ಬೆಂಗಳೂರು: ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಗೆ ದಕ್ಷಿಣ ಕನ್ನಡ ಜಿಲ್ಲಾ ಸೆಷನ್ಸ್ ಕೋರ್ಟ್ ಶಾಕ್ ಕೊಟ್ಟಿದೆ. ಮಹೇಶ್ ಶೆಟ್ಟಿ ತಿಮರೋಡಿ ನಿರೀಕ್ಷಣಾ ಬೇಲ್ ವಜಾ ಮಾಡಿದ್ದು, ಬಂಧನ ಭೀತಿ ಎದುರಾಗಿದೆ. ಅಕ್ರಮ ಶಸ್ತ್ರಾಸ್ತ್ರ ಪ್ರಕರಣದಲ್ಲಿ ಸಿಲುಕಿರೋ ಮಹೇಶ್ ಶೆಟ್ಟಿ ತಿಮರೋಡಿ ನಿರೀಕ್ಷಣಾ ಬೇಲ್ ಅರ್ಜಿ ಸಲ್ಲಿಸಿದ್ದರು. ಆದರೆ ದಕ್ಷಿಣಕನ್ನಡ ಜಿಲ್ಲಾ ಸೆಷನ್ಸ್ ಕೋರ್ಟ್ ಅರ್ಜಿ ವಜಾ ಮಾಡಿದೆ.
‘ದಕ್ಷಿಣ ಕನ್ನಡ ಜಿಲ್ಲೆಯಿಂದ ಒಂದು ವರ್ಷದ ಅವಧಿಯ ಗಡಿಪಾರು ಆದೇಶ ಎದುರಿಸುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ ಸದ್ಯ ತಲೆ ಮರೆಸಿಕೊಂಡಿದ್ದು, ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ’ ಎಂದು ಅಡ್ವೊಕೇಟ್ ಜನರಲ್ ಹೈಕೋರ್ಟ್‌ಗೆ ತಿಳಿಸಿದ್ದರು.
ಎಸ್‌ಐಟಿ ಅಧಿಕಾರಿಗಳು ತಿಮರೋಡಿ ವಿರುದ್ಧ 7 ವರ್ಷಕ್ಕೂ ಹೆಚ್ಚು ಜೈಲು ಶಿಕ್ಷೆಯಾಗಬಲ್ಲ ಸೆಕ್ಷನ್ ಹಾಕಿದ್ದಾರೆ. ಈಗ ಹಾಕಿರುವ ಸೆಕ್ಷನ್ ಜಾಮೀನು ರಹಿತ ಸೆಕ್ಷನ್ ಎನಿಸಿಕೊಂಡಿದ್ದು, ಈ ಸೆಕ್ಷನ್ ಹಾಕಿದ್ರೆ ನೊಟೀಸ್ ನೀಡದೆ ಬಂಧಿಸಬಹುದು. ಬಂಧಿಸುವ ವಿಚಾರ ತನಿಖಾಧಿಕಾರಿ ವಿವೇಚನೆಗೆ ಬಿಟ್ಟಿದ್ದು. ಆರೋಪ ಸಾಬೀತಾದರೆ, ಆರ್ಮ್ಸ್ ಆ್ಯಕ್ಟ್ 1950 ಅಂಡರ್ ಸೆಕ್ಷನ್ 25 ಸಬ್ ಕ್ಲಾಸ್ ಒನ್ ಎ ಪ್ರಕಾರ 7 ವರ್ಷ ಶಿಕ್ಷೆ, ಆರ್ಮ್ಸ್ ಆ್ಯಕ್ಟ್ 1950 ಅಂಡರ್ ಸೆಕ್ಷನ್ 25 ಸಬ್ ಕ್ಲಾಸ್ ಒನ್ ಬಿ ಪ್ರಕಾರ 10 ವರ್ಷ ಜೈಲು ಶಿಕ್ಷೆ ವಿಧಿಸಬಹುದು.
