By using this site, you agree to the Privacy Policy and Terms of Use.
Accept
Sampoorna NewsSampoorna NewsSampoorna News
  • Home
  • Latest
  • ರಾಜ್ಯ
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
  • ಕ್ರೀಡೆ
    • ಕ್ರಿಕೆಟ್
    • ಇತರೆ
  • ಕೃಷಿ-Agriculture
  • ಆಹಾರ
    • ಸಸ್ಯಾಹಾರಿ
    • ಮಾಂಸಾಹಾರಿ
  • ಕ್ರೈಂ
  • Court
  • epaper
  • Web Stories
  • Videos
Reading: ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಕುಮಾರಸ್ವಾಮಿ ವಿಸ್ತೃತ ಮಾತುಕತೆ
Share
Font ResizerAa
Font ResizerAa
Sampoorna NewsSampoorna News
  • Home
  • Latest
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
  • ಕ್ರೀಡೆ
  • ಕೃಷಿ-Agriculture
  • ಆಹಾರ
  • ಕ್ರೈಂ
  • Court
  • epaper
  • Web Stories
  • Videos
  • ಜಿಲ್ಲೆಗಳು
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • Entertainment
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
Have an existing account? Sign In
Follow US
© 2024 All Rights Reserved.

Home - ರಾಷ್ಟ್ರೀಯ-National - ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಕುಮಾರಸ್ವಾಮಿ ವಿಸ್ತೃತ ಮಾತುಕತೆ

ರಾಷ್ಟ್ರೀಯ-NationalLatest

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಕುಮಾರಸ್ವಾಮಿ ವಿಸ್ತೃತ ಮಾತುಕತೆ

Minister Kumaraswamy holds extensive talks with Dubai Finance Minister*

Published July 1, 2025
Share
4 Min Read
HDk HDk HDk
SHARE

ದುಬೈ, : ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ ಉನ್ನತ ನಾಯಕರೊಂದಿಗೆ ಮಹತ್ವದ ಮಾತುಕತೆ ನಡೆಸಿದ್ದಾರೆ.

ಉಕ್ಕು ಹಾಗೂ ಅಲ್ಯೂಮೀನಿಯಂ ಕುರಿತಾಗಿ ಅವರು ಮಾತುಕತೆ ನಡೆಸಲಾಗಿದ್ದು; ಗ್ರೀನ್‌ ಸ್ಟೀಲ್‌, ಉನ್ನತ ದರ್ಜೆಯ ಅಲ್ಯೂಮೀನಿಯಂ ಕುರಿತ ಭಾರತ -ಯುಎಇ ನಡುವಿನ ದೀರ್ಘಕಾಲೀನ ಸಹಯೋಗಕ್ಕೆ ಒತ್ತು ನೀಡಲಾಗಿದೆ ಎಂದು ಸಚಿವ ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.

ಈ ಕುರಿತಂತೆ ಯುಎಇ ಹಣಕಾಸು ಸಚಿವರಾದ ಎಚ್.ಇ. ಅಬ್ದುಲ್ಲಾ ಬಿನ್ ತೌಕ್ ಅಲ್ ಮರ್ರಿ ಅವರನ್ನು ಭೇಟಿ ಮಾಡಿ ಮಹತ್ವದ ಸಮಾಲೋಚನೆ ನಡೆಸಿದರು, ಉಕ್ಕು ಸಚಿವ ಕುಮಾರಸ್ವಾಮಿ ಅವರು; ವ್ಯಾಪಾರ ವಿಸ್ತರಣೆ, ಸಂಪನ್ಮೂಲಗಳ ಖಾತರಿ ಮತ್ತು ಉಕ್ಕು- ಅಲ್ಯೂಮಿನಿಯಂನಲ್ಲಿ ಸಹಯೋಗ, ನಾವೀನ್ಯತೆಗಳನ್ನು ಕೇಂದ್ರೀಕೃತವಾಗಿರಿಸಿಕೊಂಡು ಚರ್ಚೆ ನಡೆಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ೨೦೩೦ರ ಹೊತ್ತಿಗೆ ದೇಶಿಯವಾಗಿ ವಾರ್ಷಿಕ ೩೦೦ ದಶಲಕ್ಷ ಟನ್‌ ಉಕ್ಕು ಉತ್ಪಾದನೆ ಮಾಡುವ ಗುರಿ ಹೊಂದಿದ್ದು, ಈ ನಿಟ್ಟಿನಲ್ಲಿ ಭಾರತವು ನಿರ್ಣಾಯಕ ಕ್ರಮಗಳ ಮೂಲಕ ಮುನ್ನಡೆಯುತ್ತಿದೆ ಎಂದು ಇದೇ ಸಂದರ್ಭದಲ್ಲಿ ಕೇಂದ್ರ ಸಚಿವರು ಒತ್ತಿ ಹೇಳಿದರು.

ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಭಾರತವು ಸ್ಥಿತಿ ಸ್ಥಾಪಕತ್ವ, ಸಂಪನ್ಮೂಲಗಳ ಖಾತರಿ ಮತ್ತು ಸುರಕ್ಷಿತೆ, ನಾವೀನ್ಯತೆ ಚಾಲಿತ ಬಲವಾದ ಜಾಗತಿಕ ಕೈಗಾರಿಕಾ ಪಾಲುದಾರಿಕೆಗಳನ್ನು ರೂಪಿಸಿಕೊಳ್ಳಲು ಗಂಭೀರ ಪ್ರಯತ್ನಗಳನ್ನು ಮಾಡುತ್ತಿದೆ. ಈ ಗುರಿ ಮುಟ್ಟಲು ಭಾರತವು ಜಾಗತಿಕವಾಗಿ ಉತ್ತಮ ಪಾಲುದಾರರತ್ತ ಕೈ ಚಾಚಿದೆ ಎಂದು ಅವರು ಮಾತುಕತೆಯ ವೇಳೆ ಅಬ್ದುಲ್ಲಾ ಬಿನ್ ತೌಕ್ ಅಲ್ ಮರ್ರಿ ಅವರಿಗೆ ತಿಳಿಸಿದರು.

image image image
ದುಬೈ ಪ್ರವಾಸದಲ್ಲಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದು ಅಬುಧಾಬಿಯಲ್ಲಿ ಪ್ರಸಿದ್ಧ ಶ್ರೀ ಅಕ್ಷರ ಪುರುಷೋತ್ತಮ ನಾರಾಯಣ (Bochasanwasi Shri Akshar Purushottam Swaminarayan Sanstha) ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ದ್ವಿಪಕ್ಷೀಯ ಕೈಗಾರಿಕಾ ಸಂಬಂಧಗಳನ್ನು ಬಲಪಡಿಸುವ ಅವಕಾಶವನ್ನು ಮುಕ್ತವಾಗಿ ಸ್ವಾಗತಿಸಿದ ಕುಮಾರಸ್ವಾಮಿ ಅವರು, ಜಗತ್ತಿನ ಎರಡನೇ ಅತಿದೊಡ್ಡ ಉಕ್ಕು ಉತ್ಪಾದಕ ದೇಶವಾಗಿ ಭಾರತವು ವೇಗವಾಗಿ ಬೆಳೆಯುತ್ತಿರುವ ಬಗ್ಗೆ ಒತ್ತಿ ಹೇಳಿದರು. ಅಲ್ಲದೆ; ಹಸಿರು ಉಕ್ಕು, ಹೆಚ್ಚಿನ ಮೌಲ್ಯದ ಉತ್ಪಾದನೆ ಮತ್ತು ಜಾಗತಿಕ ಪೂರೈಕೆ ಸರಪಳಿ ಸ್ಥಿತಿ ಸ್ಥಾಪಕತ್ವಕ್ಕೆ ರಾಷ್ಟ್ರದ ಬದ್ಧತೆಯನ್ನು ವಿವರಿಸಿದರು.

