ಕುಣಿಗಲ್: ಜ 12 – ಪಟ್ಟಣದ ಕುಣಿಗಲ್ ಪೊಲೀಸ್ ಠಾಣೆಯ ಪೋಲಿಸ್ ಇನ್ಸ್ಪೆಕ್ಟರ್ ಆದ ಅತ್ಯುತ್ತಮವಾದ ಸೌಜನ್ಯತೆಯುಳ್ಳವರಾದ “ನವೀನಗೌಡ ಎಸ್ ಬಿ”ಆರಕ್ಷಕ ನಿರೀಕ್ಷಕರು ನನ್ನ ಎಲ್ಲಾ ದಲಿತ ಮುಖಂಡರುಗಳಿಗೂ ಹಾಗೂ ಎಲ್ಲಾ ಪೊಲೀಸ್ ಸಿಬ್ಬಂದಿಗಳಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳನ್ನು ತಿಳಿಸಿ ಶುಭಾಶಯ ಕೋರುವದರ ಮೂಲಕ ಇಂದು ಕುಣಿಗಲ್ ಪೊಲೀಸ್ ಠಾಣ ವ್ಯಾಪ್ತಿಯ ಸಭಾಂಗಣದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಕುಂದು ಕೊರತೆಗಳ ಬಗ್ಗೆ ಸಭೆ ಕರೆದು ದಲಿತ ಮುಖಂಡರುಗಳ ಅಹವಾಲುಗಳನ್ನು ಸ್ವೀಕರಿಸಿ ಚರ್ಚೆಯನ್ನು ನಡೆಸಿದರು,
ಈ ಸಭೆಯಲ್ಲಿ ಭಾಗವಹಿಸಿದ ಆರ್ ಎನ್ ಹಟ್ಟಿರಂಗಯ್ಯ( ರಂಗಣ್ಣ) ದಲಿತ ಮುಖಂಡರು ಮಾತನಾಡಿ ಕುಣಿಗಲ್ ಸರ್ಕಾರಿ ಆಸ್ಪತ್ರೆಯ ಪಕ್ಕದಲ್ಲಿರುವ ಟ್ಯಾಕ್ಸಿ ಸ್ಟ್ಯಾಂಡ್ ಬಳಿ ಹೊಸದಾಗಿ ಒಂದು ಶೌಚಾಲಯವನ್ನು ನಿರ್ಮಾಣ ಮಾಡಿದ್ದು ಹಿಂದಿನ ಸಭೆಯಲ್ಲಿ ಸಭೆಯಲ್ಲಿ ಚರ್ಚಿಸಿ ಮಾತನಾಡಿದ ಅವರು ಸುಮಾರು ವರ್ಷಗಳು ಕಳೆದರೂ ಅದನ್ನು ತೆರೆದಿರುವುದಿಲ್ಲ ಹಾಗೂ ಸಾರ್ವಜನಿಕರ ಉಪಯೋಗಕ್ಕೆ ಬಂದಿರುವುದಿಲ್ಲ ಎಂದರು,
ಈ ಕೂಡಲೇ ನಿರ್ಮಾಣವಾಗಿರುವ ಶೌಚಾಲಯವನ್ನು ತೆರೆಯುವಂತೆ ಪುರಸಭೆ ಮುಖ್ಯಾಧಿಕಾರಿ ಮಂಜುಳಾ ಅವರಿಗೆ ಪತ್ರವನ್ನೂ ವ್ಯವಹರಿಸಬೇಕೆಂದು ಎಸ್ ಸಿ ಎಸ್ ಟಿ ಕುಂದು ಕೊರತೆ ಸಭೆಯಲ್ಲಿ 17.12.2024 ರಂದು ಕೋರಿದ್ದರು, ಅದರಂತೆ ಕುಣಿಗಲ್ ಪೊಲೀಸ್ ಇನ್ಸ್ಪೆಕ್ಟರ್ ರವರಾದ ನವೀನ್ ಗೌಡ ಎಸ್ ಬಿ ಆರಕ್ಷಕ ನಿರೀಕ್ಷಕರು ಪುರಸಭೆ ಮುಖ್ಯಾಧಿಕಾರಿಯವರಿಗೆ 18.12.2024 ರಂದು ಪತ್ರ ವ್ಯವಹಾರ ಮಾಡಿದ್ದರೂ ಸಹ ಇಲ್ಲಿಯವರೆಗೂ ಯಾವುದೇ ರೀತಿ ಕ್ರಮ ವಹಿಸಿರುವುದಿಲ್ಲ,
ಆದ್ದರಿಂದ ದಲಿತ ಮುಖಂಡರಾದ ಹಟ್ಟಿ ರಂಗಯ್ಯನವರು ಪುರಸಭೆ ಅಧಿಕಾರಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು , ಕೆಲವು ದಲಿತ ಮುಖಂಡರುಗಳು ಎಲ್ಲಾ ಕುಂದು ಕೊರತೆಯ ಬಗ್ಗೆ ಠಾಣೆಯಲ್ಲಿ ಧ್ವನಿ ಎತ್ತಿದರು, ಇದೇ ಸಂದರ್ಭದಲ್ಲಿ, ದಲಿತ ಮುಖಂಡರುಗಳು ಹಾಗೂ ಪೋಲಿಸ್ ಸಿಬ್ಬಂದಿಗಳು ಹಾಜರಿದ್ದರು,