ಮಂತ್ರಾಲಯ : ಮಂತ್ರಾಲಯ ಸೇರಿದಂತೆ ನಾಡಿನೆಲ್ಲೆಡೆ ರಾಯರ 353ನೇ ಆರಾಧನಾ ಮಹೋತ್ಸವ ಸಂಭ್ರಮ ಮನೆ ಮಾಡಿದೆ. ಸಪ್ತರಾತ್ರೋತ್ಸವದ ಮಧ್ಯಾರಾಧನೆಯಾದ ಇಂದು ರಾಘವೇಂದ್ರ ಸ್ವಾಮಿಗಳು ವೃಂದಾವನಸ್ಥರಾದ ದಿವಸ.. ದೇವರ ಧ್ಯಾನದಲ್ಲಿರುವ ರಾಯರು ಇಂದು ಕಣ್ಣೆರೆದು ಭಕ್ತರ ಕಡೆ ದೃಷ್ಟಿ ಹಾಯಿಸಲಿದ್ದು.., ಈ ದಿನ ರಾಯರ ದರ್ಶನ ಪಡೆದರೆ ಸಕಲ ಸಂಕಷ್ಟಗಳು ದೂರಾಗುತ್ತವೆ ಎಂಬ ನಂಬಿಕೆ ಇದೆ. ಹೀಗಾಗಿ ಇಂದು ಎಲ್ಲೆಡೆ ರಾಯರ ಮಠಗಳಿಗೆ ಭಕ್ತಾದಿಗಳು ತೆರಳಿ ಬೃಂದಾವನವನಕ್ಕೆ ನಮಿಸಿದರು.




