ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಬೆಂಗಳೂರಿನಲ್ಲಿ ಮಳೆ ಅಬ್ಬರಿಸಿದ್ದು ರಾತ್ರಿ ಸುರಿದ ಮಳೆಗೆ ಅಕ್ಷರಶಃ ರಸ್ತೆಗಳು ಕೆರೆಯಂತಾಗಿದ್ದವು. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಭಾರೀ ಮಳೆಯಾಗಿದೆ. ರಾತ್ರಿ 8.30ರ ಸುಮಾರಿಗೆ ಶುರುವಾದ ಅಬ್ಬರದ ಮಳೆಗೆ ಬೆಂಗಳೂರು ಜನಜೀವನ ಅಸ್ತವ್ಯಸ್ತಗೊಂಡಿದೆ.
ಕಾರ್ಪೊರೇಷನ್, ಮೆಜೆಸ್ಟಿಕ್, ಕೆಆರ್ ಮಾರ್ಕೆಟ್, ಕಲಾಸಿಪಾಳ್ಯ, ವಿಲ್ಸನ್ ಗಾರ್ಡನ್ ಸೇರಿದಂತೆ ಬಹುತೇಕ ನಗರದಾದ್ಯಂತ ಅಬ್ಬರದ ಮಳೆ ಸುರಿದಿದೆ. ಪರಿಣಾಮ ಹಲವೆಡೆ ಪ್ರಮುಖ ರಸ್ತೆಗಳಿಗೆ ಮಳೆ ನೀರು ನುಗ್ಗಿದ್ದು, ವಾಹನ ಸವಾರರು ಪರದಾಡುವಂತಾಯ್ತು. ಶಾಂತಿನಗರ ಬಸ್ ನಿಲ್ದಾಣ ಮೆಜೆಸ್ಟಿಕ್ ಬಸ್ ನಿಲ್ದಾಣ ಮುಂಭಾಗ ರಸ್ತೆ ಸಂಪೂರ್ಣ ಜಲಮಯವಾಗಿತ್ತು.
ಬೆಳಗ್ಗೆಯಿಂದಲೇ ಕೆಲವೆಡೆ ಮೋಡ ಕವಿದ ವಾತಾವರಣವಿತ್ತು. ಸಂಜೆಯಾಗುತ್ತಿದ್ದಂತೆ ಒಮ್ಮೆಲೆಗೆ ಸುರಿಯಲಾರಂಭಿಸಿದ ಮಳೆ ತಡರಾತ್ರಿಯವರೆಗೂ ಸುರಿಯಿತು. ಕೆಲವೆಡೆ ನಿರಂತರವಾಗಿ ಸುರಿದರೆ, ಮತ್ತೆ ಕೆಲವು ಬಡಾವಣೆಗಳಲ್ಲಿ ಬಿಟ್ಟು ಬಿಟ್ಟು ಮಳೆಯಾಯಿತು. ಒಟ್ಟಾರೆ ಭಾರೀ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಕೆಲವೆಡೆ ಜೋರು ಮಳೆಯಿಂದಾಗಿ ರಸ್ತೆಯಂಚುಗಳಲ್ಲಿದ್ದ ಭಾರೀ ಮರಗಳು ಧರೆಗುರುಳಿ, ಸಂಚಾರ ದಟ್ಟಣೆ ಉಂಟಾಗಿತ್ತು.
ಕೋರಮಂಗಲ ರಸ್ತೆ ತುಂಬ ನಿಂತಿರುವ ಮಳೆ ನೀರು.ಜಯನಗರ, ಕೆಂಗೇರಿ, ಹೆಬ್ಬಾಳ, ಆರ್.ಟಿ. ನಗರ, ಮತ್ತಿಕೆರೆ, ಸಂಜಯನಗರ, ಮೈಸೂರು ರಸ್ತೆ, ಹಂಪಿನಗರ, ಚಾಮರಾಜಪೇಟೆ, ಚಿಕ್ಕಪೇಟೆ, ಮೆಜೆಸ್ಟಿಕ್, ನಾಗರಬಾವಿ, ಶ್ರೀನಗರ, ವಿದ್ಯಾಪೀಠ, ಉತ್ತರಹಳ್ಳಿ, ಆರ್‌ಆರ್ ನಗರ, ಎಚ್.ಗೊಲ್ಲಹಳ್ಳಿ, ಬೊಮ್ಮನಹಳ್ಳಿ, ಜಯನಗರ, ಜೆ.ಪಿ.ನಗರ, ಬೆಳ್ಳಂದೂರು, ಎಚ್‌ಎಎಲ್ ವಿಮಾನ ನಿಲ್ದಾಣ, ವಿವಿ ಪುರಂ, ಸಂಪಿಗೆನಗರ, ಬಾಣಸವಾಡಿ, ನಂದಿನಿ ಲೇಔಟ್, ಚೊಕ್ಕಸಂದ್ರ, ಪೀಣ್ಯ ಕೈಗಾರಿಕಾ ಪ್ರದೇಶ, ಪುಲಕೇಶಿನಗರ, ಬಸವನಪುರ ಸೇರಿದಂತೆ ಹಲವು ಕಡೆ ಭರ್ಜರಿ ಮಳೆಯಾಗಿದೆ.
