ಒಂಟಿತನವೆಂಬುದು ಮನುಷ್ಯನ ಜೀವನದಲ್ಲಿ ಹಲವಾರು ಕಾರಣಗಳಿಂದ ಸಂಭವಿಸುತ್ತದೆ. ಕೆಲವರು ಒಂಟಿತನವನ್ನೇ ಜೀವಮಾನದುದ್ದಕ್ಕೂ ಆಯ್ಕೆಮಾಡಿಕೊಂಡರೆ ಇನ್ನು ಕೆಲವರು ಪತಿಯಿಂದ ದೂರವಾಗಿ, ಸಂಗಾತಿಯನ್ನು ಕಳೆದುಕೊಂಡು ಒಂಟಿತನದ ಬದುಕು (Life) ಒಳ್ಳೆಯದು ಎಂದು ಆಯ್ಕೆಮಾಡಿಕೊಂಡಿರುತ್ತಾರೆ. ಹೀಗೆ ಮನುಷ್ಯನಿಗೆ ಒಂಟಿತನ ಉಂಟಾಗಲು ಇದುವೇ ಕಾರಣ ಎಂದು ಹೇಳಲಾಗುವುದಿಲ್ಲ. ಆದರೆ ಒಂಟಿಯಾಗಿರುವುದು (Solo) ಕೆಲವು ಕಾಲ ಒಳ್ಳೆಯ ನಿರ್ಧಾರವೆಂಬುದಾಗಿ (Decision) ತಿಳಿದರೂ ಸಮಯ ಸರಿದಂತೆ ಅದೊಂದು ಹಿಂಸೆಯಾಗಿ ಪರಿವರ್ತನೆಗೊಳ್ಳುತ್ತದೆ. ಮಾನಸಿಕ ಹಿಂಸೆಯಾಗಿ ಅದು ಮನುಷ್ಯನನ್ನು ಸತಾಯಿಸುತ್ತದೆ.
ತಮಗೊಬ್ಬ ಸಂಗಾತಿ ಇರಬೇಕು ಹಾಗೂ ತಮ್ಮ ಯೋಗಕ್ಷೇಮವನ್ನು ವಿಚಾರಿಸಲು ಯಾರಾದರೂ ತಮ್ಮೊಂದಿಗೆ ಇರಬೇಕು ಎಂಬ ಹಂಬಲ ಉಂಟಾಗುತ್ತದೆ. ಅಂತೆಯೇ ಇದು ಋಣಾತ್ಮಕ ಯೋಚನೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ಇದರಿಂದ ಜನರೊಂದಿಗೆ ಸಂಪರ್ಕ ಸಾಧಿಸುವುದು ದುಸ್ತರವಾಗುತ್ತದೆ.
ಒಂಟಿತನದಿಂದ ಮೆದುಳಿನ ಮೇಲೆ ಯಾವ ರೀತಿ ಪರಿಣಾಮ ಉಂಟಾಗುತ್ತದೆ
ಒಂಟಿತನವು ಮೆದುಳಿನ ಕೋಶಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಅಧ್ಯಯನ ತಿಳಿಸಿದೆ. ಹಿರಿಯರಲ್ಲೂ, ಕಿರಿಯರಲ್ಲೂ ಒಂಟಿತನದ ಪರಿಣಾಮವು ಮೆದುಳಿನ ಮೇಲೆ ಅಗಾಧ ಪರಿಣಾಮವನ್ನುಂಟು ಮಾಡುತ್ತದೆ.
ಋಣಾತ್ಮಕ ಯೋಚನೆಗಳನ್ನು ಹೆಚ್ಚಿಸುತ್ತದೆ. ಸಾಮಾಜಿಕವಾಗಿ ಬೆರೆಯುವುದನ್ನು ತಡೆಯುತ್ತದೆ. ಏಕಾಂಗಿ ಜನರ ಮೆದುಳು ಜಗತ್ತನ್ನು ವಿಲಕ್ಷಣವಾಗಿ ಪ್ರಕ್ರಿಯೆಗೊಳಿಸುತ್ತದೆ ಎಂದು ಇತ್ತೀಚಿನ ಅಧ್ಯಯನವು ಕಂಡುಹಿಡಿದಿದೆ.
ಸಮೀಕ್ಷೆಯಲ್ಲಿ ಅಧ್ಯಯನಕಾರರು ಹೇಳಿದ್ದೇನು?
