ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆ ಹೆಸರಿನಲ್ಲಿ ಮೋಸ ಮಾಡುತ್ತಿದೆ
ಇದರಲ್ಲಿ ಶಾಸಕರು ಮಂತ್ರಿಗಳು ಲೂಟಿ ಮಾಡುತ್ತಿದ್ದಾರೆ : ಜೆ ಡಿ ಪಾಟೀಲ್
ಗ್ರಾಮೀಣ ಭಾಗದ ರೈತರಿಗೆ ಪ್ರೋತ್ಸಾಹ ಧನ ನೀಡಿಲ್ಲ
ಮಂಡಲ ಅಧ್ಯಕ್ಷ ಜೆ ದೇವರಾಜ್ ಗೌಡ ನೇತೃತ್ವದಲ್ಲಿ ಪ್ರತಿಭಟನೆ
ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆ ಹೆಸರಿನಲ್ಲಿ ಕರ್ನಾಟಕ ಜನತೆಯ ದಾರಿ ತಪ್ಪಿಸಿ ಕಾಂಗ್ರೆಸ್ ಮಂತ್ರಿಗಳು ಮತ್ತು ಶಾಸಕರು ಲೂಟಿ ಮಾಡುತ್ತಿದ್ದಾರೆ ಎಂದು ಸಿರವಾರ ಮಂಡಲ ಅಧ್ಯಕ್ಷ ಜೆ. ದೇವರಾಜ್ ಗೌಡ ದೂರಿದರು.
ಪಟ್ಟಣದ ಬಸ್ ನಿಲ್ದಾಣದ ಹತ್ತಿರ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ದಿನಬಳಕೆ ವಸ್ತು ಸೇರಿ ರೈತರ ಹೆಸರಿನಲ್ಲಿ ಹಾಲಿನ ದರ ಏರಿಕೆ ಮಾಡಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಂಡಲ ಅಧ್ಯಕ್ಷ ಜೆ ದೇವರಾಜ್ ಗೌಡ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.
ಮಂಡಲ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ್ ಜಕ್ಕಲದಿನ್ನಿ ಮಾತನಾಡಿ ಹಾಲಿನ ದರ ಏರಿಕೆಯ ಬರೇ ಹಾಕಿದರೆ ಗ್ರಾಮೀಣ ಭಾಗದ ರೈತರಿಗೆ ಪ್ರೋತ್ಸಾಹ ಧನ ನೀಡಿಲ್ಲ ಇದು ಜನರ ಜೇಬಿಗೆ ಕನ್ನ ಹಾಕಿದ ಸರ್ಕಾರ ರಾಜ್ಯ ಸರ್ಕಾರ ಬೊಕ್ಕಸವನ್ನು ತುಂಬಿಸಿಕೊಳ್ಳುವುದರಲ್ಲಿ ನಿರತವಾಗಿದೆ ಹೊರತು ಗ್ರಹಕರ ರೈತರ ಹಾಗೂ ಬಡವರ ಮೇಲೆ ಕಾಳಜಿ ಇಲ್ಲ ಇದು ಕಾಳಜಿ ಇಲ್ಲದ ಸರ್ಕಾರವಾಗಿದೆ ಬೆಲೆ ಏರಿಕೆಯಿಂದಾಗಿ ಮಾಧ್ಯಮ ವರ್ಗ ತತ್ತರಿಸಿ ಹೋಗಿದೆ ಎಂದು ಕಿಡಿ ಕಾರಿದರು .
ಈ ಪ್ರತಿಭಟನೆಯಲ್ಲಿ ಮಾಜಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ್ ಚಕ್ಕಲದಿನ್ನಿ, ಎಚ್ ಕೆ ಅಮರೇಶ್ ,ಸುರೇಶ ಗೌಡ ನವಲಕಲ್, ಅಮರೇಶ ಗಡ್ಲ ,ನಾಗೇಶ್ ನಾಯಕ್ ,ರಾಮಯ್ಯ ಬೈನರ್ ,ರಾಘವೇಂದ್ರ ಕಾಜನಗೌಡ ,ವಿಜಯಪ್ಪ ಗೌಡ ಚನ್ನೂರ್ ಚೆನ್ನಪ್ಪ ,ವಸಂತ ನಾಯಕ್ ,ಮಹಿಳಾ ಮುಖಂಡರು ವೆಂಕಟಲಕ್ಷ್ಮಿ ಭರತ್ ನಾಯಕ್ ,ಗೋಪಾಲ್ ನಾಯಕ್ ,ಮೌಲಾಸಾಬ್ ಗಣದಿನ್ನಿ ,ಅಡಿವಪ್ಪ ಮರಾಠ , ಹಾಗೂ ಪಕ್ಷದ ಕಾರ್ಯಕರ್ತರು ಸುತ್ತಮುತ್ತಲಿನ ಗ್ರಾಮದ ಮುಖಂಡರು ಉಪಸ್ಥಿತರಿದ್ದರು
ಅರುಣ್ ಕುಮಾರ್ : ರಾಯಚೂರ್