ರಾಮನಗರ : ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರದಲ್ಲಿ ನೈತಿಕ ಪೊಲೀಸ್ ಗಿರಿ ನಡೆದಿದೆ. ಹಿಂದೂ ಯುವಕ, ಮುಸ್ಲಿಂ ಯುವತಿ ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದಾಗ ಕೆಲ ಮುಸ್ಲಿಂ ಯುವಕರು ಅಡ್ಡಗಟ್ಟಿದ್ದಾರೆ.
ಈ ವೇಳೆ ನೀವು ಯಾರು? ಎಲ್ಲಿಂದ ಬಂದಿದ್ದೀರಿ ಎಂದು ಪ್ರಶ್ನೆಗಳ ಮೇಲೆ ಪ್ರಶ್ನಿಸಿದ್ದಾರೆ. ಇನ್ನು ಈ ನೈತಿಕ ಪೊಲೀಸ್ ಗಿರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಸಂಬಂಧ ಪೊಲೀಸರು, ಓರ್ವನನ್ನು ವಶಕ್ಕೆ ಪಡೆದುಕೊಂಡು ವಿವಾರಣೆ ನಡೆಸಿದ್ದಾರೆ.
ಮುಸ್ಲಿಂ ಯುವತಿಯನ್ನ ಯಾಕೆ ಬೈಕ್ ನಲ್ಲಿ ಕರೆದುಕೊಂಡು ಹೋಗ್ತಿದಿಯಾ ಎಂದು ಯುವಕನಿಗೆ ಅವಾಜ್ ಹಾಕಿ, ಹಿಂದೂ ಯುವಕನ ಜೊತೆ ಸುತ್ತಾಡ್ತಿದ್ದೀಯಾ, ನಿಮ್ಮ ತಂದೆಗೆ ಪೋನ್ ಮಾಡು ಎಂದು ಯುವತಿಗೂ ಬೆದರಿಕೆ ಹಾಕಿದ್ದಾರೆ.