ಇದಕ್ಕಾಗಿ ಸಂಶೋಧಕರು ಸಮೀಕ್ಷೆಯೊಂದನ್ನು ಕೈಗೊಂಡಿದ್ದು ಸಮೀಕ್ಷೆಯಲ್ಲಿ ಭಾಗವಹಿಸುವವರಿಗೆ ಎಫ್‌ಎಂಆರ್‌ಐ ಸ್ಕ್ಯಾನರ್‌ನೊಳಗೆ ವೀಡಿಯೊ ಕ್ಲಿಪ್‌ಗಳ ಸರಣಿಯನ್ನು ವೀಕ್ಷಿಸಲು ಕೇಳಿಕೊಂಡರು ಹಾಗೂ ಏಕಾಂಗಿಯಲ್ಲದ ಹಾಗೂ ಒಂಟಿತನದ ಸಮಸ್ಯೆಯಿಂದ ಬಳಲುತ್ತಿರುವವರು ಪ್ರತ್ಯೇಕವಾಗಿ ನರಮಂಡಲ ವ್ಯವಸ್ಥೆಯನ್ನು ಪ್ರದರ್ಶಿಸಿದ್ದಾರೆ.
ಕಾಲ್ಪನಿಕ ಪಾತ್ರಗಳನ್ನು ತಮ್ಮ ಜೀವನದೊಂದಿಗೆ ಹೋಲಿಸಿಕೊಂಡರು
ಒಂಟಿಯಾಗಿರುವ ಜನರು ಕಾಲ್ಪನಿಕ ಪಾತ್ರಗಳನ್ನು ಹೇಗೆ ವೀಕ್ಷಿಸುತ್ತಾರೆ ಎಂಬುದು ಈ ಸಮೀಕ್ಷೆಯಲ್ಲಿ ಸ್ಪಷ್ಟವಾಗಿದೆ. US ನಲ್ಲಿನ ಸಂಶೋಧಕರು ಗೇಮ್ ಆಫ್ ಥ್ರೋನ್ಸ್‌ನ ಸೀಸನ್ ಬಳಸಿ ಭಾಗವಹಿಸುವವರ ಮೇಲೆ ಮೆದುಳಿನ ಸ್ಕ್ಯಾನ್‌ಗಳನ್ನು ನಡೆಸಿದರು.
ಆದರೆ ಈ ಪಾಲ್ಗೊಳ್ಳುವವರು ಸೀಸನ್‌ನ ಪಾತ್ರಗಳನ್ನು ವಿವಿಧ ವಿಶೇಷಣಗಳನ್ನು ನಿಖರವಾಗಿ ವಿವರಿಸಬಹುದೇ ಎಂದು ನಿರ್ಧರಿಸಿದರು. ಅಧ್ಯಯನದ ಲೇಖಕರು, ಭಾಗವಹಿಸಿದ ಜನ ಮೆದುಳಿನಲ್ಲಿನ ಚಟುವಟಿಕೆಯನ್ನು ಗುರುತಿಸಲು ಸಮರ್ಥರಾಗಿದ್ದಾರೆ, ಅದು ನೈಜ ಮತ್ತು ಕಾಲ್ಪನಿಕ ಜನರ ನಡುವೆ ವ್ಯತ್ಯಾಸವನ್ನು ತೋರಿಸುತ್ತದೆ ಎಂದು ಹೇಳುತ್ತಾರೆ.
ಇದನ್ನೂ ಓದಿ:
ಸಂಸ್ಕರಿಸಿದ ಸಕ್ಕರೆಯುಕ್ತ ಆಹಾರವನ್ನು ತಿನ್ನೋದು ಆರೋಗ್ಯಕ್ಕೆ ಖಂಡಿತ ಒಳ್ಳೆಯದಲ್ಲ!
ಒಂಟಿಯಾಗಿರುವ ಜನರು ತಮ್ಮ ಆಲೋಚನೆಗಳನ್ನು ಸ್ಪಷ್ಟವಾಗಿ ಬಹಿರಂಗಗೊಳಿಸುವಲ್ಲಿ ಸಾಕಷ್ಟು ಗೊಂದಲಗಳನ್ನೆದುರಿಸಿದರು. ಪಾತ್ರಗಳನ್ನು ವಿಶದೀಕರಿಸುವಾಗ ಕೂಡ ಅವರು ತಮ್ಮ ಭಾವನೆಗಳಿಗೆ ಅನುಗುಣವಾಗಿಯೇ ಪಾತ್ರಗಳನ್ನು ಮನಸ್ಸಿನಲ್ಲಿ ಆಲೋಚಿಸಿದರು ಎಂದು ಅಧ್ಯಯನಕಾರರು ತಿಳಿಸಿದ್ದಾರೆ.
