ಖ್ಯಾತ ನಟ ಕಿಚ್ಚ ಸುದೀಪ್ ಅವರು ಭಾರತ ಸರ್ಕಾರದ ‘ಆಪರೇಷನ್ ಸಿಂಧೂರ’ ಯಶಸ್ಸಿಗೆ ಪ್ರತಿಕ್ರಿಯೆ ನೀಡಿದ್ದು, ಪ್ರಧಾನಿ ನರೇಂದ್ರ ಮೋದಿಗೆ ಶ್ಲಾಘನಾ ಪತ್ರ ಬರೆದಿದ್ದಾರೆ. ತಮ್ಮ ಭಾವನೆಗಳನ್ನು ಹಂಚಿಕೊಳ್ಳುವ ಮೂಲಕ ಸುದೀಪ್ ಈ ಕಾರ್ಯಚರಣೆಯ ಬಗ್ಗೆ ಪ್ರಧಾನಿಗೆ ಧನ್ಯವಾದ ಅರ್ಪಿಸಿದ್ದಾರೆ.
ಒಬ್ಬ ಹೆಮ್ಮೆಯ ಭಾರತೀಯನಾಗಿ ಈ ಪತ್ರವನ್ನು ನಿಮಗೆ ಬರೆಯುತ್ತಿದ್ದೇನೆ. ನೀವು ಮಾತನಾಡುವ ಪ್ರತಿ ಮಾತು ನನ್ನೊಳಗೆ ಶಕ್ತಿ ತುಂಬುತ್ತದೆ. ಭಾರತವು ಯಾವಾಗಲೂ ಎದ್ದೇಳುತ್ತದೆ ಎಂಬ ಧೈರ್ಯಶಾಲಿ ಹಾಗೂ ನಿರ್ಣಾಯಕ ಸಂದೇಶವನ್ನು ಈ ಕಾರ್ಯಚರಣೆಯ ಮೂಲಕ ನೀವು ವಿಶ್ವದ ಮುಂದೆ ಇಟ್ಟಿದ್ದೀರಿ. ಇದನ್ನು ನೋಡಿ ನಾನೂ, ನಮ್ಮ ದೇಶದ ಪ್ರತಿ ನಾಗರಿಕನೂ ಹೆಮ್ಮೆಪಡುವಂತಾಗಿದೆ. ನನ್ನ ಸಂಪೂರ್ಣ ಬೆಂಬಲ ನಿಮ್ಮೊಂದಿಗೆ ಇದೆ. ಕನ್ನಡ ಚಿತ್ರರಂಗವಿಡಿ ನಿಮ್ಮ ಹಿಂದೆ ದೃಢವಾಗಿ ನಿಂತಿದೆ.
ಆಪರೇಷನ್ ಸಿಂಧೂರ್ ಎಂಬುದು ಭಾರತ ಸರ್ಕಾರ ಕೈಗೊಂಡ ಮಹತ್ವದ ಸೈನಿಕ ಕಾರ್ಯಚರಣೆಗಳಲ್ಲಿ ಒಂದು. ಈ ಕಾರ್ಯಚರಣೆಯ ಕುರಿತು ಪ್ರಧಾನಿ ಮೋದಿ ನೀಡಿದ ಸ್ಪಷ್ಟನೆ ಹಾಗೂ ಅವರ ದೇಶಭಕ್ತಿಯ ಭಾವನೆಗಳನ್ನು ಪ್ರತಿಬಿಂಬಿಸುತ್ತದೆ ಎಂಬ ಅಭಿಪ್ರಾಯವನ್ನು ಸುದೀಪ್ ವ್ಯಕ್ತಪಡಿಸಿದ್ದಾರೆ.
ಸುದೀಪ್ ಅವರ ಈ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅಭಿಮಾನಿಗಳು ಹಾಗೂ ಜನ ಸಾಮಾನ್ಯರು ಅವರ ದೇಶಾಭಿಮಾನಕ್ಕೆ ಪ್ರಭಾವಿತರಾಗಿ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ.