“ಭಾರತ ಮತ್ತು ಯುಎಇ ಹಸಿರು ಉಕ್ಕು ಉತ್ಪಾದನೆ ಮತ್ತು ಸುಸ್ಥಿರ ಕೈಗಾರಿಕಾ ಬೆಳವಣಿಗೆಯಲ್ಲಿ ಬಲವಾದ ಪಾಲುದಾರರಾಗಬಹುದು” ಎಂದು ಸಚಿವರು ಈ ಸಂದರ್ಭದಲ್ಲಿ ಒತ್ತಿ ಹೇಳಿದರು.

“2030ರ ವೇಳೆಗೆ ಭಾರತವು ತನ್ನ 300 ಮಿಲಿಯನ್ ಟನ್ ಉಕ್ಕು ಉತ್ಪಾದನಾ ಗುರಿಯನ್ನು ತಲುಪಲು ಸಹಾಯ ಮಾಡುವಲ್ಲಿ ಯುಎಇ ಪ್ರಮುಖ ಪಾತ್ರ ವಹಿಸಬಹುದು. ವಿಶೇಷವಾಗಿ ಕಚ್ಚಾ ವಸ್ತುಗಳ ಖಾತರಿಯನ್ನು ಬೆಂಬಲಿಸುವ ಮೂಲಕ ಮತ್ತು ಇಂಧನ ಪೂರೈಕೆ, ಸಮರ್ಥ ಉತ್ಪಾದನಾ ವ್ಯವಸ್ಥೆಗಳನ್ನು ಸಕ್ರಿಯಗೊಳಿಸುವ ಮೂಲಕ ಭಾರತದ ಜತೆ ಕೈ ಜೋಡಿಸಬಹುದು. ಈ ಪಾಲುದಾರಿಕೆ ಅತ್ಯಂತ ಮಹತ್ವದ್ದಾಗಿರುತ್ತದೆ” ಎಂದು ಕುಮಾರಸ್ವಾಮಿ ಪ್ರತಿಪಾದಿಸಿದರು.

ಉನ್ನತ ದರ್ಜೆಯ ಉಕ್ಕು ಮತ್ತು ಅಲ್ಯೂಮಿನಿಯಂ:
ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಆಟೋಮೊಬೈಲ್ ಮತ್ತು ಕಾರ್ಯತಂತ್ರದ ವಲಯಗಳಿಗೆ ಅತ್ಯಗತ್ಯವಾದ ಉನ್ನತ ದರ್ಜೆಯ ಉಕ್ಕು ಮತ್ತು ಅಲ್ಯೂಮಿನಿಯಂನ ಜಂಟಿ ಅಭಿವೃದ್ಧಿಯು ಚರ್ಚೆಯ ಪ್ರಮುಖ ಅಂಶಗಳಲ್ಲಿ ಒಂದಾಗಿತ್ತು.

“ಆಟೋಮೊಬೈಲ್, ಚಲನಶೀಲತೆ ಮತ್ತು ಉನ್ನತ ಮಟ್ಟದ ಉತ್ಪಾದನೆಯಂತಹ ಕ್ಷೇತ್ರಗಳಲ್ಲಿ ಬಳಕೆಗಾಗಿ ಉತ್ತಮ ಗುಣಮಟ್ಟದ ಉಕ್ಕು ಮತ್ತು ಅಲ್ಯೂಮಿನಿಯಂ ಅನ್ನು ಜಂಟಿಯಾಗಿ ಉತ್ಪಾದಿಸುವ ಮತ್ತು ವ್ಯಾಪಾರ ಮಾಡುವಲ್ಲಿ ನಾವು ಸ್ಪಷ್ಟವಾದ ಪಾಲುದಾರಿಕೆಯನ್ನು ಎದುರು ನೋಡುತ್ತೇವೆ” ಎಂದು ಇದೇ ವೇಳೆ ಕುಮಾರಸ್ವಾಮಿ ಅವರು ಅಬ್ದುಲ್ಲಾ ಬಿನ್ ತೌಕ್ ಅಲ್ ಮರ್ರಿ ಅವರಲ್ಲಿ ಹೇಳಿದರು.

