ಬೆಂಗಳೂರು : ಸಂಸದ ಡಾ. ಮಂಜುನಾಥ್ ಅವರು ಟ್ರಾಫಿಕ್ ನಿಂದ ತಪ್ಪಿಸಿಕೊಳ್ಳಲು ಇಂದು ಜನಸಾಮಾನ್ಯರ ಜೊತೆ ಮೆಟ್ರೋದಲ್ಲಿ ಪ್ರಯಾಣ ಮಾಡಿದ್ದಾರೆ.
ಸಂಸದರಾದ ಡಾ!! ಮಂಜುನಾಥ್ ಅವರು ಮಧ್ಯಾನ 3.30 ಗಂಟೆಗೆ ವೈದ್ಯಾಧಿಕಾರಿಗಳ ತಂಡದೊಂದಿಗೆ ಸೌತ್ ಎಂಡ್ ಸರ್ಕಲ್ ಸಮೀಪ ಸಭೆ ಹಮ್ಮಿಕೊಳ್ಳಲಾಗಿತ್ತು. ಆದರೆ ಇಂದು ಮಾಗಡಿಯಲ್ಲಿ ನೂತನ ಹಾಲು ಉತ್ಪಾದಕರ ಸಂಘದ ಉದ್ಘಾಟನಾ ಕಾರ್ಯಕ್ರಮ ಮುಗಿಸಿ ಬರುವಾಗ ಟ್ರಾಫಿಕ್ ಸಮಸ್ಯೆ ಎದುರಾಯಿತು.
ಗೂಗಲ್ ಮ್ಯಾಪ್ ನಲ್ಲಿ ಸುಮಾರು 4.30ಕ್ಕೆ ತಲುಪುವುದಾಗಿ ತೋರಿತು. ಆದಾಗ್ಯೂ ಸಭೆಗೆ ತಡ ಮಾಡಬಾರದು ಎಂಬ ಸದುದ್ದೇಶದಿಂದ “ತುಮಕೂರು ರಸ್ತೆಯ ಮಾದವರ ಮೆಟ್ರೋ ನಿಲ್ದಾಣದಿಂದ” ನೇರವಾಗಿ ಮೆಟ್ರೋ ಮೂಲಕ ಜನಸಾಮಾನ್ಯರ ಒಟ್ಟಿಗೆ ಪ್ರಯಾಣ ಬೆಳೆಸಿದರು. ಸಮಯಕ್ಕೂ 30 ನಿಮಿಷ ಮುನ್ನವೇ ಮಾನ್ಯ ಸಂಸದರು ತಲುಪಿದರು.

