ಪರಪ್ಪನ ಅಗ್ರಹಾರಕ್ಕೆ ಮಡೆನೂರು ಮನು
ಮಡೆನೂರು ಮನುಗೆ 14 ದಿನ ನ್ಯಾಯಾಂಗ ಬಂಧನ
ಕೆಲ ದಿನಗಳಿಂದ ಪೊಲೀಸರ ವಶದಲ್ಲಿದ್ದ ಮನು
14 ದಿನಗಳ ಬಳಿಕವೂ ಜಾಮೀನು ದೊರಕುವುದು ಕಷ್ಟ
ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರು ಮನು ವಿರುದ್ಧ ಅತ್ಯಾಚಾರ, ಕೊಲೆ ಬೆದರಿಕೆ, ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದು ಕಳೆದ ಕೆಲ ದಿನಗಳಿಂದ ಪೊಲೀಸರ ವಶದಲ್ಲಿದ್ದ ಮನುವನ್ನು ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯ್ತು. ಇದೀಗ ನ್ಯಾಯಾಲಯವು ಮನುಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಪೊಲೀಸರ ವಶದಲ್ಲಿದ್ದ ಮನುವಿನ ವಿಚಾರಣೆ ನಡೆಸಿ ಮನು ಇದ್ದ ಮನೆ, ಸಂತ್ರಸ್ತೆ ಇದ್ದ ಮನೆ, ಕೆಲ ರೆಸಾರ್ಟ್ಗಳು ಇತ್ಯಾದಿಗಳ ಕಡೆ ಕರೆದೊಯ್ದು ಸ್ಥಳ ಮಹಜರನ್ನು ಪೊಲೀಸರು ಕಳೆದ ಎರಡು ದಿನಗಳಲ್ಲಿ ಮಾಡಿದ್ದರು. ತನಿಖೆ ಮುಗಿದ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮುಂದಿನ ತನಿಖೆಗೆ ಮನುವಿನ ಅಗತ್ಯ ಇಲ್ಲವೆಂದು ನ್ಯಾಯಾಲಯಕ್ಕೆ ತಿಳಿಸಿದರು.
ಅದರಂತೆ ಮನುಗೆ ನ್ಯಾಯಾಧೀಶರು 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.14 ದಿನಗಳ ಬಳಿಕವೂ ಸಹ ಮನುಗೆ ಜಾಮೀನು ದೊರಕುವುದು ಕಷ್ಟ. ಮನು ವಿರುದ್ಧ ಸಂತ್ರಸ್ತೆ ಸಾಕಷ್ಟು ಆರೋಪಗಳನ್ನು ಮಾಡಿದ್ದು, ಮಾಧ್ಯಮಗಳ ಮುಂದೆಯೂ ಮಾತನಾಡಿದ್ದಾರೆ.

