ಬೆಂಗಳೂರು : ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆಯಡಿ ನಿರ್ಮಿಸಿದ್ದ ಕ್ಲಿನಿಕ್‌ಗಳ ಸ್ಥಿತಿ ಅದೋ ಗತಿ ತಲುಪಿದೆ. ನಮ್ಮ ಕ್ಲಿನಿಕ್ ಹೆಸರಿಗಷ್ಟೇ ನಮ್ಮ ಕ್ಲಿನಿಕ್ ಆಗಿದೆ. ಬಡ ಜನರಿಗೆ,ಕಟ್ಟಡ ಕಾರ್ಮಿಕರಿಗೆ, ಕೂಲಿ ಕಾರ್ಮಿಕರಿಗೆಂದು ತೆರದಿದ್ದ ನಮ್ಮ ಕ್ಲಿನಿಕ್ ನಲ್ಲಿ ಒಂದೆಡೆ ಡಾಕ್ಟರ್ ಇಲ್ಲ ಮತ್ತೊಂದು ಕಡೆ ಮೆಡಿಸಿನ್ ಇಲ್ಲ..!
ಮಳೆ ಹೆಚ್ಚು ಸುರಿಯುತ್ತಿರುವುದರಿಂದ ಜನರಿಗೆ ಆರೋಗ್ಯದಲ್ಲಿ ಏರುಪೇರು ಆಗುತ್ತಿರುವುದರಿಂದ ತೋರಿಸಲು ನಮ್ಮ ಕ್ಲಿನಿಕ್ ಕಡೆ ಹೋದ್ರೆ ಡಾಕ್ಟರ್ ಇಲ್ಲ ಎಂದು ಹೇಳಲಾಗುತ್ತಿದೆ. ಇದೀಗ ನಮ್ಮ ಕ್ಲಿನಿಕ್ ಗೆ ಹೇಳೋರಿಲ್ಲಾ ಕೇಳೋರಿಲ್ಲಾ ಎಂಬಂತಾಗಿದೆ.
230 ಕ್ಲಿನಿಕ್ ಪೈಕಿ 15_ರಿಂದ 20 ಕಡೆ ಕ್ಲಿನಿಕ್ ನಲ್ಲಿ ಡಾಕ್ಟರ್ ಇಲ್ಲ. ಕೂಡಲೇ ಡಾಕ್ಟರ್ ವ್ಯವಸ್ಥೆ ಮತ್ತು ಮೆಡಿಸನ್ ವ್ಯವಸ್ಥೆ ಮಾಡುತ್ತೇವೆ ಎನ್ನುತ್ತಿರುವ ಬಿಬಿಎಂಪಿ ವಿಶೇಷ ಆಯುಕ್ತರು. ಒಟ್ಟಿನಲ್ಲಿ ನಮ್ಮ ಕ್ಲಿನಿಕ್ ಹೆಸರಿಗಷ್ಟೇ ಎನ್ನುವಂತಾಗಿದೆ.