ಬೆಂಗಳೂರು: ಕಾಂಗ್ರೆಸ್ ಪಕ್ಷ ಸೇರಲು ಸಜ್ಜಾಗಿರುವ ಸಿಪಿ ಯೋಗೇಶ್ವರ್ ಅವರಿಗೆ ಟಾಂಗ್ ನೀಡಿದ ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು; ಆ ವ್ಯಕ್ತಿ ಜೇಬಿನಲ್ಲಿ ಐದು ಬಿ ಫಾರಂ ಇಟ್ಟುಕೊಂಡು ತಿರುಗಾಡುತ್ತಿದ್ದಾರೆ ಎಂಬ ಮಾಹಿತಿ ಬಂದಿದೆ ಎನ್ನುವ ಸ್ಪೋಟಕ ಅಂಶವನ್ನು ಬಹಿರಂಗ ಮಾಡಿದರು.ಚನ್ನಪಟ್ಟಣ ಜೆಡಿಎಸ್ ಕಾರ್ಯಕರ್ತರು, ಮುಖಂಡರ ಸಭೆಯಲ್ಲಿ ಮಾತನಾಡಿದರು ಅವರು.
ನಾನು ಅಡ್ಜೆಸ್ಟ್ ಮೆಂಟ್ ರಾಜಕೀಯ ಮಾಡಲ್ಲ. ಒಂದು ಪಕ್ಷದಲ್ಲಿ ಇದ್ದು ಬೇರೆ ಪಕ್ಷಗಳ ಬಿ ಫಾರಂ ಇಟ್ಟುಕೊಂಡು ಓಡಾಡುವುದು ಗೊತ್ತಿಲ್ಲ. ಹಾಗೆ ಮಾಡುವ ಜಾಯಮಾನವೂ ನನ್ನದಲ್ಲ ಎಂದು ಅವರು ಹೇಳಿದರು.
ಇನ್ನು ರಾಜ್ಯದ ಬಿಜೆಪಿ ನಾಯಕರು ಕೂಡ ಯೋಗೇಶ್ವರ್ ಪರ ಬ್ಯಾಟಿಂಗ್ ಮಾಡ್ತಿದ್ದೀರಿ. ಈಗ ಯೋಗೇಶ್ವರ್ ಅವರು ಕಾಂಗ್ರೆಸ್ ಮನೆ ಬಾಗಿಲು ಮುಂದೆ ನಿಂತಿರುವ ಬಗ್ಗೆ ಸುದ್ದಿ ಕೇಳಿ ಬರುತ್ತಿದೆ, ಐದು ಬಿ ಫಾರಂ ಬೇರೆ ತಗೊಂಡು ಇಟ್ಟುಕೊಂಡಿದ್ದಾರಂತೆ ಅವರು ಎಂದು ನಿಖಿಲ್ ಕುಮಾರಸ್ವಾಮಿ ಅವರು ಬೇಸರ ವ್ಯಕ್ತಪಡಿಸಿದರು.
ದೊಡ್ಡ ದೊಡ್ಡ ನಾಯಕರುಗಳು ಚುನಾವಣೆಯಲ್ಲಿ ಸೋತಿಲ್ಲವೇ? ದೇವೇಗೌಡರು ಸೋತಿಲ್ಲವೇ? ನಾನು ಎರಡು ಬಾರಿ ಸೋತಿರಬಹುದು.. ಆದರೆ ಸತ್ತಿಲ್ಲ. ಹೀಗಾಗಿ ಚುನಾವಣೆಗೆ ಹೆದರಿ ಕೂರುವ ಜಾಯಮಾನ ನನ್ನದಲ್ಲ ಎಂದು ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಗುಡುಗಿದರು.
ಕಳೆದ ಎರಡು ದಿನಗಳಿಂದ ಸಿಪಿ ಯೋಗೇಶ್ವರ್ ಅವರಿಗೆ ನೀವು ಒಪ್ಕೊಳೋದಾದ್ರೆ ಜೆಡಿಎಸ್ ಚಿಹ್ನೆಯಡಿ ಸ್ಪರ್ಧೆ ಮಾಡಿ ಅಂತ ಹೇಳಿದ್ದೆವು. ಈ ಹಿಂದೆ ಯಾವುದಾದರೂ ಚಿಹ್ನೆ ಸರಿ ನಾನು ಸ್ಪರ್ಧೆ ಮಾಡುತ್ತೇನೆ ಎಂದು ಭಾಷಣ ಬಿಗಿದಿದ್ದರು ಆದರೆ, ಈಗ ಅವರು ಬೇರೆ ವರಸೆಯ ಹೆಜ್ಜೆಗಳನ್ನು ನೀಡುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ದಿನಗಳ ಹಿಂದೆ ಮಾಧ್ಯಮಗಳಲ್ಲಿ ಅವರ ಹೇಳಿಕೆಗಳನ್ನ ಗಮನಿಸಿದ್ದೇವೆ. ಅವರು ಗೊಂದಲದ ಹೇಳಿಕೆ ನೀಡಿದ್ರು. ಆ ಮೇಲೆ ಕುಮಾರಸ್ವಾಮಿ ಅವರು. ಒಕ್ಕಲಿಗರನ್ನು ತುಳಿಯುತ್ತಿದ್ದಾರೆ ಅಂತೆಲ್ಲಾ ಹೇಳಿದ್ದರು. ಆದರೆ ಎರಡು ದಿನಗಳಿಂದ ಏನೆಲ್ಲ ನಡೆಯುತ್ತಿದೆ ಎನ್ನುವುದು ನನಗೆ ಗೊತ್ತಿದೆ. ಸಿಎಂ, ಡಿಸಿಎಂ, ಸಚಿವರು, ಅಕ್ಕ- ಪಕ್ಕದ ನಾಯಕರು ಸಿ.ಪಿ.ಯೋಗೇಶ್ವರ್ ಗೆ ಟಿಕೆಟ್ ಕೊಡುತ್ತೇವೆ ಎನ್ನುತ್ತಿದ್ದಾರೆ ಎಂದು ತಿಳಿಸಿದರು.
ರಾಮನಗರದಲ್ಲೂ ಕಾಣದ ‘ಕೈ’ವಾಡ
ಮಂಡ್ಯದಲ್ಲಿ ನನಗೆ ಮೊದಲ ಅವಕಾಶ ಕೊಟ್ರು ಆ ಚುನಾವಣೆ ಯಾವ ರೀತಿ ನಡೆದಿದೆ ಅಂತ ಇಡೀ ರಾಜ್ಯದ ಜನತೆಗೆ ಗೊತ್ತು. ರಾಜಕೀಯ ಷಡ್ಯಂತ್ರ ಅಲ್ಲಿಗೆ ಸುಮ್ಮನೆ ಆಗಲಿಲ್ಲ..ನಂತರ ರಾಮನಗರದಲ್ಲಿ ಕಾರ್ಯಕರ್ತರ ಒತ್ತಡದಿಂದ ನಾನು ಸ್ಪರ್ಧೆ ಮಾದಿದೆ. ರಾಮನಗರದಲ್ಲೂ ಕಾಣದ ರಾಜಕೀಯ ಕೈವಾಡ ನಡೆದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮುಂದೆ ಕಾಲವೇ ಉತ್ತರ ಕೊಡುತ್ತೆ
NDA ಮೈತ್ರಿಗೆ ಎಲ್ಲೂ ಸಮಸ್ಯೆ ಆಗಬಾರದು.ಮುಂದೆ ಕಾಲವೇ ಉತ್ತರ ಕೊಡುತ್ತೆ.. ಚರ್ಚೆ ಕೂಡ ಆಗುತ್ತೆ.. ಚನ್ನಪಟ್ಟಣ ಕ್ಷೇತ್ರದಲ್ಲಿ ಒಂದು ತಿಂಗಳಿನಿಂದ ಸಂಚಾರ ಮಾಡುತ್ತಿದ್ದೇನೆ..ಚನ್ನಪಟ್ಟಣ ವಿಚಾರದಲ್ಲಿ ನಾವು ಯಾವತ್ತಾದರೂ ಜೆಡಿಎಸ್ ನಿರ್ಧಾರ ಮಾಡುತ್ತೆ ಅಂತ ಹೇಳಿದ್ನ.? ಚುನಾವಣೆ ನಿಲ್ಲುತ್ತೇನೆ ಅಂತ ಎಲ್ಲಾದ್ರೂ ಹೇಳಿದ್ನಾ..? ಎಂದರು.
ಒಬ್ಬ ವ್ಯಕ್ತಿಯಿಂದ NDA ಮೈತ್ರಿಗೆ ಕಪ್ಪು ಚುಕ್ಕಿ ತರುವ ಕೆಲಸ ಆಗಬಾರದು. ಕೈ ಮುಗಿದು ಕೇಳಿಕೊಳ್ಳುತ್ತೇನೆ. ಪಕ್ಷದ ಕಾರ್ಯಕರ್ತರು ಅಂದ್ರೆ ನಮ್ಮ ಕುಟುಂಬ..ಮುಚ್ಚುಮರೆ ರಾಜಕೀಯ ನಾವು ಮಾಡಲ್ಲ. ನೀವು ಏನ್ ನಿರ್ಧಾರ ತೆಗೆದುಕೊಳ್ಳಿ ಅಂತಿರೋ ಅದನ್ನ ನಾವು ತೆಗೆದುಕೊಳ್ಳುತ್ತೇವೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.