ಆರ್ಮ್ಸ್ ಆಕ್ಟ್ ನಡಿ ಎಫ್ಐಆರ್ ಬೆನ್ನಲ್ಲೇ ಮಹೇಶ್ ಶೆಟ್ಟಿ ತಿಮರೋಡಿಗೆ ಸಂಕಷ್ಟ ಶುರುವಾಗಿದೆ. ವಶಕ್ಕೆ ಪಡೆದ ಬಂದೂಕಿನ ಪರವಾನಿಗೆ ತೋರಿಸದೇ ಇದ್ದರೆ ತಿಮರೋಡಿ ವಿರುದ್ದ ಕ್ರಮವಾಗುವ ಸಾಧ್ಯತೆ ಇದೆ. ಶಸ್ತ್ರಾಸ್ತ್ರ ಕಾಯ್ದೆಯ ಅಡಿಯಲ್ಲಿ ಲೈಸೆನ್ಸ್ ಹೊಂದಿದ್ದಾರೆಯೇ ಇಲ್ಲವೇ ಎಂಬುದನ್ನು ಬೆಳ್ತಂಗಡಿ ಪೊಲೀಸರಿಗೆ ತಿಮರೋಡಿ ಮಾಹಿತಿ ನೀಡಬೇಕು.
ಅಕ್ರಮ ಶಸ್ತ್ರಾಸ್ತ್ರಗಳು ಮನೆಯಲ್ಲಿ ಇದ್ದಿದ್ದಕ್ಕೆ ತಿಮರೋಡಿಗೆ ಸಂಕಷ್ಟ ಎದುರಾಗಿದೆ. Arms Act ಪ್ರಕಾರ, ಯಾವುದೇ ಶಸ್ತ್ರಾಸ್ತ್ರ ಅಥವಾ ಗುಂಡುಗಳನ್ನು ಹೊಂದಲು ಸಂಬಂಧಿಸಿದ ಲೈಸೆನ್ಸ್ ಇರಬೇಕು. ಪೊಲೀಸರು ವಶಪಡಿಸಿಕೊಂಡಿರುವ ಬಂದೂಕಿಗೆ ಲೈಸೆನ್ಸ್ ಇದ್ದರೆ ತನಿಖಾ ಅಧಿಕಾರಿಯ ಮುಂದೆ ಸಲ್ಲಿಸಲು ಅವಕಾಶ ಇದೆ. ಆದರೆ ತಿಮರೋಡಿ ಲೈಸೆನ್ಸ್ ನೀಡುವ ಬದಲು ತಲೆಮರೆಸಿಕೊಂಡಿದ್ದಾರೆ.
ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು: ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಯನ್ನು ಗಡಿಪಾರು ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಲಾಗಿದೆ. 1 ವರ್ಷದ ಮಟ್ಟಿಗೆ ತಿಮರೋಡಿಯನ್ನು ಗಡಿಪಾರು ಮಾಡಲಾಗಿದ್ದು, ಈ ಅವಧಿಯಲ್ಲಿ ಅವರು ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ.
ಮಹೇಶ್ ಶೆಟ್ಟಿ ತಿಮರೋಡಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಗಡಿಪಾರು ಮಾಡಿ ಸಹಾಯಕ ಆಯುಕ್ತರಾದ ಸ್ಟೆಲ್ಲಾ ವರ್ಗೀಸ್ ಆದೇಶ ಮಾಡಿದ್ದಾರೆ. ಸೌಜನ್ಯ ಪರ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಮಹೇಶ್ ಶೆಟ್ಟಿ ತಿಮರೋಡಿ ಮೇಲೆ ಇದುವರೆಗೂ ವಿವಿಧ ರೀತಿಯ ಸುಮಾರು 32 ಪ್ರಕರಣಗಳು ದಾಖಲಾಗಿವೆ.