ಸಾರ್ವಜನಿಕ ವಲಯದ ಉದ್ಯಮಗಳ ತೊಡಗಿಸಿಕೊಳ್ಳುವಿಕೆ:
ಭಾರತ-ಯುಎಇ ಕೈಗಾರಿಕಾ ಪಾಲುದಾರಿಕೆಯನ್ನು ಬಲಪಡಿಸುವಲ್ಲಿ ಭಾರತದ ಸಾರ್ವಜನಿಕ ವಲಯದ ಉದ್ಯಮಗಳ (ಸಿಪಿಎಸ್‌ಇ) ಸಕ್ರಿಯ ಪಾತ್ರವನ್ನು ಈ ಮಾತಿಕತೆಯಲ್ಲಿ ಪ್ರಮುಖವಾಗಿ ಚರ್ಚೆ ನಡೆಸಲಾಯಿತು. ಈ ಕೆಳಗಿನ ಅಂಶಗಳನ್ನು ಮಾತುಕತೆ ವೇಳೆ ಸಚಿವರು ಪ್ರಮುಖವಾಗಿ ಉಲ್ಲೇಖಿಸಿದರು.

ಮಹಾರತ್ನ ಸಿಪಿಎಸ್‌ಇ ಆಗಿರುವ ಎಸ್‌ಎಐಎಲ್, ಪ್ರಸ್ತುತ ರಾಸ್ ಅಲ್ ಖೈಮಾದ ಸ್ಟೀವಿನ್ ರಾಕ್ ಎಲ್‌ಎಲ್‌ಸಿಯಿಂದ ವಾರ್ಷಿಕವಾಗಿ ಸುಮಾರು 2.5 ಮಿಲಿಯನ್ ಟನ್ ಕಡಿಮೆ-ಸಿಲಿಕಾ ಸುಣ್ಣದ ಕಲ್ಲನ್ನು ಆಮದು ಮಾಡಿಕೊಳ್ಳುತ್ತದೆ. ಕಂಪನಿಯು ದೀರ್ಘಾವಧಿಯ ಪೂರೈಕೆ ಒಪ್ಪಂದಗಳನ್ನು ಮತ್ತು ಯುಎಇಯ ಮೂಲಸೌಕರ್ಯ ಮತ್ತು ಕೈಗಾರಿಕಾ ವಲಯಗಳಿಗೆ ಪ್ರೀಮಿಯಂ ಭಾರತೀಯ ಉಕ್ಕಿನೊಂದಿಗೆ ಸೇವೆ ಸಲ್ಲಿಸುವ ಸಾಮರ್ಥ್ಯವನ್ನು ಅನ್ವೇಷಿಸುತ್ತಿದೆ.

ಭಾರತದ ಅತಿದೊಡ್ಡ ಕಬ್ಬಿಣದ ಅದಿರು ಉತ್ಪಾದಕ ಸಂಸ್ಥೆ ರಾಷ್ಟ್ರೀಯ ಖನಿಜಾಭಿವೃದ್ಧಿ ಸಂಸ್ಥೆ (NMDC), ಗಣಿಗಾರಿಕೆ ಮೌಲ್ಯ ಸರಪಳಿಯನ್ನು ಅಭಿವೃದ್ಧಿಪಡಿಸುವಲ್ಲಿ ಯುಎಇ ಮೂಲದ ಸಂಸ್ಥೆಗಳೊಂದಿಗೆ ಸಹಕರಿಸಲು ಉತ್ಸುಕವಾಗಿದೆ.

ಭಾರತದ ಪ್ರಮುಖ ಎಂಜಿನಿಯರಿಂಗ್ ಸಲಹಾ ಸಂಸ್ಥೆಯಾದ ಮೆಕಾನ್‌ (MECON), ಕೊಲ್ಲಿ ಭಾಗದಲ್ಲಿ ತೈಲ ಮತ್ತು ಅನಿಲ, ಉಕ್ಕು ಸ್ಥಾವರ ಅಭಿವೃದ್ಧಿ ಮತ್ತು ಸ್ಮಾರ್ಟ್ ಮೂಲಸೌಕರ್ಯ ಯೋಜನೆಗಳಿಗೆ ಕೊಡುಗೆ ನೀಡುವ ಗುರಿಯನ್ನು ಹೊಂದಿದೆ.

