ಬೆಂಗಳೂರು: ರಾಜ್ಯದಲ್ಲಿ ಸಿಲಿಕಾನ್ ಸಿಟಿ (Silicon City) ಸೇರಿದಂತೆ , ಕೊಡಗು, ಹಾಸನ, ಸೇರಿದಂತೆ ರಾಜ್ಯದ ಹಲವೆಡೆ ಇಂದು ಮಳೆಯಾಗಲಿದೆ (Rain) ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಶಿವಮೊಗ್ಗ, ತುಮಕೂರು, ವಿಜಯನಗರ, ರಾಮನಗರ, ಮಂಡ್ಯ, ಕೋಲಾರ, ದಾವಣಗೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರದಲ್ಲೂ ಮಳೆಯಾಗಲಿದೆ. ಎಂಎಂ ಹಿಲ್ಸ್, ಬಂಡೀಪುರ, ಸಿದ್ದಾಪುರ, ಬೇಗೂರು, ಚಾಮರಾಜನಗರ, ಮೂರ್ನಾಡು, ಎಚ್ಡಿ ಕೋಟೆ, ಪುತ್ತೂರು, ಸುಳ್ಯ, ಕೃಷ್ಣರಾಜಪೇಟೆ, ಮೈಸೂರು, ಕುಶಾಲನಗರ, ಹುಣಸೂರು, ಹಾರಂಗಿ, ಮಂಗಳೂರು, ಸೋಮವಾರಪೇಟೆ, ಕನಕಪುರ, ಭಾಗಮಂಡಲ, ಬಾಳೆಹೊನ್ನೂರಿನಲ್ಲಿ ಮಳೆಯಾಗಿದೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಕ್ರಿಕೆಟ್ ಜಗಳ ತಾರಕಕ್ಕೇರಿ ಗಲಾಟೆ -ಓರ್ವ ಪೊಲೀಸ್ ಪೇದೆಗೆ ಗಾಯ

ದಕ್ಷಿಣ ಕನ್ನಡ, ಉಡುಪಿ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗಲಿದ್ದು ಯೆಲ್ಲೋ ಅಲರ್ಟ್ ಘೊಷಿಸಲಾಗಿದೆ. ಇದನ್ನೂ ಓದಿ: ವಕೀಲೆ ಚೈತ್ರಾ ಗೌಡ ಸಾವು ಪ್ರಕರಣ: ಅನುಮಾನಾಸ್ಪದ ಸಾವು ಕೊಲೆಯಲ್ಲ, ಆತ್ಮಹತ್ಯೆ
ಸದ್ಯ ಬಿಸಿಲಿನ ತಾಪಕ್ಕೆ ಜನರು ಬೆಂದು ಹೋಗಿದ್ದರು ಇದೀಗ ವರುಣ ತಂಪೆರೆದಿದ್ದಾನೆ. ಇಂದು ಮತ್ತಷ್ಟು ಮಳೆಯಾಗಲಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ನನ್ನ ತಾಳ್ಮೆ ಪರೀಕ್ಷಿಸಬೇಡ, ಎಲ್ಲೇ ಇದ್ದರೂ ಕೂಡಲೇ ಸ್ವದೇಶಕ್ಕೆ ಬಾ – ಪ್ರಜ್ವಲ್‌ಗೆ ಹೆಚ್‌ಡಿಡಿ ಸೂಚನೆ

