ಕುಣಿಗಲ್:- ಪಟ್ಟಣದ ತೋಟಗಾರಿಕೆ ಇಲಾಖೆ ಮುಂದೆ ಸ್ವಚ್ಛತೆ ಮರೀಚಿಕೆಯಾಗಿದೆ ಎಂದು ಅಲ್ಲಿನ ಸಾರ್ವಜನಿಕರು ಪುರಸಭೆಯ ವಿರುದ್ಧ ಬೇಸರವನ್ನು ವ್ಯಕ್ತಪಡಿಸಿದ್ದಾರೆ,
ಪುರಸಭೆಯಲ್ಲಿ ಕಾರ್ಯನಿರ್ವಹಿಸುವ ಕೆಲಸಗಾರರು ಕೂಡ ಅದೇ ರಸ್ತೆಯಲ್ಲಿ ಪ್ರತಿನಿತ್ಯ ಓಡಾಡುತ್ತಾರೆ, ಆದರೂ ಕಣ್ಣಿಗೆ ಕಂಡರೂ ಕಾಣದೆ ಇರುವುದು ಬೇಸರದ ಸಂಗತಿ, ರಸ್ತೆಯಲ್ಲಿ ಸ್ವಚ್ಛತೆ ಎನ್ನುವ ಪದವೇ ಕಾಣದಂತಾಗಿದೆ.
ಪ್ರತಿ ಬುಧವಾರ ಸಂತೆ ಮೈದಾನಕ್ಕೆ ಬರುವ ರೈತರು, ಹಾಗೂ ಸಾರ್ವಜನಿಕರು, ಎಲ್ಲಿಂದರಲ್ಲಿ ವಾಹನಗಳನ್ನು ಅರ್ಧ ರಸ್ತೆಗೆ ನಿಲ್ಲಿಸಿ ಸಂತೆಗೆ ಹೋಗುತ್ತಾರೆ, ಸಂತೆ ಮೈದಾನದಲ್ಲೂ ಕೂಡ ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ, ಎಂದು ಅಲ್ಲಿನ ಗ್ರಾಮಸ್ಥರು ಮಾತನಾಡಿದರು, ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುತ್ತಿದ್ದರು ಪುರಸಭೆ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ,
ತೋಟಗಾರಿಕಾ ಇಲಾಖೆಯವರು ಕೂಡ ಇದರ ಬಗ್ಗೆ ಪುರಸಭೆ ಅಧಿಕಾರಿಗಳ ಹತ್ತಿರ ಚರ್ಚಿಸಿ ಇದರ ಬಗ್ಗೆ ಗಮನಹರಿಸಬೇಕು ಎಂದರು, ಶಾಲೆಗೆ ಹೋಗುವ ಮಕ್ಕಳು ಕೂಡ ಇದೇ ರಸ್ತೆಯಲ್ಲಿ ಪ್ರತಿನಿತ್ಯ ಹೋಗುತ್ತಿದ್ದು ಮೂಗುಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಬಂದಿದೆ, ಪಟ್ಟಣದಲ್ಲಿ ಸ್ವಚ್ಛತೆ ಎಂಬುದೇ ಹದಗೆಟ್ಟು ನಿಂತಿದೆ ಎಂದು ಅಲ್ಲಿಂದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು,
ಅಲ್ಲಿನ ತೋಟಗಾರಿಕೆ ಇಲಾಖೆ ಮುಂದೆ ಇರುವ ಪುರಸಭೆ ಶೌಚಾಲಯವನ್ನು ವಾರಕ್ಕೊಮ್ಮೆ ತೆರೆಯುತ್ತಾರೆ ಆದರೆ ಅದು ಕಸದ ತೊಟ್ಟಿಯಂತಾಗಿದ್ದು ಅಲ್ಲೂ ಕೂಡ ಸ್ವಚ್ಛತೆ ಎಂಬುದೇ ಇಲ್ಲದಂತಾಗಿದೆ ಅಲ್ಲಿನ ಶೌಚಾಲಯ ದುರ್ವಾಸನೆಯಿಂದ ನಾರುತಿದ್ದು ತೋಟಗಾರಿಕೆ ಇಲಾಖೆಯವರು ಪಕ್ಕದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು ಇದರ ಬಗ್ಗೆ ಹೇಳುವವರು ಇಲ್ಲ ಕೇಳುವವರು ಇಲ್ಲದಂತಾಗಿದೆ,
ದಯವಿಟ್ಟು ಇದರ ಬಗ್ಗೆ ಪುರಸಭೆ ಅಧಿಕಾರಿಗಳು ಸೂಕ್ತ ಗಮನಹರಿಸಿ ರಸ್ತೆಯಲ್ಲಿರುವ ಕಸದ ಚೀಲಗಳ ರಾಶಿಯನ್ನು ಬಗೆಹರಿಸಬೇಕು ಎಂದು ಅಲ್ಲಿನ ನಾಗರಿಕರು ತಿಳಿಸಿದ್ದಾರೆ,,,
ವರದಿ : ನರಸಿಂಹರಾಜು ಎಚ್