ಬೆಂಗಳೂರು: ಬೆಂಗಳೂರಿನಲ್ಲಿಐಡಿ, ಅಸಲ್ ಮತ್ತು ಎಂಟಿಆರ್ ಕಂಪನಿಗಳು ಹಿಟ್ಟನ್ನು ಮಾರಾಟ ಮಾಡುತ್ತಿವೆ ಇದೀಗ ಆ ಎಲ್ಲ ಖಾಸಗಿ ಸಂಸ್ಥೆಗಳಿಗೆ ಪೈಪೋಟಿ ನೀಡಲು ನಂದಿನಿ ಸಜ್ಜಾಗಿದೆ.
ಕರ್ನಾಟಕ ಹಾಲು ಮಹಾಮಂಡಳಿ ತನ್ನ ಪ್ರಮುಖ ಡೈರಿ ಬ್ರಾಂಡ್ ನಂದಿನಿ ಅಡಿಯಲ್ಲಿ ಇಡ್ಲಿ ಮತ್ತು ದೋಸೆ ಹಿಟ್ಟಿನ ಪ್ಯಾಕೆಟ್ ಅನ್ನು ಬೆಂಗಳೂರಿನಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಹಿಟ್ಟು 450 ಗ್ರಾಂ ಮತ್ತು 900 ಗ್ರಾಂ ಪ್ಯಾಕ್ ಗಳಲ್ಲಿ ಲಭ್ಯವಾಗಲಿದೆ ಎಂದು ಕೆಎಂಎಫ್ ಮೂಲಗಳು ತಿಳಿಸಿವೆ.
ಅದರ ಪ್ಯಾಕೆಟ್‌ಗಳನ್ನು ನಂದಿನಿ ಸಿದ್ಧಗೊಳಿಸಿರುವುದರ ಚಿತ್ರವನ್ನು ಮನಿ ಕಂಟ್ರೋಲ್ ತನ್ನ ವರದಿಯಲ್ಲಿ ಪ್ರಕಟಿಸಿದೆ. ಅಲ್ಲದೆ ಉತ್ಪನ್ನದ ಬಿಡುಗಡೆಗೆ ಸಿಎಂ ಸಿದ್ದರಾಮಯ್ಯ ಅವರ ಸಮಯವನ್ನು ಕೇಳಿದೆ ಎಂದು ವರದಿ ಮಾಡಿದೆ.
ನಾವು ಬಿಡುಗಡೆಗೆ ಸಿದ್ಧರಿದ್ದೇವೆ. ಸಿಎಂ ಅವರಿಂದ ದಿನಾಂಕ ಕೋರಿದ್ದೇವೆ. ಶೀಘ್ರದಲ್ಲೇ ಮಾರುಕಟ್ಟೆಗೆ ಇಳಿಯಲಿದೆ. ನಮ್ಮ ಪ್ರತಿಸ್ಪರ್ಧಿಗಳಿಗಿಂತ ಕಡಿಮೆ ಬೆಲೆ ನಿಗದಿಪಡಿಸುತ್ತೇವೆ’ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ.ಜಗದೀಶ್ ಅವರ ಹೇಳಿಕೆಯನ್ನು ಮನಿ ಕಂಟ್ರೋಲ್ ಉಲ್ಲೇಖಿಸಿದೆ.
ನಂದಿನಿ ಉಳಿದ ಬ್ರಾಂಡ್‌ಗಳಿಗಿಂತ ಭಿನ್ನವಾಗಲು ಅದರ ಪ್ರೋಟೀನ್ ಬೇಸ್. ಅದರ ಪರಿಮಳ ಮತ್ತು ವಿನ್ಯಾಸ ಹೆಚ್ಚಿಸುತ್ತದೆ ಎಂದು ಅವರು ಹೇಳಿದ್ದಾರೆ. ನೀಲಿ ಬಣ್ಣದ 900 ಗ್ರಾಂ ಹಿಟ್ಟು 18 ಇಡ್ಲಿ ಅಥವಾ 12-14 ದೋಸೆಗಳನ್ನು ತಯಾರಿಸುವ ಭರವಸೆ ನೀಡುತ್ತದೆ. ಆಗಸ್ಟ್‌ನಲ್ಲಿ ಬಿಡುಗಡೆಗೆ ಯೋಜಿಸಲಾಗಿತ್ತು. ವಿವಿಧ ಕಾರಣಗಳಿಂದಾಗಿ ವಿಳಂಬವಾಯಿತು ಎಂದು ಅವರು ಮಾಹಿತಿ ನೀಡಿದ್ದಾರೆ.
ನಂದಿನಿ ಹಾಲು, ಬ್ರೆಡ್, ತುಪ್ಪ, ಬೆಣ್ಣೆ, ಮೊಸರು, ಚೀಸ್, ಮಜ್ಜಿಗೆ ಮತ್ತು ಮೊಸರು ಸೇರಿದಂತೆ ಹಲವಾರು ಉತ್ಪನ್ನಗಳನ್ನು ನೀಡುತ್ತದೆ.