ಬೆಳಗಾವಿ : ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ವಿಚಾರದಲ್ಲಿ ರಾಷ್ಟ್ರೀಯ ವರಿಷ್ಠರು ಒಂದು ವರ್ಷದ ಬಳಿಕ ಒಂದು ನಿರ್ಧಾರಕ್ಕೆ ಬಂದಿದ್ದಾರೆ. ನಮ್ಮದ್ದು ರಾಷ್ಟ್ರೀಯ ಪಕ್ಷ ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ಮಾಜಿ ಸಿಎಂ, ಸಂಸದ ಜಗದೀಶ್ ಶೆಟ್ಟರ್ ಹೇಳಿದರು.
ಮಂಗಳವಾರ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ನಮ್ಮದ್ದು ರಾಷ್ಟ್ರೀಯ ಪಕ್ಷ. ಹೈಕಮಾಂಡ್ ಕಳೆದೊಂದು ವರ್ಷದಿಂದ ರಾಜ್ಯ ಬಿಜೆಪಿಯಲ್ಲಿನ ಬೆಳವಣಿಗೆ ಗಮನಿಸಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ವಿಚಾರದಲ್ಲಿ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದರು.
ರಾಜ್ಯದಲ್ಲಿನ ಕಾಂಗ್ರೆಸ್ ಸರಕಾರ ಗ್ಯಾರಂಟಿ ಯೋಜನೆಯ ಅನುಷ್ಠಾನದಿಂದ ಯಾವುದೇ ಅಭಿವೃದ್ಧಿ ಕೆಲಸವಾಗುತ್ತಿಲ್ಲ. ಹಣಕಾಸಿನ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು
ಗುತ್ತಿಗೆದಾರರ 60 ಸಾವಿರ ಕೋಟಿ ಬಾಕಿ ಬಿಲ್ ಇದೆ. ಇದನ್ನು ಸರಿಪಡಿಸುವ ಬದಲು ಸರಕಾರ ಹಾಲಿನ ದರ ಹಾಗೂ ವಿದ್ಯುತ್ ದರ ಹೆಚ್ಚಳ ಮಾಡಿದ್ದು ಸರಿಯಲ್ಲ ಎಂದರು.
ಹಾಲಿನ ದರ 4 ರೂ. ಹೆಚ್ಚಳ ಮಾಡಿದ್ದು ನೇರವಾಗಿ ಹೈನುಗಾರಿಕೆ ಮಾಡುವವರಿಗೆ ಕೊಡುವುದಾಗಿ ಹೇಳಿರುವ ಸರಕಾರ ಜನಸಾಮಾನ್ಯರ ಮೇಲೆ ಬರೆ ಹಾಕುವ ಬದಲು ಸರಕಾರದ ಖಜಾನೆಯಿಂದ ಕೊಡಲಿ ಎಂದು ಸವಾಲ್ ಹಾಕಿದರು.ರಾಜ್ಯದಲ್ಲಿ ಪ್ರತಿ ನಿತ್ಯ ಬೆಲೆ ಏರಿಕೆಯಿಂದ ಜನರು ಬೇಸತ್ತು ಹೋಗಿದ್ದಾರೆ. ಏ.5 ರಿಂದ ಬಿಜೆಪಿಯಿಂದ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದರು.
ಸಿದ್ದರಾಮಯ್ಯನವರು ಆಡಳಿತದ ಹಿಡಿತ ಕಳೆದುಕೊಂಡಿದ್ದಾರೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿದೆ ಎಂದು ವಾಗ್ದಾಳಿ ನಡೆಸಿದರು.
ಹನಿ ಟ್ರ್ಯಾಪ್ ವಿಚಾರವನ್ನು ಸಚಿವ ಕೆ.ಎನ್.ರಾಜಣ್ಣ ಅವರು ಸದನದಲ್ಲಿಯೇ ಪ್ರಸ್ತಾಪ ಮಾಡಿ. ಗೃಹ ಸಚಿವರಿಗೆ ದೂರು ಕೊಡುತ್ತಾರೆ. ಜವಾಬ್ದಾರಿಯುತ ಸಚಿವರು ಗೃಹ ಸಚಿವರಿಗೆ ದೂರು ಕೊಡುತ್ತಾರೆ ಎಂದರೆ ಜನಸಾಮಾನ್ಯರು ಇನ್ಮೂಂದೆ ಗೃಹ ಸಚಿವರಿಗೆ ದೂರು ಕೊಡಿ ಎಂದು ಕರೆ ನೀಡಿದರು. ಸಚಿವ ರಾಜಣ್ಣ ಅವರು ಹೇಳಿದ ಹಾಗೆ 48 ಶಾಸಕರು ಹನಿ ಟ್ರ್ಯಾಪ್ ಗೆ ಒಳಗಾಗಿದ್ದಾರೆ ಎಂದು ಹೇಳಿದ್ದಾರೆ. ಈ ಪ್ರಕರಣವನ್ನು ರಾಜ್ಯ ಸರಕಾರ ಸಿಬಿಐಗೆ ವಹಿಸಬೇಕೆಂದು ಒತ್ತಾಯಿಸಿದರು.
ವರದಿ ದಯಾನಂದ. ಎಂ.

