ಕುಣಿಗಲ್ : ಇದೇ ತಿಂಗಳು 10 ರಂದು ನಡೆಯಲಿರುವ ಕುಣಿಗಲ್ ತಾಲ್ಲೂಕು ಯುವ ಕಾಂಗ್ರೆಸ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಅಂಗವಾಗಿ ಇಂದು ಯೂತ್ ಕಾಂಗ್ರೆಸ್ ಮುಖಂಡರೊಂದಿಗೆ ಶಾಸಕ ಎಚ್ ಡಿ ರಂಗನಾಥ್,ರವರು ಪೂರ್ವಭಾವಿ ಸಭೆ ನಡೆಸಿದರು,,
ಪಕ್ಷದ ಕಾರ್ಯಕರ್ತರು ಹಾಗೂ ಪಕ್ಷಾತೀತವಾಗಿ ಜನರ ಕಷ್ಟಕ್ಕೆ ಸ್ಪಂದನೆನನ್ನ ಮೊದಲ ಆದ್ಯತೆ ಎಂದು ಕಾರ್ಯಕರ್ತರಿಗೆ ತಿಳಿಸಿದರು,
ಈ ಸಂದರ್ಭದಲ್ಲಿ ಶಾಸಕರ ಅಭಿವೃದ್ಧಿಯ ಬಗ್ಗೆ ಮಾತನಾಡಿದ ನಾಗರಿಕರು ನಮ್ಮ ಕುಣಿಗಲ್ ತಾಲೂಕಿನ ಹೆಮ್ಮೆಯ ಶಾಸಕರು, ನಮ್ಮ ನೆಚ್ಚಿನ ನಾಯಕರು, ತಾವು ಒಬ್ಬ ಉನ್ನತ ಸ್ಥಾನದಲ್ಲಿ ಇದ್ದರೂ ಸಹ, ಅದನ್ನೆಲ್ಲ ಮರೆತು ಹಗಲು ರಾತ್ರಿ ಎನ್ನದೆ ತಾಲೂಕಿನ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಒಂದೆಡೆ ಆದರೆ ಇನ್ನೊಂದೆಡೆ ನಮ್ಮ ತಾಲೂಕಿನ ಪ್ರತಿಯೊಬ್ಬ ಯುವಕರು ಉನ್ನತ ಸ್ಥಾನದಲ್ಲಿ ಬೆಳೆದು ರಾಷ್ಟ್ರಮಟ್ಟದಲ್ಲಿ ಗುರುತಿಸುವ ದೂರದೃಷ್ಟಿ ಇರುವ ಏಕೈಕ ನಾಯಕರು ನಮ್ಮ ತಾಲೂಕಿನ ಜನತೆ ಅವರಿಗೆ ಚಿರಋಣಿಯಾಗಿರಬೇಕು ಎಂದು ಮಾತನಾಡಿದರು,
ನಮ್ಮಂತ ಯುವಕರಿಗೆ ಪ್ರೋತ್ಸಾಹದ ನುಡಿಗಳನ್ನು ನೀಡಿ ಹುರಿದುಂಬಿಸಿದ್ದು ಕಾಂಗ್ರೆಸ್ ಕುಣಿಗಲ್ನಲ್ಲಿ, ಹೊಸ ಶಕ್ತಿ ಮತ್ತು ಚೈತನ್ಯ ತಂದಿದೆ, ಯುವ ಕಾಂಗ್ರೆಸ್ ನಿಕಟ ಪೂರ್ವ ಅಧ್ಯಕ್ಷರಂತೆ ನೂತನ ಅಧ್ಯಕ್ಷರುಗಳು ಯೂಥ್ ಕಾಂಗ್ರೆಸ್ ಪದಾಧಿಕಾರಿಗಳನ್ನು ಈ ಸಭೆಗೆ ಆತ್ಮೀಯವಾಗಿ ಸ್ವಾಗತಿಸಿ, ಮತ್ತು ಹೊಸದಾಗಿ ಜವಾಬ್ದಾರಿಯನ್ನು ತೆಗೆದುಕೊಂಡು ಮಾರ್ಗದರ್ಶನ ನೀಡಿದ್ದು ನಿಜಕ್ಕೂ ಖುಷಿ ತಂದಿದೆ ಎಂದು ಶಾಸಕರಿಗೆ ಅಭಿನಂದನೆಯನ್ನು ತಿಳಿಸಿದರು,,,
ವರದಿ : ನರಸಿಂಹರಾಜು

