ಬೆಂಗಳೂರು: ಬಿಬಿಎಂಪಿ ಪೌರ ಕಾರ್ಮಿಕರ ಸಮವಸ್ತ್ರ ಬದಲಾಗಿದ್ದು ಈಗಿರುವ ಹಸಿರು ಬಣ್ಣದ ಸಮವಸ್ತ್ರದ ಬದಲಾಗಿ ನೀಲಿ ಬಣ್ಣದ ಸಮವಸ್ತ್ರದ ಬೇಡಿಕೆ ಇಡಲಾಗಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರ ಯೂನಿಪಾರ್ಮ್ ಬದಲಾವಣೆಗೆ ಪಟ್ಟು ಹಿಡಿದ್ದಿದ ಪಾಲಿಕೆ ಪೌರ ಕಾರ್ಮಿಕರು ಈಗಾಗಲೇ ಪಾಲಿಕೆ ಅಯುಕ್ತರಿಗೂ ಮಾನವಿ ಮಾಡಿದ್ದರು.
ನೀಲಿ ಬಣ್ಣದ ಸಮವಸ್ತ್ರ ನೀಡುವಂತೆ ಬಿಬಿಎಂಪಿಯ 17 ಸಾವಿರ ಪೌರ ಕಾರ್ಮಿಕರು ಆಗ್ರಹವಾಗಿದ್ದು ಈ ಹಿನ್ನೆಲೆಯಲ್ಲಿ ಪೌರಕಾರ್ಮಿಕರ ಮಾನವಿ ಪುರಸ್ಕರಿಸಿದ ಬಿಬಿಎಂಪಿ ಆಯುಕ್ತರು ಪೌರಕಾರ್ಮಿಕರ ಬಟ್ಟೆ ಬಣ್ಣ ಬದಲಾವನ್ಗೆ ಮುಂದಾಗಿದೆ.
ಇನ್ನೂ ಪಾಲಿಕೆಯಿಂದ ಮಹಿಳ ಪೌರ ಕಾರ್ಮಿಕರಿಗೆ ಎರಡು ಜೊತೆ ಸೀರೆ. ಟೋಪಿ.ಸ್ವೇಟರ್ .ಹಾಗೂ ಕೋಟ್ ಗೆ 4811 ರೂ ಪಿಕ್ಸ್ ಇನ್ನೂ ಪುರುಷ ಪೌರ ಕಾರ್ಮಿಕರಿಗೆ ಟ್ರ್ಯಾಕ್ ಪ್ಯಾಂಟ್. ಟೀ ಶರ್ಟ್. ಟೋಪಿಗೆ 3578 ರೂ ನಿಗದಿಮಾಡಲಾಗಿದೆ.
ಈಗಾಗಲೇ ಟೆಂಡರ್ ಕರೆದಿರೋ ಬಿಬಿಎಂಪಿ ಇದೆ ತಿಂಗಳ 15 ರಿಂದ ಪೌರಕಾರ್ಮಿಕರು ಹೊಸ ಬಣ್ಣದ ಬಟ್ಟೆ ಧರಿಸಿ ರಸ್ತೆಗೆ ಇಳಿಯಲಿದ್ದಾರೆ.