ಮೂರು ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳಾದ ಭಾರತೀಯ ಉಕ್ಕು ಪ್ರಾಧಿಕಾರ (SAIL), ರಾಷ್ಟ್ರೀಯ ಖನಿಜಾಭಿವೃದ್ಧಿ ನಿಗಮ (NMDC), ಮತ್ತು ಮೆಕಾನ್ (MECON) ಇದೀಗ ದುಬೈನಲ್ಲಿ ಅಂತಾರಾಷ್ಟ್ರೀಯ ಕಚೇರಿಗಳನ್ನು ತೆರೆದಿವೆ. ವ್ಯಾಪಾರ ಸಮನ್ವಯ, ಜಂಟಿ ಉದ್ಯಮಗಳು ಮತ್ತು ತಂತ್ರಜ್ಞಾನ ವಿನಿಮಯಕ್ಕಾಗಿ ಶಾಶ್ವತ ವೇದಿಕೆಯನ್ನು ಸ್ಥಾಪಿಸಿವೆ.

ಜಂಟಿ ಕಾರ್ಯಪಡೆ ರಚನೆ:
ನಿರ್ದಿಷ್ಟ ಅವಕಾಶಗಳನ್ನು ಗುರುತಿಸಲು, ಸಂಚಾರ ಸೌಕರ್ಯಗಳನ್ನು ಸುಗಮಗೊಳಿಸಲು ಮತ್ತು ಪ್ರಮುಖ ವಲಯಗಳಲ್ಲಿ ದೀರ್ಘಕಾಲೀನ ಸಹಯೋಗವನ್ನು ಉತ್ತೇಜಿಸಲು ಭಾರತೀಯ ಮತ್ತು ಯುಎಇ ಪಾಲುದಾರರ ನಡುವೆ ಜಂಟಿ ಕಾರ್ಯಪಡೆಯನ್ನು ರಚಿಸುವ ಬಗ್ಗೆ ಈ ಸಂದರ್ಭದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಪ್ರಸ್ತಾಪಿಸಿದರು.

“ಭಾರತವು ಯುಎಇ ಯನ್ನು ಕೇವಲ ಮಾರುಕಟ್ಟೆಯನ್ನಾಗಿ ನೋಡುವುದಿಲ್ಲ. ಆದರೆ ಜಾಗತಿಕ ಕೈಗಾರಿಕಾ ಭೂಪಟವನ್ನು ಮರು ರೂಪಿಸುವಲ್ಲಿ ಕಾರ್ಯತಂತ್ರದ ಪಾಲುದಾರನಾಗಿ ನೋಡುತ್ತದೆ” ಎಂದು ಸಚಿವರು ಪ್ರತಿಪಾದಿಸಿದರು.

$5 ಟ್ರಿಲಿಯನ್ ಆರ್ಥಿಕತೆಯಾಗುವ ಭಾರತದ ಗುರಿಯೊಂದಿಗೆ ಹೊಂದಿಕೆಯಾಗುವ ಜಂಟಿ ಯೋಜನೆಗಳು ಮತ್ತು ವ್ಯಾಪಾರ ಚೌಕಟ್ಟುಗಳನ್ನು ಮುನ್ನಡೆಸುವ ನಿಟ್ಟಿನಲ್ಲಿ ದಯಬೈ ಸಹಕಾರವನ್ನು ವಿಸ್ತೃತ ಮಟ್ಟದಲ್ಲಿ ಪಡೆದುಕೊಳ್ಳುವ ಸಂಕಲ್ಪದೊಂದಿಗೆ ಸಭೆ ಮುಕ್ತಾಯವಾಯಿತು.

You Might Also Like

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ 17ರ ಯುವಕನ ಬರ್ಬರ ಹತ್ಯೆ!

