ಕೋಲಾರ : ಮುರುಡೇಶ್ವರ ಘಟನೆಯ ನೋವಿನಿಂದ ಹೊರಬರುವ ಮುಂಚೆಯೇ ನಿನ್ನೆಯ ದಿನ ಸಂಜೆ ವಡ್ಡಹಳ್ಳಿ-ಗುಡಿಪಲ್ಲಿ ರಸ್ತೆಯ ಮಾರ್ಗದಲ್ಲಿ ಬೊಲೆರೋ ಮತ್ತು ದ್ವಿಚಕ್ರ ವಾಹನಗಳ ಅಪಘಾತದಲ್ಲಿ 5ಜನ ಮೃತಪಟ್ಟಿರುವ ಸುದ್ಧಿ ತಿಳಿದು ತೀವ್ರ ಅಘಾತವಾಗಿದೆ.
ಮಾನ್ಯ ಶಾಸಕರು ಸಮೃದ್ಧಿ ಮಂಜುನಾಥ್ ರವರು ಬೆಳಗಾವಿ ಅಧಿವೇಶನದಲ್ಲಿ ಭಾಗಿಯಾಗಿರುವ ಕಾರಣಕ್ಕೆ ಕೋನಂಕುಂಟೆ, ನಾಗನಹಳ್ಳಿ ಗ್ರಾಮಗಳ ಮೃತರ ಕುಟುಂಬಗಳಿಗೆ ನಮ್ಮ ಮುಖಂಡರು ನಲ್ಲೂರು ರಘುಪತಿರೆಡ್ಡಿ , ಶಾಮೇಗೌಡ , NRS ಸತ್ಯಣ್ಣ, ನರಸಿಂಹರೆಡ್ಡಿ ರವರು ಹಾಗೂ ಹಿರಿಯ ಮುಖಂಡರ ಮುಖೇನ ಸಾಂತ್ವಾನ ತಿಳಿಸಿ ಆರ್ಥಿಕ ನೆರವು ನೀಡಲಾಯಿತು. ದುಃಖತಪ್ತ ಕುಟುಂಬಗಳಿಗೆ ನೋವನ್ನು ಭರಿಸುವ ಧೈರ್ಯವನ್ನು ನೀಡಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ತಿಳಿಸಿದರು.
ವರದಿ : ಅರುಣ್ ಕುಮಾರ್ ಬಿ ಎಸ್

