ಕೋಲಾರ : ಮುಳಬಾಗಿಲುನಿಂದ ಚಿತ್ತೂರು ಹೋಗುವ ಖಾಸಗಿ ಬಸ್ ಹಾಗೂ ಮುಳಬಾಗಿಲು ನಿಂದ ಅಲಂಗೂರು ಹೋಗುವ KSRTC ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು ಸುಮಾರು 70 ಜನ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೆಳಿಗ್ಗೆ 8 ಗಂಟೆ ಸುಮಾರಿಗೆ ಮುಳಬಾಗಿಲುನಿಂದ ಅಲಂಗೂರುಗೆ ಹೋಗುವ ksrtc ಬಸ್ ಹಾಗೂ ಖಾಸಗಿ ಬಸ್ ಡಿಕ್ಕಿಯಾಗಿವೆ. ಈ ಅಪಘಾತದಲ್ಲಿ ಅದೃಷ್ಟವಶಾತ್ ಯಾರಿಗೂ ತೊಂದರೆ ಆಗಿಲ್ಲ.
ಈ ಸರ್ಕಲ್ ನಲ್ಲಿ ಹೆಚ್ಚಾಗಿ ಅಪಘಾತಗಳು ಆಗತಿದ್ದು ಅದೆಷ್ಟು ಬೇಗ ಈ ಸರ್ಕಲ್ ನಲ್ಲಿ ಸೂಕ್ತವಾದ ಕ್ರಮ ಕೈಗೊಂಡು ಸಿಗ್ನಲ್ ವೆವಸ್ಥೆ ಮಾಡಬೇಕಾಗಿ ಪ್ರಯಾಣಿಕರು ಮನವಿ ಮಾಡಿದರು.
ವಿಷಯ ತಿಳಿದ ಕೂಡಲೇ ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆ ಸಿಬ್ಬಂದಿ ವರ್ಗದವರು ಬಂದು ಪ್ರಕರಣ ದಾಖಲೆ ಮಾಡಿಕೊಂಡರು.
ವರದಿ : ಅರುಣ್ ಕುಮಾರ್ ಬಿ ಎಸ್