ಬಾಗಲಕೋಟೆ: 30 ದಾಟಿದ ಯುವಕರಿಗೆ ಈಗ ಹುಡುಗಿಯರು ಸಿಗೋದೇ ಕಠಿಣವಾಗಿದೆ. ಹೀಗಾಗಿ ಜನರು ಮ್ಯಾರೆಜ್ ಬ್ರೋಕರ್ ಮೊರೆ ಹೋಗುತ್ತಿದ್ದಾರೆ. ಹೀಗೆ ಮ್ಯಾರೆಜ್ ಬ್ರೋಕರ್ ಬಳಿ ಹೋಗಿ ಅವರಿಗೆ ಲಕ್ಷ ಲಕ್ಷ ಹಣ ನೀಡಿ ಯಾಮಾರಿದ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ್ನಲ್ಲಿ ನಡೆದಿದೆ.
ಮುಧೋಳದ ಸೋಮಶೇಖರ್ ಮದುವೆಯಾಗಲು ಹೆಣ್ಣು ಹುಡುಕುತ್ತಿದ್ದನು. ಆದರೆ ಎಲ್ಲೂ ಹೆಣ್ಣು ಸೆಟ್ ಆಗಿರಲಿಲ್ಲ ಇಂತವರನ್ನೇ ಟಾರ್ಗೆಟ್ ಮಾಡುವ ಈ ಬ್ರೋಕರ್ ನಿನಗೆ ಮದುವೆ ಮಾಡಿಸುತ್ತೇನೆ ಎಂದು 4 ಲಕ್ಷ ಡಿಮ್ಯಾಂಡ್ ಮಾಡಿದ್ದಾನೆ. ಅದಕ್ಕೆ ಸೋಮಶೇಖರ್ ಒಪ್ಪಿಕೊಂಡಿದ್ದನು. ಅದರಂತೆ ಮಾಡುವೆ ಕೂಡ ಆಗಿದೆ. ಆಯಾದರೆ ಈ ಮಾಡುವುಗೆ ಒಂದೇ ತಿಂಗಳಲ್ಲಿ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಕಳೆದ ವರ್ಷ ಬಾಗಲಕೋಟೆ ಜಿಲ್ಲೆಯ ಮುಧೋಳದ ಕಾಳಿಕಾದೇವಿ ದೇಗುಲದಲ್ಲಿ ಸೋಮಶೇಖರ್ ಎಂಬಾತನಿಗೆ ಶಿವಮೊಗ್ಗದ ಮಂಜುಳಾ ಎಂಬಾಕೆಯನ್ನ ಮದುವೆ ಮಾಡಲಾಯಿತು. ಮದುವೆ ಮಾಡಿಸಿ 4 ಲಕ್ಷ ಹಣ ಪಡೆದು ಬ್ರೋಕರ್ ತಂಡ ಎಸ್ಕೇಪ್ ಆಗಿತ್ತು.
ಮಂಜುಳಾಗೆ ಈಗಾಗಲೇ ಎರಡು ಮದುವೆಯಾಗಿದ್ದು, ಆಕೆಯನ್ನು ದುಡ್ಡಿಗಾಗಿ ಸೋಮಶೇಖರ್ ಜೊತೆ ಮದುವೆ ಮಾಡಿಸಿದ್ದಾರೆ. ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಮಂಜುಳಾ ಎಸ್ಕೇಪ್ ಆಗಿದ್ದಾಳೆ. ಪತ್ನಿ ಬಗ್ಗೆ ವಿಚಾರಿಸಲು ಹೋದ ವೇಳೆ ಈಗಾಗಲೇ ಪತ್ನಿಗೆ ಎರಡು ಮದುವೆಯಾದ ಬಗ್ಗೆ ಸುಳಿವು ಸಿಕ್ಕಿದೆ. ಬ್ರೋಕರ್ ಟೀಮ್ ಹಣ ಹೊಡೆಯಲು ಮದುವೆಯಾದ ಮಹಿಳೆಯನ್ನೇ ಶಿವಮೊಗ್ಗದಿಂದ ಮುಧೋಳಕ್ಕೆ ಕರೆ ತಂದಿತ್ತು.
ಮೋಸಕ್ಕೊಳಗಾದ ಸೋಮಶೇಖರ್ ಬ್ರೋಕರ್ ಟೀಮ್ ಗೆ ತಾನು ನೀಡಿದ 4 ಲಕ್ಷ ಹಣ ಮರಳಿಸುವಂತೆ ಕೇಳಿಕೊಂಡಿದ್ದಾನೆ ಆದರೆ ಬ್ರೋಕರ್ ಮಾತ್ರ ಹಣ ವಾಪಸ್ ನೀಡಿಲ್ಲ. ಕೊನೆಗೆ ಹಣ ಬಾರದೇ ಇದ್ದಾಗ ಸೋಮಶೇಖರ್‌ನು ಮುಧೋಳ ಪೊಲೀಸ್ ಠಾಣೆಯಲ್ಲಿಆರೋಪಿ ಸತ್ಯಪ್ಪ ಮತ್ತು ಮಂಜುಳಾ ಸೇರಿ 7 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾನೆ. ಆರೋಪಿಗಳ ಪತ್ತೆಗೆ ಮುಧೋಳ ಠಾಣೆ ಪೋಲಿಸರು ಹುಡುಕಾಟ ನಡೆಸಿದ್ದಾರೆ.

