ಮಂಗನ ಕೈಗೆ ಮಾಣಿಕ್ಯ ಕೊಟ್ಟಂತೆ ಎನ್ನುವ ಗಾದೆ ಇದೆ. ಅಂದ್ರೆ ಕೊಟ್ಟ ವಸ್ತುವಿನ ಬೆಲೆ ಗೊತ್ತಿರದಿದ್ದರೆ ಎಷ್ಟೇ ಬೆಲೆ ಬಾಳುವ ವಸ್ತುಗಳನ್ನು ಕೊಟ್ಟರೂ ಪ್ರಯೋಜನವಿಲ್ಲ. ಹಾಗೆಯೇ ಕೋತಿಯೊಂದು ಕರ್ನಾಟಕದ ವ್ಯಕ್ತಿಯೊಬ್ಬರ ಪರ್ಸ್ ಕಿತ್ತುಕೊಂಡಿರುವ ವಿಡಿಯೋ ವೈರಲ್ ಆಗಿದೆ.
ಬಳಿಕ ಆ ಕೋತಿ ಮರದ ಮೇಲೆ ಹತ್ತಿ ಕುಳಿತುಕೊಂಡು ಪರ್ಸ್ನಿಂದ 500ರೂ.ಗಳ ನೋಟನ್ನು ಕೈಯಲ್ಲಿ ಹಿಡಿದುಕೊಂಡು ಒಂದೊಂದಾಗೇ ಕೆಳಗೆ ನೋಟುಗಳನ್ನು ಎಸೆಯುತ್ತಿತ್ತು ಇದು ನಿಜವಾಗಿಯೂ ಹಣದ ಮಳೆಯಂತೆಯೇ ಕಾಣುತ್ತಿತ್ತು. ಈ ಘಟನೆ ನಡೆದಿದ್ದು ತಮಿಳುನಾಡಿನ ಕೊಡೈಕೆನಾಲ್ನಲ್ಲಿ