ಶಿವಮೊಗ್ಗ : ಲಿಂಗನಮಕ್ಕಿ ಜಲಾಶಯ ಬಹುತೇಕ ಭರ್ತಿ ಹಿನ್ನೆಲೆಯಲ್ಲಿ ಕ್ರಸ್ಟ್ ಗೇಟ್ ಮೂಲಕ ಶರಾವತಿ ನದಿಗೆ ನೀರು ಬಿಡುಗಡೆ ಮಾಡಲಾಗಿದೆ. ಜಲಾಶಯ ಬಹುತೇಕ ಭರ್ತಿ ಹಿನ್ನೆಲೆ 3 ಗೇಟ್ ಗಳ ಮೂಲಕ ನದಿಗೆ 10 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಿದ ಅಧಿಕಾರಿಗಳು.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಲಿಂಗನಮಕ್ಕಿಯಲ್ಲಿರು ಜಲಾಶಯ ಭರ್ತಿಯಾದ ಬೆನ್ನಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ ರವರಿಂದ ಜಲಾಶಯಕ್ಕೆ ಬಾಗಿನ ಅರ್ಪಣೆ ಮಾಡಲಾಯಿತು. ಶಾಸಕರಿಗೆ ಲಿಂಗನಮಕ್ಕಿ ಜಲಾಶಯದ ಅಧಿಕಾರಿಗಳು ಸಾಥ್ ನೀಡಿದರು.