ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿರುವ (Rain) ಹಿನ್ನೆಲೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ (SriRangapattana) ತಾಲೂಕಿನ ಕೆಆಎರ್‌ಎಸ್ (KRS) ಡ್ಯಾಂ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ.
ವಾರದ ಹಿಂದಷ್ಟೇ ಕೆಆರ್‌ಎಸ್ ಡ್ಯಾಂನ ನೀರಿನ ಮಟ್ಟ 87 ಅಡಿಗೆ ಕುಸಿದಿತ್ತು. ಆದರೆ ಇದೀಗ ಒಂದೇ ವಾರದಲ್ಲಿ 11 ಅಡಿಯಷ್ಟು ಡ್ಯಾಂ ಭರ್ತಿಯಾಗಿದ್ದು, ನೀರಿನ ಮಟ್ಟ ಸುಮಾರು 98 ಅಡಿಗೆ ತಲುಪಿದ್ದು, ಡ್ಯಾಂನಲ್ಲಿ ಸುಮಾರು 21.987 ಟಿಎಂಸಿ ನೀರು ಸಂಗ್ರಹವಾಗಿದೆ. ಇದನ್ನೂ ಓದಿ: ಪೌರ ಕಾರ್ಮಿಕರಿಗೆ ಗುಡ್ ನ್ಯೂಸ್- ವಾರಕ್ಕೆ ಒಂದು ದಿನ ರಜೆ ನೀಡಿದ ಸರ್ಕಾರ
ಪ್ರಸ್ತುತ ನಿರಂತರ ಮಳೆಯಿಂದಾಗಿ ಕೆಆರ್‌ಎಸ್‌ಗೆ ನೀರು ಹರಿದು ಬರುತ್ತಿದೆ. ಮಳೆ ಮತ್ತಷ್ಟು ಜೋರಾದರೆ ಕೆಲವೇ ದಿನದಲ್ಲಿ ಡ್ಯಾಂ ಸಂಪೂರ್ಣ ಭರ್ತಿಯಾಗುವ ಸಾಧ್ಯತೆಯಿದೆ.

ಒಂದು ವಾರದಲ್ಲಿ 6 ಟಿಎಂಸಿಯಷ್ಟು ನೀರು ಸಂಗ್ರಹವಾಗಿದ್ದು, ದಿನೇ ದಿನೇ ನೀರಿನ ಮಟ್ಟ ಹೆಚ್ಚಳದಿಂದ ರೈತರಲ್ಲಿ ಸಂತಸ ಮನೆ ಮಾಡಿದೆ. ಅಲ್ಲದೇ ಅನ್ನದಾತ ಶೀಘ್ರವೇ ನಾಲೆಗಳಿಗೆ ನೀರು ಬಿಡುವ ನಿರೀಕ್ಷೆಯಲ್ಲಿದ್ದಾರೆ. ಇದನ್ನೂ ಓದಿ:ರಾಜ್ಯ ರಾಜಧಾನಿಯಲ್ಲಿ ವೈಟ್ ಟಾಪಿಂಗ್‌ಗೆ ಬಿಬಿಎಂಪಿ ಸಿದ್ಧತೆ
ಇಂದಿನ ಕೆಆರ್‌ಎಸ್ ನೀರಿನ ಮಟ್ಟ:
ಗರಿಷ್ಠ ಮಟ್ಟ – 124.80 ಅಡಿಯಾದರೆ ಡ್ಯಾಂನಲಲಿ ಇಂದು ನೀರಿನ ಮಟ್ಟ 98.10 ಅಡಿಯಿದೆ. ಇನ್ನೂ ರಿಷ್ಠ ಸಂಗ್ರಹ ಸಾಮರ್ಥ 49.452 ಟಿಎಂಸಿ ಇದ್ದರೆ, ಇಂದಿನ ಸಂಗ್ರಹ 21.978 ಟಿಎಂಸಿ ಇದೆ. ಅಲ್ಲದೇ ಒಳ ಹರಿವು 14,135 ಕ್ಯೂಸೆಕ್ ಮತ್ತು ಹೊರ ಹರಿವು 532 ಕ್ಯೂಸೆಕ್ ಇದೆ.

