ಮಧ್ಯಾಹ್ನ 2 ಗಂಟೆಯಿಂದ ಸಂಜೆ 5.20ರವರೆಗೆ ಇಂದು ನೀಟ್ (NEET) ಪರೀಕ್ಷೆ ನಡೆಯಲ್ಲಿದೆ. ನೀಟ್ ಪರೀಕ್ಷೆ ವೈದ್ಯ (Medical) ಮತ್ತು ದಂತ (Dental) ವೈದ್ಯಕೀಯ ಪ್ರವೇಶಕ್ಕಾಗಿ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ನೀಟ್ ಪರೀಕ್ಷೆಯನ್ನು ನಡೆಸುತ್ತದೆ.
ಈ ಬಾರಿ ದೇಶದ್ಯಾಂತ ಸುಮಾರು 24 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಣಿ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ ಕೂಡ 1.54 ಲಕ್ಷ ವಿದ್ಯಾರ್ಥಿಗಳು ರಿಜಿಸ್ಟರ್ ಮಾಡಿಕೊಂಡಿದ್ದಾರೆ.
ಮಾರ್ಗಸೂಚಿಗಳೇನು?
ಪ್ರತೀ ವರ್ಷದಂತೆ ಈ ವರ್ಷವೂ ಕಟ್ಟುನಿಟ್ಟಿನ ವಸ್ತ್ರ ಸಂಹಿತೆ ಜಾರಿ ಮಾಡಲಾಗಿದ್ದು, ಪುರುಷರು ಅರ್ಧ ತೋಳಿನ ಶರ್ಟು ಮಾತ್ರ ಧರಿಸಬೇಕು. ಹೆಚ್ಚು ಜೇಬುಗಳು ಇರದ ಪ್ಯಾಂಟ್ ಧರಿಸಬೇಕು.

ಮಹಿಳೇಯರಿಗೆ
ಮಹಿಳೆಯರು ಜೀನ್ಸ್ ಧರಿಸಿ ಹೋಗುವಂತಿಲ್ಲ. ಸಾಮಾನ್ಯ ಡೆನಿಮ್ ಪ್ಯಾಂಟ್ ಧರಿಸಬಹುದು. ಲೆಗಿನ್ಸ್ ಕೂಡ ಧರಿಸುವ ಅವಕಾಶವಿಲ್ಲ. ಜೊತೆಗೆ ಅಭ್ಯರ್ಥಿಗಳು ಯಾವುದೇ ಆಭರಣ ತೊಡುವ ಹಾಗಿಲ್ಲ ಎಂದು ಮಾರ್ಗಸೂಚಿಗಳಲ್ಲಿ ತಿಳಿಸಿದೆ.
ಪರೀಕ್ಷಾರ್ಥಿಗಳು ಯಾವುದೇ ಆಭರಣ ತೊಡುವ ಹಾಗಿಲ್ಲ