ಮಂಗಳೂರು: ನಗರದ ಕಂಕನಾಡಿಯಲ್ಲಿ (Kankanadi, Mangaluru) ನಡುರಸ್ತೆಯಲ್ಲಿಯೇ ಕೆಲ ಯುವಕರು ನಮಾಜ್ ಮಾಡಿದ್ದು, ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.
ಯುವಕರು ಮಸೀದಿ ಮುಂಭಾಗ ಇರುವ ರಸ್ತೆಯಲ್ಲಿ ನಮಾಜ್ದ ಮಾಡುತ್ತಿರುವುದನ್ನು ಸ್ಥಳೀಯರು ತಮ್ಮ ತಮ್ಮ ಮೊಬೈಲ್ ಫೋನ್‌ಗಳಲ್ಲಿ ಸೆರೆ ಹಿಡಿದಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಕ್ಕತ್ ವೈಋಲ್ ಆಗಿದೆ. ಇದನ್ನೂ ಓದಿ: ಯಡಿಯೂರಪ್ಪ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ: ಸಂತ್ರಸ್ತೆ ಸಾವು
ಈ ವಿಡಿಯೋ ಕಳೆದ ಎರಡು ಮೂರು ದಿನಗಳಾಗಿದ್ದು, ಸಾರ್ವಜನಿಕರು ಈ ವಿಡಿಯೋ ನೋಡಿ ತೀಔರ ಅಸಮಾಧಾನ ಹೊರಹಾಕಿದ್ದಾರೆ. ಇದರಿಂದಾಗಿ ರಸ್ತೆಯಲ್ಲಿದ್ದ ವಾಹನ ಸಸವಾರರಿಗು ಸಹ ತೊಂದತರೆ ಉಂಟಾಗಿದೆ. ಚಾಲಕರು ತಮ್ಮ ವಾಹನವನ್ನು ಯೂಟರ್ನ್ ತೆಗೆದುಕೊಂಡು ಹೋಗಬೇಕಾದ ಅನಿವಾರ್ಯತೆ ಎದುರಾಗಿತ್ತು. ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಮುಂದುವರಿದ ರೇವಣ್ಣರ ಟೇಂಪಲ್ ರನ್; ಧರ್ಮಸ್ಥಳದ ಮಂಜುನಾಥನಿಗೆ ವಿಶೇಷ ಪೂಜೆ