ಮಂಗಳೂರು : ಬಿ.ಎಲ್. ಸಂತೋಷ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಹೇಳಿಕೆ ನೀಡಿರುವ ಪ್ರಕರಣದಲ್ಲಿ ಮಹೇಶ್ ಶೆಟ್ಟಿ ತಿಮರೋಡಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬ್ರಹ್ಮಾವರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲಿಂದ ತೆರಳಿದ್ದ ಪೊಲೀಸರು, ಸ್ಥಳೀಯ ಪೊಲೀಸರ ಸಹಕಾರದಲ್ಲಿ ತಿಮರೋಡಿಯನ್ನು ವಶಕ್ಕೆ ಪಡೆದಿದ್ದಾರೆ.ತಿಮರೋಡಿ ವಿರುದ್ಧ ಎಫ್’ಐಆರ್ ದಾಖಲಾಗಿರುವ ಹಿನ್ನೆಲೆಯಲ್ಲಿ ಅವರನ್ನು ವಶಕ್ಕೆ ಪಡೆಯುಲು ಪೊಲೀಸರು ಆತನ ಉಜಿರೆಯ ಮನೆಗೆ ಬಂದ ವೇಳೆ ಹೈಡ್ರಾಮಾ ನಡೆಯಿತು.
ತಿಮರೋಡಿ ಬೆಂಬಲಿಗರು, ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ನೀವು ವಿಚಾರಣೆಗೆ ಕಡೆಯಿರಿ, ನಾವೇ ಬರುತ್ತೇವೆ. ಆದರೆ, ಈ ರೀತಿ ವಶಕ್ಕೆ ಪಡೆಯವುದು ಸರಿಯಲ್ಲ ಎಂದು ವಿರೋಧಿಸಿದ್ದಾರೆ.
ಈ ವೇಳೆ ಮನೆಯನ್ನು ಪರಿಶೀಲನೆ ನಡೆಸಲು ಮುಂದಾದ ವೇಳೆಯೂ ಸಹ ವಿರೋಧಿಸಿದ್ದು, ಪಟ್ಟು ಬಿಡದ ಪೊಲೀಸರು ಒಳಕ್ಕೆ ತೆರಳಿ ತಿಮರೋಡಿಯನ್ನು ವಶಕ್ಕೆ ಪಡೆದಿದ್ದಾರೆ.ಇನ್ನು, ಪೊಲೀಸ್ ಕಾರು ಹತ್ತದ ತಿಮರೋಡಿ ಸ್ವಂತ ಕಾರಿನಲ್ಲೇ ಗಿರೀಶ್ ಮಟ್ಟಣ್ಣನವರ್ ಜೊತೆಯಲ್ಲಿ ಪೊಲೀಸರೊಂದಿಗೆ ತೆರಳಿದ್ದಾರೆ ಎಂದು ವರದಿಯಾಗಿದೆ.
ಬಿ.ಎಲ್. ಸಂತೋಷ್ ವೈಯಕ್ತಿಕ ವಿಚಾರಗಳ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ತಿಮರೋಡಿ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಉಡುಪಿ ಬ್ರಹ್ಮಾವರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದರನ್ವಯ ಎಫ್’ಐಆರ್ ದಾಖಲಾಗಿದ್ದು, ಇಂದು ಉಜಿರೆ ನಿವಾಸಕ್ಕೆ ಪಡೆದಿದ್ದಾರೆ.

