ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು (Bengaluru) ಸೇರಿ ರಾಜ್ಯದಲ್ಲಿ ಭಾನುವಾರ ಉತ್ತಮ ಮಳೆಯಾಗಿದೆ (Rain) . ನಿನ್ನೆ ಸುರಿದ ಮಳೆಯಿಂದಾಗಿ ನಗರದಲ್ಲಿ ಹಲವಾರು ಅವಾಂತರಗಳು ಸೃಷ್ಟಿಯಾಗಿದೆ.
ರಾಜ್ಯದಲ್ಲಿ ಮಳೆ ಅಬ್ಬರ ಜೋರಾಗಿದ್ದು, ಮಳೆಯಿಂದಾಗಿ ಜನರು ಪರದಾವಂತಾಗಿದೆ. ಭಾರೀ ಗುಡುಗು, ಗಾಳಿ ಸಹಿತ ಬಿಸಿದ ಮಳೆಗೆ ಮರಗಳು ಮತ್ತು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಇದನ್ನೂ ಓದಿ: ಗ್ರಾಹಕರಿಗೆ ಶಾಕ್ – ಇಂದಿನಿಂದ ಹಾಲಿನ ದರ ಹೆಚ್ಚಳ
ಇದೇ ಹೊತ್ತಲ್ಲಿ ಸಿಟಿ ಮಂದಿಗೆ ಹಾವುಗಳ ಸಂಚಾರ ಶುರುವಾಗಿದೆ. ಹಾವುಗಳ ಸಂತಾನೋತ್ಪತ್ತಿ ಕಾಲ ಹಿನ್ನೆಲೆ ಹಾವುಗಳ ಸಂಚಾರ ಶುರುವಾಗಿದ್ದು, ಏಕಾಎಕಿ ಮನೆಗಳಲ್ಲಿ ಪ್ರತ್ಯಕ್ಷವಾಗುತ್ತಿವೆ. ಇದನ್ನೂ ಓದಿ: ದೆಹಲಿಯಿಂದ ಮುಂಬೈಗೆ ಹೊರಟಿದ್ದ ಆಕಾಶ ವಿಮಾನಕ್ಕೆ ಬಾಂಬ್ ಬೆದರಿಕೆ
ನಗರದ ಹಲವು ಪ್ರದೇಶದಲ್ಲಿ ಮನೆಯೊಳಗೆ ಹಾವು ಪ್ರತ್ಯಕ್ಷವಾಗಿದೆ ಎಂದು ಪಾಲಿಕೆ ವನ್ಯ ಜೀವಿ ಸಂರಕ್ಷಣಾ (Wildlife Coversation) ತಂಡ ಮಾಹಿತಿ ನೀಡಿದೆ. ಬೊಮ್ಮನಹಳ್ಳಿ, ಬ್ಯಾಟರಾಯನಪುರ, ದಾಸರಹಳ್ಳಿ ಕಡೆ ಹಾವುಗಳ ಹಾವಳಿ ಇದೆ. ಇದನ್ನೂ ಓದಿ: ಮಗಳ ಪ್ರೇಮ ವಿವಾಹಕ್ಕೆ ಮನನೊಂದು ತಾಯಿ ನೇಣಿಗೆ ಶರಣು