ಒಂಟಿತನದ ಪರಿಣಾಮವನ್ನು ಸ್ಪಷ್ಟೀಕರಿಸಿದ ಇನ್ನೊಂದು ಅಧ್ಯಯನ
ಸಂಶೋಧನೆಗಳು, ಒಂಟಿತನವು ಈ ರೀತಿಯ ಆಲೋಚನಾ ವಿಧಾನವನ್ನು ಉಂಟುಮಾಡುತ್ತದೆಯೇ ಅಥವಾ ಕಾಲ್ಪನಿಕ ಪಾತ್ರಗಳನ್ನು ಈ ರೀತಿಯಲ್ಲಿ ಪರಿಗಣಿಸುವುದರಿಂದ ಜನರು ಒಂಟಿತನವನ್ನು ಅನುಭವಿಸುತ್ತಾರೆಯೇ ಎಂಬುದು ಅಸ್ಪಷ್ಟವಾಗಿದೆ ಎಂದು ಹೇಳಿವೆ.
ಸ್ಕಾಟ್ಲೆಂಡ್‌ನ ಸಂಶೋಧಕರು ನಡೆಸಿದ ಮತ್ತೊಂದು ಇತ್ತೀಚಿನ ಅಧ್ಯಯನವು ಒಂಟಿತನವು ಮನುಷ್ಯನ ಅರಿವಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದಕ್ಕೆ ಹೆಚ್ಚಿನ ಪುರಾವೆಗಳನ್ನು ಒದಗಿಸಿದೆ.
ಈ ಅಧ್ಯಯನವು ನಿರ್ಜೀವ ವಸ್ತುಗಳ ಮೇಲೆ ಕೇಂದ್ರೀಕರಿಸಿದೆ. ಭಾಗವಹಿಸುವವರಿಗೆ ಪ್ಯಾರೆಡೋಲಿಕ್ ಮುಖಗಳನ್ನು ಹೊಂದಿರುವ ಉತ್ಪನ್ನಗಳ ಚಿತ್ರಗಳನ್ನು ತೋರಿಸಲಾಯಿತು (ಮುಖದಂತಹ ಮಾದರಿಗಳು) ಮತ್ತು ಉತ್ಪನ್ನವನ್ನು ಅನ್ವೇಷಿಸಲು ಅವರು ಎಷ್ಟು ಉತ್ಸುಕರಾಗಿದ್ದರು ಮತ್ತು ಅದನ್ನು ಖರೀದಿಸಲು ಎಷ್ಟು ಸಾಧ್ಯತೆಗಳಿವೆ ಎಂಬಂತಹ ಹಲವಾರು ರೇಟಿಂಗ್‌ಗಳನ್ನು ನೀಡಲು ಕೇಳಲಾಯಿತು.
ಭಾಗವಹಿಸಿದ ಒಂಟಿಯಾಗಿರುವ ಜನರು ಸಂತೋಷದ ರಚನೆಗಳಂತಹ ಮಾದರಿಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಿದರು. ಇಂತಹ ಉತ್ಪನ್ನಗಳ ಖರೀದಿಗೆ ಹೆಚ್ಚು ಕಾಳಜಿವಹಿಸಿದರು.
ಜೋಗುಳ ಸೀರಿಯಲ್ ನಟಿಯ ಬೋಲ್ಡ್ ಫೋಟೋಸ್!
ತಮ್ಮ ಒಂಟಿತನ ಹಾಗೂ ಬೇಸರವನ್ನು ಕಳೆಯಲು ಸಂತೋಷವಾಗಿರುವ ವ್ಯಕ್ತಿಗಳು ಹಾಗೂ ಸಂತೋಷಕರ ವಾತಾವರಣಕ್ಕೆ ಅವರು ಹೆಚ್ಚು ಆದ್ಯತೆ ನೀಡುತ್ತಿದ್ದಾರೆ ಎಂಬುದು ಸಮೀಕ್ಷೆಯಿಂದ ತಿಳಿದು ಬಂದಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