ನವದೆಹಲಿ,ಸೆ.30– 80ರ ದಶಕದಲ್ಲಿ ನಟನೆ ಹಾಗೂ ತನ್ನ ನೃತ್ಯ ಶೈಲಿಯಿಂದಲೇ ಭಾರತೀಯರ ಮನಗೆದಿದ್ದ, ಡಿಸ್ಕೋ ಡ್ಯಾನ್ಸರ್ ಎಂದೇ ಟ್ಯಾಗ್ ಪಡೆದುಕೊಂಡಿದ್ದ ಬಾಲಿವುಡ್ ನಟ ಮಿಥುನ್ ಚಕ್ರವರ್ತಿಗೆ ಭಾರತೀಯ ಚಿತ್ರರಂಗಕ್ಕೆ ನೀಡಿದ ಅಪ್ರತಿಮ ಕೊಡುಗೆಗಾಗಿ ಪ್ರತಿಷ್ಟಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಲಭಿಸಿದೆ.
ನಟರಾದ ಮಿಥುನ್ ಚಕ್ರವರ್ತಿಗೆ ಅ.8ರಂದು ನಡೆಯಲಿರುವ 70 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ನಟನನ್ನು ಪ್ರಶಸ್ತಿಯೊಂದಿಗೆ ಗೌರವಿಸಲಾಗುವುದು ಎಂದು ಆಯ್ಕೆ ತೀರ್ಪುಗಾರರ ಸಮಿತಿಯು ಘೋಷಣೆ ಮಾಡಿದೆ.
ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನ್ ವೈಷ್ಣವ್ ಅವರು ಎಕ್್ಸನಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಮಿಥುನ್ ದಾದಾ ಅವರು ಸಿನಿಮಾ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಫಾಲ್ಕೆ ಪ್ರಶಸ್ತಿ ನೀಡಲಾಗುತ್ತದೆ. ಅವರ ಸಿನಿಮಾ ಪ್ರಯಾಣವು ಮುಂದಿನ ತಲೆಮಾರಿಗೆ ಸ್ಪೂರ್ತಿ ನೀಡಲಿದ್ದಾರೆ ಎಂದು ಹೇಳಿದ್ದಾರೆ.
16 ಜೂನ್ 1950ರಂದು ಜನಿಸಿರುವ ನಟ ಮಿಥುನ್ ಚಕ್ರವರ್ತಿ ಅವರು ಹಿಂದಿ ಚಿತ್ರರಂಗದಲ್ಲಿ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟಿ ಶ್ರೀದೇವಿ, ಮೀನಾಕ್ಷಿ ಶೇಷಾದ್ರಿ, ಜಯಪ್ರದಾ ಸೇರಿದಂತೆ ಅಂದಿನ ಕಾಲದ ಬಹುತೇಕ ಎಲ್ಲಾ ಸ್ಟಾರ್ ನಟಿಯರೊಂದಿಗೆ ನಟ ಮಿಥುನ್ ಚಕ್ರವರ್ತಿ ನಟಿಸಿದ್ದಾರೆ.
ಮಿಥುನ್ ಚಕ್ರವರ್ತಿ ಬಾಲಿವುಡ್ ಚಿತ್ರರಂಗದ ಪ್ರಸಿದ್ಧ ನಟ. ಮೂರು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದಿರುವ ಮಿಥುನ್ ಚಕ್ರವರ್ತಿ, ಪದಭೂಷಣ ಪ್ರಶಸ್ತಿ ಪುರಸ್ಕೃತ ಕೂಡ ಹೌದು.ಇವರು ಬಾಲಿವುಡನಲ್ಲಿ ಡಿಸ್ಕೋ ಡಾನ್ಸರ್ ಎಂದೇ ಪರಿಚಿತರು.ಮಿಥುನ್ ಡಾ ಹಿಂದಿ ಚಿತ್ರಗಳಲ್ಲದೇ ಕೆಲವು ಬಂಗಾಲಿ,ಪಂಜಾಬಿ, ಓರಿಯಾ, ಭೋಜಪುರಿ,ತೆಲುಗು,ತಮಿಳು,ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಪ್ರೇಮ್ ನಿರ್ದೇಶನದ ಱದಿ ವಿಲನ್ ಚಿತ್ರದಲ್ಲಿ ನಟಿಸಿದ್ದಾರೆ.
ತಮ ಇಡೀ ಚಲನಚಿತ್ರ ಜೀವನದಲ್ಲಿ 300 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅವುಗಳಲ್ಲಿ 50ಕ್ಕೂ ಹೆಚ್ಚು ಹಿಟ್ ಆಗಿವೆ. ಮಿಥುನ್ ಚಕ್ರವರ್ತಿ ಅವರ ನಟನೆಯ ಸಿನಿಮಾ ಬಾಲಿವುಡ್ಗೆ 100 ಕೋಟಿ ಕಲೆಕ್ಷನ್ ತಂದ ಮೊದಲ ಸಿನಿಮಾ ಆಗಿದೆ. ಮಿಥುನ್ ಚಕ್ರವರ್ತಿ ಕೊನೆಯದಾಗಿ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ೞದಿ ಕಾಶೀರ್ ಫೈಲ್ಸ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.
