ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ (Kiccha Sudeep) ಇದೀಗ ‘ಮ್ಯಾಕ್ಸ್’ (Max) ಸಿನಿಮಾದ ಮೂಲಕ ಎಂಟ್ರಿ ಕೊಡುತ್ತಿದ್ದಾರೆ. ‘ಮ್ಯಾಕ್ಸ್’ ಚಿತ್ರದ ಕೊನೆಯ ದಿನದ ಶೂಟಿಂಗ್ (Shooting) ವಿಡಿಯೋವನ್ನು ಹಂಚಿಕೊಂಡು ಚಿತ್ರತಂಡಕ್ಕೆ ಸುದೀಪ್ ಧನ್ಯವಾದ (Thank You) ತಿಳಿಸಿದ್ದಾರೆ.
ಸುದೀಪ್ ಅವರು ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಅರ್ಜುನ್ ಮಹಾಕ್ಷಯ್ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ. ಸದ್ಯ ಮಾಕ್ಸ್ ಚಿತ್ರದ ಶೂಟಿಂಗ್ ಮಹಾಬಲಿಪುರಂನಲ್ಲಿ (Mahabalipuram) ಭರದಿಂದ ಸಾಗುತ್ತಿದ್ದು, ಈ ಬಗ್ಗೆ ಕಿಚ್ಚ ಸುದೀಪ್ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಜೆಟ್ ಏರ್‌ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಪತ್ನಿ ನಿಧನ
ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ರ‍್ಜುನ್ ಮಹಾಕ್ಷಯ್ ಪಾತ್ರದಲ್ಲಿ ಸುದೀಪ್ ನಟಿಸಿದ್ದಾರೆ. ಮಹಾಬಲಿಪುರಂನಲ್ಲಿ ಮ್ಯಾಕ್ಸ್ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸುದೀಪ್ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಫುಟ್‌ಬಾಲ್‌ಗೆ ಗುಡ್‌ಬೈ ಹೇಳಿದ ಸುನಿಲ್ ಛೆಟ್ರಿ
ಇದು ಸುದರ‍್ಘ 10 ತಿಂಗಳ ಪ್ರಯಾಣವಾಗಿದೆ. ನಾನು ಪ್ರತಿ ಕ್ಷಣ ಎಂಜಾಯ್ ಮಾಡಿದ್ದೇನೆ. ಅದ್ಭುತ ತಂಡ ಮತ್ತು ಕಲಾವಿದರ ಜೊತೆ ಕೆಲಸ ಮಾಡಿರೋದಾಗಿ ತಿಳಿಸಿದ್ದಾರೆ. ನನ್ನ ಚೆನ್ನಾಗಿ ಹೋಸ್ಟ್ ಮಾಡಿದ್ದಕ್ಕಾಗಿ ಧನ್ಯವಾದಗಳು ಧನು ಸರ್ ಎಂದು ಸುದೀಪ್ ಬರೆದುಕೊಂಡಿದ್ದಾರೆ. ನಿರ್ದೇಶಕ ವಿಜಯ್‌ಗೆ (Vijay) ಸುದೀಪ್ ಥ್ಯಾಂಕ್ಯೂ ಎಂದಿದ್ದಾರೆ. ಈ ಮೂಲಕ ‘ಮ್ಯಾಕ್ಸ್’ ಸಿನಿಮಾ ಕಡೆಯ ದಿನ ಶೂಟಿಂಗ್ ವಿಡಿಯೋ ಶೇರ್ ಮಾಡಿದ್ದಾರೆ. ಇದನ್ನೂ ಓದಿ: ಕೇಜ್ರಿವಾಲ್ ಜಾಮೀನನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ: ಶಾ ಕಿಡಿ
ಈ ಸಿನಿಮಾದಲ್ಲಿ ಸುದೀಪ್ ಜೊತೆ ವರಲಕ್ಷ್ಮಿ ಶರತ್ ಕುಮಾರ್, ಸಂಯುಕ್ತಾ ಹೊರನಾಡ್, ಸುಕೃತಾ, ಅನಿರುದ್ಧ ಭಟ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಅಂದಹಾಗೆ, ವಿಕ್ರಾಂತ್ ರೋಣ ಚಿತ್ರದ ನಂತರ ‘ಮ್ಯಾಕ್ಸ್’ ಸಿನಿಮಾದ ಮೂಲಕ ಬರುತ್ತಿರೋ ಸುದೀಪ್ ನಟನೆಯ ಈ ಚಿತ್ರದ ಮೇಲೆ ಅಭಿಮಾನಿಗಳಿಗೆ ಭಾರೀ ನಿರೀಕ್ಷೆಯಿದ್ದು, ಕಾದು ನೋಡಬೇಕಿದೆ. ಇದನ್ನೂ ಓದಿ: ಮುಂದಿನ 5 ದಿನಗಳು ರಾಜ್ಯದಲ್ಲಿ ಗಾಳಿ ಮಳೆ

