಮಾಡಿ’
ಮಗುವಿಗಾಗಿ ಮಿಡಿದ ಕಿಚ್ಚನ ಹೃದಯ
ಬಾಲಕಿಯ ಚಿಕಿತ್ಸೆಗೆ ಬರೋಬ್ಬರಿ 16 ಕೋಟಿ ರೂಪಾಯಿ ಅಗತ್ಯವಿದೆ
ಖ್ಯಾತ ನಟ ಕಿಚ್ಚ ಸುದೀಪ್ ಕೇವಲ ಹೀರೋ ಮಾತ್ರವಲ್ಲ, ಅವರು ಒಳ್ಳೆಯ ಸಾಮಾಜಿಕ ಕಾರ್ಯಕರ್ತ ಕೂಡ ಹೌದು. ಅವರು ಈಗ ಪುಟ್ಟ ಮಗುವಿನ ಚಿಕಿತ್ಸೆಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ.
ಅಪರೂಪದ ಕಾಯಿಲೆ ಇರುವ ಬಾಲಕಿಯ ಚಿಕಿತ್ಸೆಗೆ ಬರೋಬ್ಬರಿ 16 ಕೋಟಿ ರೂಪಾಯಿಯ ಅಗತ್ಯವಿದೆ. ಈ ಬಗ್ಗೆ ವಿಡಿಯೋ ಮಾಡಿರೋ ಅವರು, ಕೈಲಾದಷ್ಟು ಸಹಾಯ ಮಾಡಿ ಎಂದು ಕೋರಿಕೊಂಡಿದ್ದಾರೆ. ಸುದೀಪ್ ಕೂಡ ಸಹಾಯ ಮಾಡಿರೋದಾಗಿ ಹೇಳಿಕೊಂಡಿದ್ದಾರೆ.