ಬೆಂಗಳೂರು ಸೇರಿ ರಾಜ್ಯದ ವಿವಿಧಡೆ ಹೆಚ್ಚಿನ ಪ್ರಮಾಣದ ಮಳೆ
ರಾಜ್ಯದ ವಿವಿಧ ಭಾಗದಲ್ಲಿ ರಾತ್ರಿ ಸುರಿದ ಧಾರಾಕಾರ ಮಳೆ
ಬೆಂಗಳೂರು ನಗರದಲ್ಲಿ 38 ಮಿಲಿ ಮೀಟರ್ ಮಳೆಯಾಗಿದೆ
ಹೆಚ್‌ಎಎಲ್ 3.4 ಮಿ.ಮೀಟರ್, ಎಲೆಕ್ಟ್ರಾನಿಕ್ ಸಿಟಿ 7 ಮಿ.ಮೀ
ದೊಡ್ಡಬಳ್ಳಾಪುರ ಗ್ರಾಮಾಂತರ 14.5 ಮಿಲಿ ಮೀಟರ್ ಮಳೆ
ಮಳೆಯ ಪ್ರಣಾಣದ ಬಗ್ಗೆ ರಾಜ್ಯ ಹವಾಮಾನ ಇಲಾಖೆ ಮಾಹಿತಿ
ಮಂಗಳೂರು 13.8 ಮಿ.ಮೀ., ಗದಗ 4 ಮಿ.ಮೀ. ಮಳೆಯಾಗಿದೆ
ಚಿತ್ರದುರ್ಗ 1.4 ಮಿ.ಮೀ., ಹೊನ್ನಾವರ 13.2 ಮಿಲಿ ಮೀಟರ್
ಬೆಳಗಾವಿ-1.5 ಮಿ.ಮೀ., ಶಿರಾಲಿ-1.2 ಕಾರವಾರ -0.4 ಮಿ.ಮೀ.
ಶಿವಮೊಗ್ಗ ಜಿಲ್ಲೆ ಆಗುಂಬೆ ವ್ಯಾಪ್ತಿಯಲ್ಲಿ 27 ಮಿ.ಮೀ. ಮಳೆಯಾಗಿದೆ
ಕೊಡಗು ಜಿಲ್ಲೆ ಗೋಣಿಕೊಪ್ಪ ವ್ಯಾಪ್ತಿಯಲ್ಲಿ 5 ಮಿ.ಮೀ. ಮಳೆ
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ವ್ಯಾಪ್ತಿಯಲ್ಲಿ 5 ಮಿ.ಮೀ. ಮಳೆ
ಗದಗ 4 ಮಿ.ಮೀ., ಹಾವೇರಿ ಜಿಲ್ಲೆ ಹನುಮನಹಟ್ಟಿ 3.5 ಮಿ.ಮೀ
ಕಲಬುರಗಿ ಜಿಲ್ಲೆ ಅಳಂದ 2 ಮಿ.ಮೀ. ಕಲಬುರಗಿ ನಗರ 1 ಮಿ.ಮೀ
ಚಾಮರಾಜನಗರ ಜಿಲ್ಲೆ ಹರದನಹಳ್ಳಿ ವ್ಯಾಪ್ತಿಯಲ್ಲಿ 0.5 ಮಿ.ಮೀ
ದ.ಕ ಜಿಲ್ಲೆ ಮಂಗಳೂರು ನಗರ ವ್ಯಾಪ್ತಿಯಲ್ಲಿ 2 ಮಿ.ಮೀ. ಮಳೆ
ಮಳೆ ಪ್ರಮಾಣದ ಬಗ್ಗೆ ರಾಜ್ಯ ಹವಾಮಾನ ಇಲಾಖೆ ಮಾಹಿತಿ

