ಲಕ್ನೋ: ಅಮಿತ್ ಶಾ (Amit Shah) ಅವರನ್ನು ಪ್ರಧಾನಿ ಮಾಡಲು ಪ್ರಧಾನಿ ನರೇಂದ್ರ (Narendra Modi) ಮೋದಿ ಮತ (Vote) ಕೇಳುತ್ತಿದ್ದಾರೆ, ಅವರು ತಮಗಾಗಿ ಮತ ಕೇಳುತ್ತಿಲ್ಲ. ಮೋದಿ ಅವರು ಲೋಕಸಭೆ ಚುನಾವಣೆಯಲ್ಲಿ ಗೆದ್ದರೆ ಎರಡು ತಿಂಗಳೊಳಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರನ್ನು ಪದಚ್ಯುತಿಗೊಳಿಸುತ್ತಾರೆ. ಇದರ ಜೊತೆಗೆ ಮೀಸಲಾತಿ (Reservation) ರದ್ದುಗೊಳಿಸಲಾಗುತ್ತದೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್(Arvind kreziwal) ಹೇಳಿದ್ದಾರೆ.
ಮಾಜಿ ಸಿಎಂ ಅಖಿಲೇಶ್ ಯಾದವ್ (Akhilesh Yadav) ಜೊತೆ ಕೇಜ್ರಿವಾಲ್ ಲಕ್ನೋದಲ್ಲಿ ಎಸ್ಪಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನರೇಂದ್ರ ಮೋದಿ ಅವರು ಪ್ರಧಾನಿಯಾದಾಗ ನಿವೃತ್ತಿ ವಯಸ್ಸನ್ನು 75 ರ್ಷಕ್ಕೆ ನರ್ಣಯಿಸಿದರು. ಸುಮಿತ್ರಾ ಮಹಾಜನ್, ಮುರಳಿ ಮನೋಹರ ಜೋಶಿ, ಲಾಲ್ ಕೃಷ್ಣ ಅಡ್ವಾಣಿ ಇದಕ್ಕೆ ಉದಾಹರಣೆ. ಮುಂದಿನ ವರ್ಷ ಸೆ.17ಕ್ಕೆ ಮೋದಿಗೆ 75 ವರ್ಷ ತುಂಬಲಿದೆ ಎಂದರು. ಇದನ್ನೂ ಓದಿ: ಜೆಟ್ ಏರ್ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಪತ್ನಿ ನಿಧನ
ಮೋದಿ ಅಮಿತ್ ಶಾ ಅವರನ್ನು ಪ್ರಧಾನಿ ಮಾಡಲು ಅವರ ಹಾದಿಯಲ್ಲಿದ್ದ ಕಂಟಕಗಳನ್ನು ಹಂತ ಹಂತವಾಗಿ ತೆಗೆದುಹಾಕಿದರು. ವಸುಂಧರಾ ರಾಜೆ, ಸುಮಿತ್ರಾ ಮಹಾಜನ್, ಶಿವರಾಜ್ ಸಿಂಗ್ ಚೌಹಾಣ್, ಡಾ.ರಮಣ್ ಸಿಂಗ್ ಅವರನ್ನು ಮೂಲೆಗುಂಪು ಮಾಡಲಾಯಿತು. ಇದನ್ನೂ ಓದಿ: ಕೇಜ್ರಿವಾಲ್ ಜಾಮೀನನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ: ಶಾ ಕಿಡಿ
ಈಗ ಯೋಗಿ ಮಾತ್ರ ಅಡ್ಡಿಯಾಗಿದ್ದಾರೆ. ಅವರನ್ನು ತೆಗೆದುಹಾಕಲಾಗುವುದು. ತಾವು ಮಾಡಿದ ನಿಯಮಗಳನ್ನು ಮೋದಿ ಅವರು ಉಲ್ಲಂಘಿಸುವುದಿಲ್ಲ. ಉಲ್ಲಂಘಿಸಿದರೆ ಜನರು ಅವರನ್ನು ಪ್ರಶ್ನಿಸಲಿದ್ದಾರೆ. ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಷಿ ಅವರನ್ನು ತೆಗೆದುಹಾಕಲು ಅವರು ಈ ನಿಯಮಗಳನ್ನು ಮಾಡಿದ್ದರು ಎಂದು ಆರೋಪಿಸಿದರು. ಇದನ್ನೂ ಓದಿ: ಫುಟ್ಬಾಲ್ಗೆ ಗುಡ್ಬೈ ಹೇಳಿದ ಸುನಿಲ್ ಛೆಟ್ರಿ
ಬಿಜೆಪಿ 220 ಸ್ಥಾನಗಳಿಗಿಂತ ಹೆಚ್ಚು ಪಡೆಯುವುದಿಲ್ಲ. ರಾಜಸ್ಥಾನ, ಹರಿಯಾಣ, ಜರ್ಖಂಡ್, ದೆಹಲಿ, ಪಂಜಾಬ್ ಮತ್ತು ಬಂಗಾಳದಲ್ಲಿ ಬಿಜೆಪಿಯ ಸ್ಥಾನಗಳು ಕಡಿಮೆಯಾಗುತ್ತಿವೆ. ಬಿಜೆಪಿ ಯಾವಾಗಲೂ ಮೀಸಲಾತಿ ವಿರುದ್ಧವಾಗಿದೆ. ಅವರು ಆಡಳಿತಕ್ಕೆ ಬಂದಾಗಿನಿಂದ ಪರಿಸ್ಥಿತಿ ಹದಗೆಟ್ಟಿದೆ. ನಮ್ಮ ಇಂಡಿಯಾ ಒಕ್ಕೂಟದ ರ್ಕಾರ ಬಂದ ಬಳಿಕ ಅದನ್ನು ಸರಿಪಡಿಸಲಾಗುವುದು. ಜೂನ್ 4 ರಂದು ಭಾರತ ಸಮ್ಮಿಶ್ರ ರ್ಕಾರ ರಚನೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಮುಂದಿನ 5 ದಿನಗಳು ರಾಜ್ಯದಲ್ಲಿ ಗಾಳಿ ಮಳೆ