ಬೆಂಗಳೂರು: ಕರ್ನಾಟಕದಾದ್ಯಂತ ಜೂನ್ 1ರಿಂದ ಐದು ದಿನಗಳ ಕಾಲ ಮದ್ಯ ಮಾರಾಟ ಬಂದ್ (Liquor Ban) ಆಗಲಿದೆ. ಜೂನ್ 2, 4 ಮತ್ತು 6 ರಂದು ಮದ್ಯ ಮಾರಾಟ ಸಂಪೂರ್ಣ ಸ್ಥಗಿತವಾಗಿರಲಿದೆ.
ರಾಜ್ಯದಲ್ಲಿ ಲೋಕಸಭೆ ಚುನಾವಣೆಗೆ ಏಪ್ರಿಲ್ 24 ರಿಂದ 26 ರವರೆಗೆ ಮದ್ಯ ಮಾರಾಟ ನಿಷೇಧ ಹೇರಲಾಗಿತ್ತು. ಇದೀಗ ಮತ್ತೆ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ. ಜೂನ್ 1 ಮತ್ತು ಜೂನ್ 3 ರಂದು ಭಾಗಶಃ ಮದ್ಯ ಮಾರಾಟಕ್ಕೆ (Dry days) ಅವಕಾಶ ನೀಡಲಾಗುತ್ತದೆ. ವಿಧಾನಪರಿಷತ್ ಚುನಾವಣೆ ಮತ್ತು ಲೋಕಸಭೆ ಚುನಾವಣೆಯ ಮತ ಎಣಿಕೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ವೈದ್ಯಕೀಯ ಪರೀಕ್ಷೆಯಿಂದಾಗಿ ಇತರೆ ರೋಗಿಗಳಿಗೆ ಸಮಸ್ಯೆ- ಆಸ್ಪತ್ರೆಯಲ್ಲಿ ಸಾರ್ವಜನಿಕರ ಪರದಾಟ

ಜೂನ್ 4 ರಂದು ಮತ ಎಣಿಕೆ ಮುಗಿದ ನಂತರ ಮದ್ಯ ಮಾರಾಟಕ್ಕೆ ಅವಕಾಶ ನೀಡುವಂತೆ ಮತ್ತು ಸಂಸ್ಥೆಗಳಿಗೆ ನಿರ್ಬಂಧಗಳನ್ನು ಮಿತಿಗೊಳಿಸುವಂತೆ ಸಂಘವು ಅಬಕಾರಿ ಆಯುಕ್ತರಿಗೆ ಪತ್ರ ಬರೆದಿದೆ ಎಂದು ಬೃಹತ್ ಬೆಂಗಳೂರು ಹೊಟೇಲ್ ಮಾಲೀಕರ ಸಂಘದ (ಬಿಬಿಎಚ್‌ಎ) ಅಧ್ಯಕ್ಷ ಪಿಸಿ ರಾವ್ ತಿಳಿಸಿದ್ದಾರೆ. ಇದನ್ನೂ ಓದಿ: ಕಬಿನಿಯಲ್ಲಿ ವಿಶ್ರಾಂತಿ ಪಡೆಯಲು ತೆರೆಳಿದ ಹೆಚ್‌ಡಿಕೆ ಕುಟುಂಬ
ಯಾವಾಗಲೆಲ್ಲ ಮದ್ಯ ಮಾರಾಟ ಬಂದ್?
*ವಿಧಾನ ಪರಿಷತ್ ಚುನಾವಣೆಯ ಕಾರಣ ಜೂ.1 ರಿಂದ ಜೂನ್ 3 ರ ಸಂಜೆ 4 ರವರೆಗೆ ಮದ್ಯ ಮಾರಾಟಕ್ಕೆ ನಿಷೇಧ.
* ಜೂನ್ 1 ರಂದು ಸಂಜೆ 4 ರ ಒಳಗೆ ಮತ್ತು ಜೂನ್ 3 ರ ಸಂಜೆ 4 ರ ನಂತರ ಮದ್ಯ ಮಾರಾಟಕ್ಕೆ ಅವಕಾಶವಿದೆ.
* ಜೂನ್ 3 ರ ಮಧ್ಯರಾತ್ರಿಯಿಂದ ಜೂನ್ 4 ರ ಮಧ್ಯರಾತ್ರಿಯವರೆಗೆ ಲೋಕಸಭೆ ಚುನಾವಣೆಯ ಮತ ಎಣಿಕೆ.
* ಜೂನ್ 6 ರಂದು ಬೆಳಿಗ್ಗೆ 6 ರಿಂದ ಮಧ್ಯರಾತ್ರಿಯವರೆಗೆ ಎಂಎಲ್‌ಸಿ ಚುನಾವಣೆಯ ಮತ ಎಣಿಕೆಯ ಕಾರಣ ಮದ್ಯ ಮಾರಾಟ ಬಂದ್.

