ಮುಂಬೈ: ಎರಡು ದಿನಗಳಿಂದ ಕಾಣೆಯಾಗಿದ್ದ ಯುವತಿಯ ಮೃತದೇಹ ರಕ್ತಮಡುವಿನಲ್ಲಿ ಪತ್ತೆಯಾಗಿದ್ದು, ಪೋಷಕರ ಆರೋಪದ ಮೇಲೆ ಕರ್ನಾಟಕ ಮೂಲದ ದಾವೂದ್ ಶೇಖ್ ಎಂಬಾತನನ್ನ ವಶಕ್ಕೆ ಪಡೆದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಶುಕ್ರವಾರ (ಜುಲೈ 26) ರಾತ್ರಿ ಮಹಿಳೆಯೊಬ್ಬಳ ಮೃತದೇಹ ರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದು, ಬೀದಿ ನಾಯಿಗಳು ಅದನ್ನು ತಿನ್ನುತ್ತಿವೆ ಎಂದು ಪೊಲೀಸರಿಗೆ ಕರೆ ಬಂದಿತ್ತು. ಸ್ಥಳಕ್ಕೆ ಬಂದ ಪೊಲೀಸರು ಮೃತದೇಹವನ್ನು ಹೊರತೆಗೆದಿದ್ದಾರೆ. ಅವಳ ಜನನಾಂಗ ಮತ್ತು ಎದೆಯ ಭಾಗ ಸೇರಿದಂತೆ ಖಾಸಗಿ ಭಾಗಗಳನ್ನು ಬರ್ಬರವಾಗಿ ಇರಿಯಲಾಗಿದೆ. ಹಾಗೂ ಆಕೆಯ ಭುಜದ ಮಾಂಸವನ್ನೂ ತಿಂದು ಹಾಕಿದ್ದ ಬೀದಿನಾಯಿಗಳು ಮುಖವನ್ನೂ ವಿರೂಪಗೊಳಿಸಿವೆ. ಯಶಶ್ರಿ ಧರಿಸಿದ ಬಟ್ಟೆ ಹಾಗೂ ಮೈಮೇಲಿದ್ದ ಟ್ಯಾಟೂ ಸಹಾಯದಿಂದ ಯಶಶ್ರೀ ಗುರುತು ಪತ್ತೆ ಹಚ್ಚಲಾಗಿದೆ. ಮರಣೋತ್ತರ ಪರೀಕ್ಷೆಗಾಗಿ ಪೊಲೀಸರು ಆಕೆಯ ಮೃತದೇಹವನ್ನು ವಶಕ್ಕೆ ಪಡೆದಿದ್ದಾರೆ.
ಯಶಶ್ರೀ (22 ) ಮೃತ ಯುವತಿ. ಕರ್ನಾಟಕ ಮೂಲದ ದಾವೂದ್ ಶೇಖ್ ಬಂಧಿತ. ಶುಕ್ರವಾರ (ಜುಲೈ 26) ರಾತ್ರಿ ಮಹಿಳೆಯೊಬ್ಬಳ ಮೃತದೇಹ ರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದು, ಬೀದಿ ನಾಯಿಗಳು ಅದನ್ನು ತಿನ್ನುತ್ತಿವೆ ಎಂದು ಪೊಲೀಸರಿಗೆ ಕರೆ ಬಂದಿತ್ತು. ಸ್ಥಳಕ್ಕೆ ಬಂದ ಪೊಲೀಸರು ಮೃತದೇಹವನ್ನು ಹೊರತೆಗೆದಿದ್ದಾರೆ. ಯಶಶ್ರಿ ಶಿಂಧೆ ಮೃತ ದೇಹವು ನವಿ ಮುಂಬೈನ ಉರಾನ್ ತಾಲೂಕಿನಲ್ಲಿ ವಿರೂಪಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಜುಲೈ 25 ರಂದು ಯಶಶ್ರಿ ಶಿಂಧೆ ಕಾಣೆಯ ಬಗ್ಗೆ ಪೋಷಕರು ಪ್ರಕರಣವನ್ನು ದಾಖಲಿಸಿದ್ದರು. ಹೀಗಾಗಿ ಪೊಲೀಸರು ಪೋಷಕರಿಗೆ ಮಾಹಿತಿ ನೀಡಿದ್ದರು. ಪೊಲೀಸರ ವರದಿಯ ಪ್ರಕಾರ, 2019ರಲ್ಲಿ ಅಪ್ರಾಪ್ತ ವಯಸ್ಸಿನವನಾಗಿದ್ದಾಗ ಯಶಶ್ರೀಗೆ ಕಿರುಕುಳ ನೀಡಿದ ಆರೋಪದ ಮೇಲೆ ಈ ಬಂಧಿಸಲಾಗಿತ್ತು. ಜೈಲಿನಿಂದ ಹೊರಬಂದ ಬಳಿಕ ಕರ್ನಾಟಕದ ತನ್ನ ಊರಿಗೆ ಹೋಗಿದ್ದನು. ನಂತರದಲ್ಲಿಯೂ ಪೋನ್ ಮಾಡಿ ಆರೋಪಿಯೊಂದಿಗೆ ಹಲವಾರು ಗಂಟೆಗಳ ಕಾಲ ಮಾತನಾಡುತ್ತಿದ್ದಳು ಎಂದು ಕರೆ ದಾಖಲೆಗಳು ತಿಳಿಸಿದೆ. ಇನ್ನು ಕೃತ್ಯದ ಸಮಯದಲ್ಲಿ ದಾವೂದ್ ಆ ಸ್ಥಳದಲ್ಲಿ ಇದ್ದ ಎಂಬುದು ಪೊಲೀಸ್ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

