ಮಂಗಳೂರು: ಮಗು ಜನನದ ವೇಳೆ ಗರ್ಭಿಣಿಯರ ಮರಣವನ್ನು ತಪ್ಪಿಸಲು ಮಂಗಳೂರು ಪ್ರಸಿದ್ಧ ಸರಕಾರಿ ಹೆರಿಗೆ ಆಸ್ಪತ್ರೆ ಲೇಡಿಗೋಶನ್ (Lady Goschen Hospital) ವಾಟ್ಸಾಪ್ ಗ್ರೂಪ್ ಅನ್ನ ರಚಿಸಿದೆ. ಈ ಮೂಲಕ ಹೈರಿಸ್ಕ್‌ನಲ್ಲಿರುವ ಗರ್ಭಿಣಿಯರ ಬಗ್ಗೆ ಆಸ್ಪತ್ರೆಯ ವೈದ್ಯಾಧಿಕಾರಿಗಳು ನಿಗಾ ಇಡಲಿದ್ದಾರೆ ಎಂದು ‘ದಾಯ್ಜಿವರ್ಲ್ಡ್’ ಸಂಸ್ಥೆ ವರದಿ ಮಾಡಿದೆ.
ಲೇಡಿಗೋಶನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ದುರ್ಗಾಪ್ರಸಾದ್ ಅವರು ಇಂತಹದ್ದೊಂದು ವಿಭಿನ್ನ ಆಲೋಚನೆಯ ಮೂಲಕ ವಾಟ್ಸಾಪ್ ಗ್ರೂಪ್ ರಚಿಸಿ ಶಿಶು ಮರಣ ತಪ್ಪಿಸುವ ನಿಟ್ಟಿನಲ್ಲಿ ಹೊಸ ಹೆಜ್ಜೆಯನ್ನಿರಿಸಿದ್ದಾರೆ.
ಯಾರಿಗೆ ಅನುಕೂಲ?
ಇದು ಸಾಮಾನ್ಯವಾಗಿ ಗ್ರಾಮೀಣ ಭಾಗದಿಂದ ತೆರಳುವ ಗರ್ಭಿಣಿಯರಿಗೆ ಹೆಚ್ಚು ಅನುಕೂಲಕರವಾಗಿದೆ. ಭಾರೀ ದೂರದಿಂದ ಲೇಡಿಗೋಶನ್ ಆಸ್ಪತ್ರೆಗೆ ಹೆರಿಗೆ ನೋವು ಕಾಣಿಸಿಕೊಂಡ ಸಮಯದಲ್ಲಿ ಕೂಡಲೇ ತಲುಪುವುದು ಕಷ್ಟ. ಅದೆಷ್ಟೋ ಸಂದರ್ಭದಲ್ಲಿ ಇಂತಹ ಸಮಯದಲ್ಲಿ ಗರ್ಭಿಣಿ ಹಾಗೂ ಶಿಶು ಮರಣ ಪ್ರಕರಣಗಳು ವರದಿಯಾಗಿದ್ದಿವೆ. ಇದನ್ನು ತಡೆಗಟ್ಟಲೆಂದೇ ವಾಟ್ಸಾಪ್ ಗ್ರೂಪ್ ರಚಿಸಲಾಗಿದೆ.
ಇದನ್ನೂ ಓದಿ:
Mangaluru Temple: ಅರ್ಧನಾರೀಶ್ವರ ಅಲಂಕಾರದಲ್ಲಿ ಕಂಗೊಳಿಸಿದ ಶ್ರೀಮಂಗಳಾದೇವಿ!
ಈ ಗ್ರೂಪ್‌ನಲ್ಲಿ ಹೈರಿಸ್ಕ್‌ನಲ್ಲಿರುವ ಗರ್ಭಿಣಿಯರ ರಕ್ತದ ಗುಂಪು, ಈ ಮೊದಲು ನೀಡಿದ್ದ ಚಿಕಿತ್ಸೆ ಇದೆಲ್ಲವನ್ನೂ ರೆಡಿ ಇಟ್ಟುಕೊಳ್ಳಲಾಗುತ್ತೆ. ಯಾವಾಗ ಗರ್ಭಿಣಿ ತನ್ನ ಸ್ಥಳದಿಂದ ಹೊರಡುತ್ತಾರೋ ಅದಾಗಲೇ ಇತ್ತ ಆಸ್ಪತ್ರೆಯಲ್ಲಿ ಅದಕ್ಕೆ ಬೇಕಾದ ವ್ಯವಸ್ಥೆಗಳನ್ನು ಕಲ್ಪಿಸುತ್ತಾರೆ. ಈ ವಾಟ್ಸಾಪ್ ಗ್ರೂಪ್‌ನಲ್ಲಿ ವೈದ್ಯಕೀಯ ಅಧೀಕ್ಷಕರ ನೇತೃತ್ವದಲ್ಲಿ ಇತರೆ ವೈದ್ಯಾಧಿಕಾರಿಗಳು, ಸಿಬ್ಬಂದಿಗಳು ಇದ್ದಾರೆ. ಈ ಮೂಲಕ ಶಿಶು ಮರಣ ತಪ್ಪಿಸಲು ಬೇಕಾದ ಎಲ್ಲ ವ್ಯವಸ್ಥೆಗಳನ್ನು ವೈದ್ಯರ ತಂಡ ನಡೆಸುತ್ತಿದೆ.
ಇದನ್ನೂ ಓದಿ:
Elephant Death: ಶ್ರೀಕ್ಷೇತ್ರ ಧರ್ಮಸ್ಥಳದ ಲತಾ ಆನೆ ಹೃದಯಾಘಾತದಿಂದ ಸಾವು!
ಲೇಡಿಗೋಶನ್ ಆಸ್ಪತ್ರೆಯಲ್ಲಿ ಹೆರಿಗೆಗಾಗಿ ದಕ್ಷಿಣ ಕನ್ನಡವಲ್ಲದೇ ನೆರೆಯ ಕೇರಳದ ಕಾಸರಗೋಡು, ಚಿಕ್ಕಮಗಳೂರು, ಉಡುಪಿ ಸೇರಿದಂತೆ ಹಲವು ಜಿಲ್ಲೆಗಳಿಂದ ಗರ್ಭಿಣಿಯರು ಆಗಮಿಸುತ್ತಾರೆ. ಇಲ್ಲಿ ತಿಂಗಳಿಗೆ ಸರಾಸರಿ 600 ರಷ್ಟು ಹೆರಿಗೆಗಳು ವರದಿಯಾಗುತ್ತವೆ. 2022-23ಋಲ್ಲಿ ಲೇಡಿಗೋಶನ್ ಆಸ್ಪತ್ರೆಯಲ್ಲಿ 6018 ಹೆರಿಗೆಗಳು ನಡೆದಿದ್ದವು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