ಬೆಂಗಳೂರಿನ ಎಂಎಸ್‌ ರಾಮಯ್ಯ ಆಸ್ಪತ್ರೆಯಲ್ಲಿ ಅಗ್ನಿ ಅವಘಡ, ರೋಗಿಗಳು ಸೇಫ್

ಡಿಕೆಶಿ ವಿರುದ್ಧ ಆದಾಯ ಮೀರಿ ಆಸ್ತಿಗಳಿಕೆ ಪ್ರಕರಣದ ತೀರ್ಪು ಕಾಯ್ದಿರಿಸಿದ ಹೈಕೋರ್ಟ್

Drone Attack : ರಷ್ಯಾದಲ್ಲಿ ಭಾರತದ ಸಂಸದರು ಬಂದಿಳಿದ ವಿಮಾನ ನಿಲ್ದಾಣದ ಮೇಲೆ ಡ್ರೋನ್ ದಾಳಿ

ಸಿಕ್ಕ ಸಿಕ್ಕಲ್ಲಿ ಬೈಕ್ ಕದ್ದು ಕಡಿಮೆ ಬೆಲೆಗೆ ಮಾರುತ್ತಿದ್ದ ಕಳ್ಳರು ಅಂದರ್

TAGGED:hd kumaraswamy
Share This Article
Facebook Copy Link Print
Previous Article Trummp Vs Musk Trummp Vs Musk Trummp Vs Musk ಹೊಸ ಪಕ್ಷ ಕಟ್ಟುವುದಾಗಿ ಟ್ರಂಪ್‌ಗೆ ಎಲಾನ್‌ ಮಸ್ಕ್‌ ಚಾಲೆಂಜ್
Next Article Iqbal Hussain Iqbal Hussain Iqbal Hussain ಶಾಸಕ ಇಕ್ಬಾಲ್ ಹುಸೇನ್ ಗೆ ನೋಟೀಸ್ ನೀಡಿದ ಡಿಕೆಶಿ
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

235.3kFollowersLike
69.1kFollowersFollow
11.6kFollowersPin
56.4kFollowersFollow
136kSubscribersSubscribe
4.4kFollowersFollow
Join Whatsapp
Ad image
Ad imageAd image

Latest News

PM Modi PM Modi PM Modi
ಪಶ್ಚಿಮ ಏಷ್ಯಾದ ಉದ್ವಿಗ್ನ ಪರಿಸ್ಥಿತಿ : ಸರ್ವಪಕ್ಷ ಸಭೆ ಕರೆದ ಮೋದಿ ಸರ್ಕಾರ
ರಾಷ್ಟ್ರೀಯ-National
March 24, 2026
Dead Body Dead Body Dead Body
ಬೀದರ್: ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಆತ್ಮಹತ್ಯೆ
ಬೀದರ್​-Bidar
March 24, 2026
Delhi Assembly Complex
ದೆಹಲಿ ವಿಧಾನಸಭೆ ಸಂಕೀರ್ಣ ಸ್ಫೋಟಿಸುವುದಾಗಿ ಬೆದರಿಕೆ ಇಮೇಲ್
ರಾಷ್ಟ್ರೀಯ-National
March 24, 2026
Supreme Court Supreme Court Supreme Court
ಹಿಂದೂ, ಬೌದ್ಧ, ಸಿಖ್‌ ಬಿಟ್ಟು ಬೇರೆ ಧರ್ಮಕ್ಕೆ ಮತಾಂತರಗೊಂಡರೆ ಪರಿಶಿಷ್ಟ ಜಾತಿ ಸ್ಥಾನಮಾನ ರದ್ದು : ಸುಪ್ರೀಂ
ರಾಜ್ಯ-Karnataka Latest
March 24, 2026
https://sampoornavaaninews.in/wp-content/uploads/2024/10/WhatsApp-Video-2024-10-04-at-00.03.25_2025f30f.mp4
Follow US
Copyright © 2024 SampoornaVaaniNews. All Rights Reserved | Designed and Developed By Technoy Global Solutions
Welcome Back!

Sign in to your account

Username or Email Address
Password

Lost your password?

Not a member? Sign Up