ಬಾಗಲಕೋಟ : ಇಂದು ಬಾಗಲಕೋಟ ಜಿಲ್ಲೆ ಗುಳೇದಗುಡ್ಡ ತಾಲೂಕು ನಗರದಲ್ಲಿ ನಡೆದ ಶರಣ ಸಂಗಮ ಸಮಾರಂಭ ಪರಮ ಪೂಜ್ಯ ಶ್ರೀ ಗುರುಬಸವದೇವರ ಪಟ್ಟಾಭಿಷೇಕ ಕಾರ್ಯಕ್ರಮ & ಸರ್ವಧರ್ಮಸಾಮಾಜಿಕ ವಿವಾಹ ಜರುಗಿತು.
ಈ ಸಂದರ್ಭದಲ್ಲಿ ಮಾನ್ಯ ಶ್ರೀ ಭೀಮಸೆನ್ ಬಿ ಚಿಮ್ಮನಕಟ್ಟಿ ಶಾಸಕರು ಬಾದಾಮಿ ಇವರು ಈ ಕಾರ್ಯಕ್ರಮವನ್ನು ಉದ್ದೇಶಿಸಿ ಹಿತನುಡಿಗಳನ್ನಾಡಿದ ಶಾಸಕರು ಸ್ವಾಮಿಜಿಗಳ ಮೆಚ್ಚುಗೆಗೆ ಪಾತ್ರರಾದರು ಅಲ್ಲಿ ನೆರೆದಿದ್ದ ಮಹಾ ಜದ್ಗುರುಗಳು ಹಿತನುಡಿಗಳು ಕೇಳಿದ ಸಮಸ್ತ ಭಕ್ತ ವೃಂದ ಹಾಗು ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ ಅನೇಕ ಜಿಲ್ಲೆಯ ಹಿರಿಯರಾದ ಜಗದೀಶ್ ಶೆಟ್ಟರ್ ಬೆಳಗಾವಿ ಎಂಪಿ ಹಾಗು ಮಾಜಿ MLCಎಸ್ ಆರ್ ಪಾಟೀಲ್ ಮಾಜಿ ಶಾಸಕರು ಶ್ರೀ ರಾಜಶೇಖರ್ ಶೀಲವಂತ ಜೆಡಿಎಸ್ ಜಿಲ್ಲಾ ಅಧ್ಯಕ್ಷರು ಹಣಮಂತ ಮಾವಿನಮರದ ಮಾಜಿ ಶಾಸಕರು ವೀರಣ್ಣ ಚರಂತಿಮಠ ಮಾಜಿ ಶಾಸಕರು ಎಂ ಕೆ ಪಟ್ಟಣಶೆಟ್ಟಿ ಹೀಗೆ ಹಲವಾರು ಗಣ್ಯವ್ಯಕ್ತಿಗಳು ಭಾಗವಹಿಸಿದ್ದು ಗುಳೇದಗುಡ್ಡದಲ್ಲಿ ಈ ಒಂದು ಸುವರ್ಣ ಮಹೋತ್ಸವ ಎಂಟು ದಿನಗಳು ಕಾಲ ಈ ಕಾರ್ಯಕ್ರಮ ನಡೆದದ್ದು ತುಂಬಾ ವಿಶೇಷ ಎಂದು ಗುಳೇದಗುಡ್ಡ ನಗರದ ಜನರು ಸಂತೋಷ ವ್ಯಕ್ತಪಡಿಸಿದರು.


