ಬೆಂಗಳೂರು : ಮುಡಾ ಟೆನ್ಷನ್ ನಡುವೆಯೂ ಸಚಿವ ಬೈರತಿ ಸುರೇಶ್ ಭರ್ಜರಿ ಸ್ಟೆಪ್ ಹಾಕಿದ್ದಾರೆ. ಸಂಜಯನಗರದ ದಸರಾ ಕಾರ್ಯಕ್ರಮದಲ್ಲಿ ಟಗರು ಬಂತು, ಟಗರು ಸಾಂಗ್ ಗೆ ಕುಣಿದು ಕುಪ್ಪಳಿಸಿದ್ದಾರೆ.
ಈ ನಡುವೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿನ ಅಕ್ರಮ ಪ್ರಕರಣ ಸಂಬಂಧ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಹಾಗೂ ಮೈಸೂರು ಲೋಕಾಯುಕ್ತದ ಹಿಂದಿನ ಎಸ್ಪಿ ಸುಜೀತ್ ಅವರ ವಿರುದ್ಧ ಆರ್ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಿದ್ದಾರೆ.
ಭಾನುವಾರ ಇಮೇಲ್ ಮೂಲಕ ಡಿಜಿ ಮತ್ತು ಐಜಿಪಿಯವರಿಗೆ ದೂರು ನೀಡಿದ್ದ ಸ್ನೇಹಮಯಿ ಕೃಷ್ಣ, ಇಂದು ಖುದ್ದು ಡಿಜಿ ಮತ್ತು ಐಜಿಪಿಯವರನ್ನು ಭೇಟಿಯಾಗಿ ದೂರು ಸಲ್ಲಿಕೆ ಮಾಡಿದ್ದಾರೆ.