ಅವರ ಸ್ಟಾರ್ಡಮ್ 90 ರ ದಶಕದಲ್ಲಿ ತಣ್ಣಗಾಯಿತು. 90ರ ದಶಕದ ಆರಂಭದಲ್ಲಿ ಮಿಥುನ್ ಚಕ್ರವರ್ತಿ ಸತತ ಫ್ಲಾಪ್ ಚಿತ್ರಗಳನ್ನು ನೀಡಿದ್ದರು. 5 ವರ್ಷಗಳಲ್ಲಿ 15 ಚಿತ್ರಗಳು ಬ್ಯಾಕ್-ಟು-ಬ್ಯಾಕ್ ಫ್ಲಾಪ್ ಆಗಿದ್ದವು. ಆಗ ಜನರು ಡಿಸ್ಕೋ ಡ್ಯಾನ್ಸರ್ ಅನ್ನು ಫ್ಲಾಪ್ ಸ್ಟಾರ್ ಎಂದು ಕರೆಯಲು ಪ್ರಾರಂಭಿಸಿದ್ದರು.
1976 ರಲ್ಲಿ ತೆರೆಕಂಡ ಮ ಮೃಗಯ ಚಿತ್ರದ ಮೂಲಕ ಮಿಥುನ್ ಚಕ್ರವರ್ತಿ ನಟನೆ ಆರಂಭಿಸಿದರು. ಮೊದಲ ಚಿತ್ರದಲ್ಲೇ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಂಡರು. 1982ರಲ್ಲಿ ತೆರೆಗೆ ಬಂದ ಡಿಸ್ಕೋ ಡ್ಯಾನ್ಸರ್ ಚಿತ್ರ ಮಿಥುನ್ ಚಕ್ರವರ್ತಿಗೆ ಅಪಾರ ಕೀರ್ತಿ, ಜನಪ್ರಿಯತೆ ತಂದುಕೊಟ್ಟಿತು.
1982ರ ಚಲನಚಿತ್ರ ಡಿಸ್ಕೋ ಡ್ಯಾನ್ಸ್ ರನಲ್ಲಿ ಜಿಮಿ ಪಾತ್ರವನ್ನು ನಿರ್ವಹಿಸಿದರು, ಇದು ಭಾರತ ಮತ್ತು ಸೋವಿಯತ್ ಒಕ್ಕೂಟದಲ್ಲಿ ಪ್ರಮುಖ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸನ್ನು ಕಂಡಿತು.
ಡಿಸ್ಕೋ ಡ್ಯಾನ್ಸರ್ ಜೊತೆಗೆ ಚಕ್ರವರ್ತಿ ಅವರು ಸುರಕ್ಷ, ಹಮ್ ಪಾಂಚ್ , ಸಾಹಸ್ , ವಾರ್ದತ್, ಶೌಕೀನ್ , ವಾಂಟೆಡ್, ಬಾಕ್ಸರ್ , ಕಸಮ್ ಪೈಡಾ ಕರ್ನೆ ವಾಲೆ ಕಿ, ಪ್ಯಾರ್ ಜುಕ್ತಾ ನಹೀಂ, ಗುಲಾಮಿ, ಸ್ವರಾಗ್ ಸೆವಾಲಾ, ಮುಂತಾದ ಚಿತ್ರಗಳಲ್ಲಿನ ಅಭಿನಯಕ್ಕಾಗಿ ಜನ ಇಂದಿಗರೂ ನೆನಪಿಸಿಕೊಳ್ಳುತ್ತಾರೆ .
ಅವಿನಾಶ್, ಡ್ಯಾನ್ಸ್ ಡ್ಯಾನ್ಸ್ , ವತನ್ ಕೆ ರಖ್ವಾಲೆ , ಪ್ಯಾರ್ ಕಾ ಮಂದಿರ್, ವಕ್್ತ ಕಿ ಅವಾಜ್ , ಪ್ರೇಮ್ ಪ್ರತಿಜ್ಞಾ , ದಾತಾ , ಮುಜ್ರಿಮ್, ಅಗ್ನಿಪಥ್ , ರಾವನ್ ರಾಜ್ ಮತ್ತು ಜಲ್ಲಾದ್, ದಿಲ್ವಾಲಾ, ಡ್ಯಾನ್ಸ್ ಡ್ಯಾನ್ಸ್ , ಅಗ್ನೀಪತ್ ಮುಂತಾದ ಹಿಟ್ ಚಿತ್ರಗಳಲ್ಲದೆ ಖಿಲಾಡಿ 786, ಕಿಕ್ , ದಿ ತಾಷ್ಕೆಂಟ್ ಫೈಲ್ಸ್ ಮತ್ತು ದಿ ಕಾಶ್ಮೀರ್ ಫೈಲ್ಸ್ ಅವರು ನಟಿಸಿದ ಇತರ ಸಿನಿಮಾಗಳಲ್ಲೂ ನಟಿಸಿದ್ದಾರೆ.
1990ರ ದಶಕದ ಕೊನೆಯಲ್ಲಿ ಮತ್ತು 2000 ರ ದಶಕದ ಆರಂಭದಲ್ಲಿ ಅವನತಿಯ ಅವಧಿಯ ನಂತರ, ಅವರು ಗುರು , ಗೋಲಾಲ್ 3 , ಹೌಸ್ಫುಲ್ 2 ಮುಂತಾದ ಚಲನಚಿತ್ರಗಳಲ್ಲಿ ನಟಿಸಿ ಯಶಸ್ಸು ಕಂಡಿದ್ದಾರೆ.
350ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಅವರು ತಮ ವೃತ್ತಿ ಜೀವನದಲ್ಲಿ ಬೆಂಗಾಲಿ, ಹಿಂದಿ, ಒಡಿಯಾ, ಭೋಜಪುರಿ, ತಮಿಳು, ತೆಲುಗು, ಕನ್ನಡ ಹಾಗೂ ಪಂಜಾಬಿ ಭಾಷೆಯ ಚಿತ್ರಗಳಲ್ಲಿ ಮಿಥುನ್ ಚಕ್ರವರ್ತಿ ಅಭಿನಯಿಸಿದ್ದಾರೆ. ಕನ್ನಡದ ದಿ ವಿಲನ್ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.