ಬೆಂಗಳೂರು: ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದಲ್ಲಿ (KOMUL) ನೇಮಕಾತಿ ಹಗರಣ (Recuirtment) ನಡೆದಿದ್ದು, 75ಕ್ಕೆ 75 ನೇಮಕಾತಿಯಲ್ಲೂ ಮೋಸ ಮಾಡಿರುವುದು ಸಾಬೀತಾಗಿದೆ. ಶಾಸಕ ನಂಜೇಗೌಡ (Nanje Gowda) ಸೇರಿ ಪ್ರಭವಿ ನಯಕರ ವಿರುದ್ಧ ತನಿಖೆ ಮಾಡುವಂತೆ ಲೋಕಾಯುಕ್ತಕ್ಕೆ (Lokayukta) ಪತ್ರ ಬರೆಯಲಾಗಿದೆ.
ಕಾಂಗ್ರೆಸ್ ಶಾಸಕ ನಂಜೇಗೌಡ ವಿರುದ್ಧ ಆರೋಪ ಇದ್ದ ಹಿನ್ನೆಲೆ ತನಿಖೆ ಮಾಡಿದ ಇ.ಡಿ ಅಧಿಕಾರಿಗಳು ಲೋಕಾಯುಕ್ತಕ್ಕೆ ವರದಿ ರವಾನಿಸಿದ್ದಾರೆ. ಇ.ಡಿ ಅಧಿಕಾರಿಗಳು 75 ಅಭ್ಯರ್ಥಿಗಳ ಹೇಳಿಕೆ ದಾಖಲಿಸಿಕೊಂಡಿದ್ದು, ನೇಮಕಾತಿಗಾಗಿ ಹಣ ನೀಡಿರುವ ಬಗ್ಗೆ ಅಭ್ಯರ್ಥಿಗಳು ತಪ್ಪೊಪ್ಪಿಕೊಂಡಿದ್ದಾರೆ. ಈ ಹಿನ್ನೆಲೆ ಇ.ಡಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿಯಲ್ಲಿ ತನಿಖೆ ಮಾಡುವಂತೆ ಲೋಕಾಯುಕ್ತಕ್ಕೆ ಪತ್ರ ಬರೆದಿದೆ. ಇದನ್ನೂ ಓದಿ: ಹೆಚ್.ಡಿ.ರೇವಣ್ಣ ಜಾಮೀನು ಅರ್ಜಿ ವಿಚಾರಣೆ ಇಂದು- ಜೈಲಾ.. ಬೇಲಾ?
ಶಾಸಕ ನಂಜೇಗೌಡ ಸೇರಿ ಪ್ರಭಾವಿ ನಾಯಕರ ವಿರುದ್ಧ ತನಿಖೆಗೆ ಪತ್ರ ಬರೆಯಲಾಗಿದೆ. ನೇಮಕಾತಿ ಪರೀಕ್ಷೆಯನ್ನು ಮಂಗಳೂರು ವಿವಿಯ ಅಧಿಕಾರಿಗಳು ನಡೆಸಿದ್ದರು. ಶಿಫಾರಾಸು ಪತ್ರ ಬರೆದಿದ್ದ ಪ್ರಭಾವಿ ನಾಯಕರ ವಿರುದ್ಧ ತನಿಖೆ ಮಾಡಲು ಇ.ಡಿ ಪತ್ರ ಬರೆದ ಆಧಾರದ ಮೇಲೆ ಲೋಕಾಯುಕ್ತ ಸರ್ಕಾರಕ್ಕೆ ಪತ್ರ ಬರೆದಿದೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ತನಿಖೆಗೆ ಅನುಮತಿ ಕೋರಿ ಲೋಕಾಯುಕ್ತ ಡಿಜಿ ಪ್ರಶಾಂತ್ ಠಾಕೂರ್ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ವಿದ್ಯುತ್ ಬಿಲ್ ಅಧಿಕವಾಗಿ ನೀಡಿದಕ್ಕೆ ಮತ್ತೊಂದು ಕೊಲೆ: ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