ತಿಪಟೂರು ಅಬಕಾರಿ ಉಪ ಅಧೀಕ್ಷಕರ ಕಚೇರಿಯಲ್ಲಿ ಮದ್ಯ ನಾಶ
ತಹಶೀಲ್ದಾರ್ ಪವನ್ ಕುಮಾರ್ ಅವರ ನೇತೃತ್ವದಲ್ಲಿ ದಾಳಿ
206.130 ಲೀಟರ್ ಮಧ್ಯ ಹಾಗೂ 33, 260 ಲೀಟರ್ ಬಿಯರ್ ನಾಶ
ಅಬಕಾರಿ ಕಚೇರಿಯ ಸಿಬ್ಬಂದಿಗಳಾದ ಮಂಜುನಾಥ್ ರಾಜೇಶ್ವರಿ ವೀಣಾ ಭಾಗಿ
ತಿಪಟೂರು : ತಿಪಟೂರಿನಲ್ಲಿ ತಹಶೀಲ್ದಾರ್ ಪವನ್ ಕುಮಾರ್ , ಅಬಕಾರಿ ಉಪಧ್ಯಕ್ಷಕರಾದ ವಿಜಯಕುಮಾರ್ , ಸೇರಿದಂತೆ ಇನ್ನುಳಿದ ಅಧಿಕಾರಿಗಳ ನೇತೃತ್ವದಲ್ಲಿ ತಿಪಟೂರು ಅಬಕಾರಿ ಉಪ ಅಧೀಕ್ಷಕರ ಕಚೇರಿಯಲ್ಲಿ ದಾಳಿ ನಡೆಸಿ ಮದ್ಯ ನಾಶ ಮಾಡಲಾಯಿತು.
ಅಬಕಾರಿ ಅಧೀಕ್ಷಕರ ವಲಯದ ವ್ಯಾಪ್ತಿಯಲ್ಲಿ ವಿವಿಧ ಪ್ರಕರಣದಲ್ಲಿ ವಶಪಡಿಸಿಕೊಂಡ ಮಧ್ಯ ಮತ್ತು ಬಿಯರ್ಗಳನ್ನ ರಾಸಾಯನಿಕ ಪರೀಕ್ಷೆಗೆ ತೆಗೆದುಳಿದ 206.130 ಲೀಟರ್ ಮಧ್ಯ ಮತ್ತು 33.260 ಲೀಟರ್ ಬಿಯರ್ ನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡಿದ್ದು ಸದರಿ ಆದೇಶದ ರಿತ್ಯ ದಿನಾಂಕ 05-04-2025 ರಂದು ಮಧ್ಯಾಹ್ನ 2 ಗಂಟೆಯ ಸಮಯಕ್ಕೆ ಮಾನ್ಯ ತಹಸೀಲ್ದಾರ್ ತಿಪಟೂರು ರವರು ಮತ್ತು ವ್ಯವಸ್ಥಾಪಕರು ಕೆ ಎಸ್ ಬಿ ಸಿ ಎಲ್ ಡಿಪೋ ತಿಪಟೂರು ಹಾಗೂ ಅಬಕಾರಿ ಉಪ ಅಧೀಕ್ಷಕರು ತಿಪಟೂರು.
ಉಪವಿಭಾಗ ತಿಪಟೂರು ಮತ್ತು ಅಬಕಾರಿ ನಿರೀಕ್ಷಕರು ತಿಪಟೂರು ವಲಯ ಹಾಗೂ ಸಿಬ್ಬಂದಿಯ ಸಮಾ ಕ್ಷಮದಲ್ಲಿ 206.130ಲೀಟರ್ ಮಧ್ಯ ಮತ್ತು 33.260 ಲೀಟರ್ ಬಿಯರ್ ಅನ್ನು ತಾಹಸಿಲ್ದಾರ್ ಪವನ್ ಕುಮಾರ್ ನೇತೃತ್ವದಲ್ಲಿ ಸುಮಾರು 10 ಕ್ಕೂ ಹೆಚ್ಚು ತಿಪಟೂರು ಅಬಕಾರಿ ಅಧೀಕ್ಷಕರ ಕಚೇರಿಯ ಸಿಬ್ಬಂದಿಗಳು ಸೇರಿ ಸಂಪೂರ್ಣವಾಗಿ ವಶಪಡಿಸಿಕೊಳ್ಳಲಾಗಿದ್ದ.ಮೇಲ್ಕಂಡ ಮಧ್ಯ ಮತ್ತು ಬಿಯರ್ ನ್ನು ಸಂಪೂರ್ಣ ನಾಶಪಡಿಸಲಾಯಿತು.ಈ ಸಂದರ್ಭದಲ್ಲಿ ಪವನ್ ಕುಮಾರ್ ತಾಹಸಿಲ್ದಾರ್ ತಿಪಟೂರು.
ವಿಜಯ್ ಕುಮಾರ್ ಅಬಕಾರಿ ಉಪ ಅಧೀಕ್ಷಕರು ತಿಪಟೂರು. ಮಾಲತೇಶ್ ಕೆ ಎಸ್ ಬಿ ಸಿ ಎಲ್ ಅಬಕಾರಿ ಡಿಪೋ ವ್ಯವಸ್ಥಾಪಕರು ತಿಪಟೂರು. ವನಜಾಕ್ಷಿ ಅಬಕಾರಿ ನಿರೀಕ್ಷಕರು. ಮಂಜುನಾಥ್ ಅಬಕಾರಿ ನಿರೀಕ್ಷಕರು ತಿಪಟೂರು. ನಂಜುಂಡಸ್ವಾಮಿ ಅಬಕಾರಿ ಉಪನಿರೀಕ್ಷಕರು ತಿಪಟೂರು. ಮತ್ತು ಅಬಕಾರಿ ಕಚೇರಿಯ ಸಿಬ್ಬಂದಿಗಳಾದ ಮಂಜುನಾಥ್ ರಾಜೇಶ್ವರಿ ವೀಣಾ ಶಿವಶಂಕರಯ್ಯ ಪ್ರಸನ್ನ ಯತೀಶ್ ರೇವಣ್ಣ ಮಂಜುನಾಥ್ ಮುನಿರಾಜು ಚಂದ್ರು ಉಮೇಶ್ ಎಲ್ಲಾ ಸಿಬ್ಬಂದಿಗಳು ಹಾಜರಿದ್ದು ಮೇಲ್ಕಂಡ ಮಧ್ಯವನ್ನು ಸಂಪೂರ್ಣವಾಗಿ ನಾಶಪಡಿಸಲಾಯಿತು.
ವರದಿ : ನಾಗರಾಜು ತಿಪಟೂರು